ಸಂಸತ್‌ನಲ್ಲಿ ಮೋದಿ ಹೇಳ್ತಾರೆ, ಗುಜರಾತಿಗಳಾದ ನಮ್ಮ ಇಡೀ ಶರೀರ ವ್ಯಾಪಾರದ ಮನೋಭಾವದಲ್ಲಿದೆ ಎಂದು. ಇಂತಹ ವ್ಯಾಪಾರಿಯಿಂದ ದೇಶ ಏನನ್ನು ನಿರೀಕ್ಷಿಸಲು ಸಾಧ್ಯ? ಅದಕ್ಕಾಗಿ ಅವರಿಗೆ ರೈತರ ಸಾಲಕ್ಕಿಂತ ವ್ಯಾಪಾರಿಗಳ ಸಾಲ ಮನ್ನಾ ಮಾಡುವುದರಲ್ಲೇ ಖುಷಿ ಎಂದು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಭವಿಷ್ಯ ಮೋದಿ ಕೈಯಲ್ಲಿಲ್ಲ: ಕರ್ನಾಟಕ ಮತ್ತು ಕಾಂಗ್ರೆಸ್ ಭವಿಷ್ಯ ಜನರ ಕೈಯಲ್ಲಿದೆ. ಪ್ರಧಾನಿ ಮೋದಿಮತ್ತು ತಂತ್ರಗಾರ ಅಮಿತ್ ಶಾ ಕೈಯಲ್ಲಿಲ್ಲ. ನಾವು ಜನರ ಆರಾಧಕರು. ಅವರು (ಮೋದಿ, ಶಾ)ಆರೆಸ್ಸೆಸ್ ಪ್ರಚಾರಕರು ಎಂದು ಕಾಂಗ್ರೆಸ್ ಸಂಸದೀಯ ನಾಯಕ ಡಾ|ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಯಾರ ಮೇಲೆ ಜಾಸ್ತಿ ಪ್ರೀತಿ?: ಕಾಂಗ್ರೆಸ್ ಮುಕ್ತ ಮಾಡ್ತಿವಿ ಎಂದು ಮೋದಿ ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಧ್ಯೆ ನಡೆದ ಮಾತುಕತೆ ಜನರಿಗೆ ಗೊತ್ತೇ ಇದೆ. ಸಿದ್ದರಾಮಯ್ಯ ರೈತರ 8000 ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ಆದರೆ, ಮೋದಿ ಅವರಿಗೆ ದೇಶದಲ್ಲಿ ನಡೆದ 16 ಸಾವಿರ ರೈತರ ಆತ್ಮಹತ್ಯೆ ಬಗ್ಗೆ ನೋವಿಲ್ಲ.. 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲು ಹಿಂದೇಟು
ಹಾಕಿದರು. ಲೋಕಸಭೆಯಲ್ಲಿ ಸಚಿವ ಅರುಣ್ ಜೇಟ್ಲಿ ರೈತರ ಸಾಲವಲ್ಲ, ಯಾವುದೇ ಸಾಲ ಮನ್ನಾ ಮಾಡುವುದು ಒಳ್ಳೆಯದಲ್ಲ ಎಂದು ಹೇಳಿದ್ದರು. ಆದರೆ, ಮೋದಿ ಅವರು ಕಾರ್ಪೋರೇಟ್ ವಲಯದ ದೊಡ್ಡ ಬಂಡವಾಳದಾರರ 6 ಲಕ್ಷ ಕೋಟಿ ರೂ. ಮನ್ನಾ ಮಾಡಿದ್ದಾರೆ. ಹಾಗಿದ್ದರೆ ಇವರಿಗೆ ಯಾರ ಮೇಲೆ ಜಾಸ್ತಿ ಪ್ರೀತಿ ಇದೆ ಎನ್ನುವುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು ಎಂದರು. ಪಾಟೀಲ ತಡ ಮಾಡಿದ್ರು: ಬಿ.ಆರ್. ಪಾಟೀಲ ಅವರು ಕಾಂಗ್ರೆಸ್ ಬರುವುದು ತಡವಾಯಿತು ಎಂದು ಪಾಟೀಲ ಕಾಲೆಳೆದ ಖರ್ಗೆ, ಅವರೊಬ್ಬ ಕೆಲಸಗಾರ. ಹೀಗಾಗಿ, ತಡವಾಗಿ ಬಂದ್ರೂ ಮುಖ್ಯಮಂತ್ರಿಗಳಿಂದ ವರವಾಗಿ ಸಾಕಷ್ಟು ಅನುದಾನ ಪಡೆದ್ದಿದಾರೆ ಎಂದು ಚಟಾಕಿ
ಹಾರಿಸಿದರು.ಶಾಸಕರು ಜನಪರವಾದ ಕಾಳಜಿ ಉಳ್ಳವರಾಗಿರಬೇಕು. ಅದರಂತೆ ಮುಖ್ಯಮಂತ್ರಿಗಳು ಜನಾನುರಾಗಿ ಆಗಿರಬೇಕು. ಆಗಲೇ ಅಂದುಕೊಂಡ ಎಲ್ಲ ಕೆಲಸಗಳನ್ನು ಕಾಲಮಿತಿಯಲ್ಲಿ ಮಾಡಿ ಜನರಿಗೆ ಅನುಕೂಲ ಕಲ್ಪಿಸಲು ಸಾಧ್ಯ. ಕೆರೆ ತುಂಬುವ ಯೋಜನೆಗೆ ಆಳಂದಕ್ಕೆ 600 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ನೀಡಿದ್ದಾರೆ. ಅದನ್ನು ಬಿ.ಆರ್. ಪಾಟೀಲ ಬೆನ್ನು ಬಿದ್ದು ಮಾಡಿಸಿಕೊಂಡಿದ್ದಾರೆ. ಅಂತಹವರನ್ನು ಆಳಂದ ಜನ ಮುಂದಿನ ಚುನಾವಣೆಯಲ್ಲಿ ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ ಎಂದರು.
Advertisement