Advertisement

Chhattisgarh ಮತ್ತೆ ಎನ್‌ಕೌಂಟರ್‌: 3 ನಕ್ಸಲರ ಹತ್ಯೆ

09:15 PM May 25, 2024 | Team Udayavani |

ರಾಯ್ಪುರ: ಛತ್ತೀಸ್‌ಗಡ್‌ದ ದಕ್ಷಿಣ ಬಸ್ತಾರ್‌ ಪ್ರದೇಶದಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ 3 ನಕ್ಸಲರು ಹತರಾಗಿದ್ದಾರೆ. ಬಿಜಾಪುರ ಜಿಲ್ಲೆಯಲ್ಲಿ 2 ಹಾಗೂ ಸುಕ್ಮಾ ಜಿಲ್ಲೆಯಲ್ಲಿ ಒಬ್ಬ ನಕ್ಸಲನನ್ನು ಹತ್ಯೆಗೈಯ್ಯಲಾಗಿದೆ.

Advertisement

ಈ ಪೈಕಿ ಮಾವೋವಾದಿಗಗಳ ಪಶ್ಚಿಮ ಬಸ್ತಾರ್‌ ಪ್ರದೇಶದ ಮುಖ್ಯಸ್ಥ ಪಾಂಡ್ರು ಹಾಗೂ ಭೈರಮ್‌ಗರ್‌ ಪ್ರದೇಶದ ಸದಸ್ಯ ಜೋಗಾ ಕೂಡ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ, ಬಿಜಾಪುರದಲ್ಲಿ ಬುಡಕಟ್ಟು ಜನರ ಮೇಲೆ ಮಾವೋವಾದಿಗಳ ದೌರ್ಜನ್ಯಕ್ಕೆ ಬೇಸತ್ತು ಇಬ್ಬರು ಮಹಿಳೆಯರು ಸೇರಿದಂತೆ 33 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ.

ಇವರಿಗೆ ತಲಾ 25 ಸಾವಿರ ರೂ. ನೀಡಿ, ಪುನರ್ವಸತಿ ಕಲ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next