Advertisement

ನ್ಯೂಜಿಲ್ಯಾಂಡ್‌ ತಂಡದ ಮೂವರಿಗೆ ಕೋವಿಡ್

11:07 PM May 20, 2022 | Team Udayavani |

ಲಂಡನ್‌: ಇಂಗ್ಲೆಂಡ್‌ ಪ್ರವಾಸಕ್ಕೆ ಆಗಮಿಸಿದ ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ತಂಡಕ್ಕೆ ಕೊರೊನಾ ಕಾಟ ಎದುರಾಗಿದೆ. ಮೂವರ ಫ‌ಲಿತಾಂಶ ಪಾಸಿಟಿವ್‌ ಬಂದಿದೆ.

Advertisement

ಸಸೆಕ್ಸ್‌ ವಿರುದ್ಧದ 4 ದಿನಗಳ ಅಭ್ಯಾಸ ಪಂದ್ಯದ ಆರಂಭಕ್ಕೂ ಮೊದಲು ಕಿವೀಸ್‌ ಈ ಆಘಾತಕ್ಕೆ ಸಿಲುಕಿತು. ಆದರೆ ಉಳಿದವರ ಫ‌ಲಿತಾಂಶ ನೆಗೆಟಿವ್‌ ಬಂದಿದೆ.

ಹೆನ್ರಿ ನಿಕೋಲ್ಸ್‌, ಬ್ಲೇರ್‌ ಟಿಕ್ನರ್‌ ಮತ್ತು ಬೌಲಿಂಗ್‌ ಕೋಚ್‌ ಶೇನ್‌ ಜುರ್ಗೆನ್ಸೆನ್‌ ಅವರ ಕೊರೊನಾ ಟೆಸ್ಟ್‌ ಫ‌ಲಿ ತಾಂಶ ಪಾಸಿಟಿವ್‌ ಬಂದಿದ್ದು, ಇವರೆಲ್ಲ 5 ದಿನಗಳ ಕಾಲ ಐಸೊಲೇಶನ್‌ನಲ್ಲಿ ಇರಲಿದ್ದಾರೆ. ಆದರೆ ಅಭ್ಯಾಸ ಪಂದ್ಯಕ್ಕೆ ಯಾವುದೇ ಅಡ್ಡಿ ಆಗಿಲ್ಲ.

ಸದ್ಯ ಐಪಿಎಲ್‌ ಆಡುತ್ತಿರುವ ನ್ಯೂಜಿಲ್ಯಾಂಡ್‌ ಟೆಸ್ಟ್‌ ಸ್ಪೆಷಲಿಸ್ಟ್‌ಗಳಾದ ಕೇನ್‌ ವಿಲಿಯಮ್ಸನ್‌, ಟ್ರೆಂಟ್‌ ಬೌಲ್ಟ್ ಈ ತಿಂಗಳ ಕೊನೆಯಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next