ಮಂಗಳೂರು: ಕೋವಿಡ್-19 ಸೋಂಕು ಜಿಲ್ಲೆಯ ಮತ್ತೆ ಮೂವರ ದೇಹ ಸೇರಿದೆ. ಜಿಲ್ಲೆಯ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೇ ಏರುತ್ತಲೇ ಇರುವುದು ಜಿಲ್ಲಾಡಳಿತದ ಚಿಂತೆಗೆ ಕಾರಣವಾಗಿದೆ.
ಸೋಂಕಿತ ಸಂಖ್ಯೆ 390ರ ಸಂಪರ್ಕದಿಂದ ಜಿಲ್ಲೆಯ ಬಂಟ್ವಾಳದ 16 ವರ್ಷದ ಬಾಲಕಿಗೆ ಸೋಂಕು ತಾಗಿರುವುದು ದೃಢವಾಗಿದೆ.
ಮಂಗಳೂರಿನಲ್ಲಿ ಇಬ್ಬರಿಗೆ ಸೋಂಕು ತಾಗಿರುವುದು ದೃಢವಾಗಿದೆ. ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕ ಹೊಂದಿದ ಮಹಿಳೆಯಿಂದ ಇಬ್ಬರಿಗೆ ವೈರಸ್ ತಾಗಿರುವುದು ಧೃಢವಾಗಿದೆ.
ಸೋಂಕಿತ ಸಂಖ್ಯೆ 536 ರೋಗಿಯಿಂದ 11 ವರ್ಷದ ಬಾಲಕಿ ಮತ್ತು35 ವರ್ಷದ ಮಹಿಳೆಗೆ ಕೋವಿಡ್-19 ಸೋಂಕು ಪಾಸಿಟಿವ್ ಆಗಿದೆ. ಇವರಿಬ್ಬರೂ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೋಳೂರು ನಿವಾಸಿಗಳಾಗಿದ್ದಾರೆ.
ಜಿಲ್ಲೆಯಲ್ಲಿ ಸದ್ಯ13 ಕೋವಿಡ್-19 ಸೋಂಕು ಪಾಸಿಟಿವ್ ಪ್ರಕರಣಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.