ಹೈದರಾಬಾದ್: ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ತನ್ನ ಅದ್ಭುತ ಬ್ಯಾಟಿಂಗ್ ವೈಭವದಲ್ಲಿ ಕ್ಲೀನ್ ಸ್ವೀಪ್ ಮೂಲಕ ಗೆದ್ದ ಭಾರತೀಯ ತಂಡವು ನಾಳೆಯಿಂದ ನ್ಯೂಜಿಲ್ಯಾಂಡ್ ತಂಡ ಸವಾಲಿಗೆ ಉತ್ತರಿಸಲು ಸಜ್ಜಾಗಿದೆ.
ಅನುಭವಿ ವೇಗಿಗಳಾದ ಟಿಮ್ ಸೌಥಿ ಮತ್ತು ಟ್ರೆಂಟ್ ಬೌಲ್ಟ್ ಅವರ ಅನುಪಸ್ಥಿತಿಯಲ್ಲಿ ನ್ಯೂಜಿಲ್ಯಾಂಡ್ ಆಡಲಿರುವ ಕಾರಣ ಭಾರತ ಶ್ರೇಷ್ಠ ನಿರ್ವಹಣೆ ನೀಡುವ ಸಾಧ್ಯತೆಯಿದೆ.
ಬಾಂಗ್ಲಾದೇಶ ವಿರುದ್ಧದ ಸರಣಿ ವೇಳೆ ಅತೀವೇಗದ ದಿÏಶತಕ ಬಾರಿಸಿದ್ದ ಇಶಾನ್ ಕಿಶನ್ ಅವರು ನ್ಯೂಜಿಲ್ಯಾಂಡ್ ವಿರುದ್ಧದ ಸರಣಿ ವೇಳೆ ಆಟವಾಡುವ ಬಳಗಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಯಿದೆ. ಅವರನ್ನು ಶ್ರೀಲಂಕಾ ಸರಣಿ ವೇಳೆ ಹೊರಗಿಟ್ಟಿರುವುದು ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೆ ವೈಯಕ್ತಿಕ ಕಾರಣಗಳಿಗಾಗಿ ಕೆಎಲ್ ರಾಹುಲ್ ಈ ಸರಣಿಯಿಂದ ಹೊರ ಗುಳಿದ ಕಾರಣ ಕಿಶನ್ ತಂಡಕ್ಕೆ ಮರಳಿದ್ದಾರೆ. ಆದರೆ ಅವರು ಇನ್ನಿಂಗ್ಸ್ ಆರಂಭಿಸುವ ಸಾಧ್ಯೆತೆಯಿಲ್ಲ.
ಇದೇ ವೇಳೆ ಸ್ಥಿರ ನಿರ್ವಹಣೆ ನೀಡುತ್ತ ಬಂದಿರುವ ಶುಭ್‌ಮನ್ ಗಿಲ್ ಅವರನ್ನು ನಾಯಕ ರೋಹಿತ್ ಶರ್ಮ ಜತೆ ಇನ್ನಿಂಗ್ಸ್ ಆರಂಭಿ ಸಲು ಆಯ್ಕೆ ಮಾಡಲಾಗಿತ್ತು. ಶ್ರೀಲಂಕಾ ವಿರುದ್ಧ ಅವರು 70, 21 ಮತ್ತು 116 ರನ್ ಬಾರಿಸಿ ಗಮನ ಸೆಳೆದಿ ದ್ದಾರೆ. ಆರಂಭಿಕ ಜೋಡಿಯಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಯಿಲ್ಲ. ಆದರೆ ರಾಹುಲ್ ಅವರ ಅನುಪಸ್ಥಿತಿಯಿಂದಾಗಿ ಕಿಶನ್ ವಿಕೆಟ್ ಹಿಂದುಗಡೆ ಕರ್ತವ್ಯ ನಿಭಾಯಿಸುವ ಸಾಧ್ಯತೆಯಿದೆ.
Related Articles
ಶ್ರೇಯಸ್ ಅಯ್ಯರ್ ಇಲ್ಲ
ಬೆನ್ನು ನೋವಿನಿಂದಾಗಿ ಶ್ರೇಯಸ್ ಅಯ್ಯರ್ ಈ ಸರಣಿಯಿಂದ ಹೊರ ಗುಳಿಯಲಿದ್ದಾರೆ. ಅವರ ಅನುಪಸ್ಥಿತಿ ಯಿಂದಾಗಿ ಸೂರ್ಯಕುಮಾರ್ ಯಾದವ್ ಅವರಿಗೆ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಲು ಇದೊಂದು ಒಳ್ಳೆಯ ವೇದಿಕೆಯಾಗಲಿದೆ. ಅವರ ಸಹಿತ ಕೊಹ್ಲಿ, ಹಾರ್ದಿಕ್, ಇಶಾನ್ ಕಿಶನ್ ಮಧ್ಯಮ ಕ್ರಮಾಂಕದಲ್ಲಿ ತಂಡ ವನ್ನು ಆಧರಿಸಲಿದ್ದಾರೆ. ಶ್ರೀಲಂಕಾ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿ ಸಿರುವ ಕೊಹ್ಲಿ ಇಲ್ಲಿಯೂ ಮಿಂಚುವ ಸಾಧ್ಯತೆಯಿದೆ. ಶ್ರೇಯಸ್ ಅವರ ಬದಲಿಗೆ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ನಿರ್ವಹಣೆ ನೀಡುತ್ತಿರುವ ರಜತ್ ಪಟಿದಾರ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಬೌಲಿಂಗ್ ಪಡೆ
ರಾಹುಲ್ ಅವರಂತೆ ಅಕ್ಷರ್ ಪಟೇಲ್ ಕೂಡ ಈ ಸರಣಿಯಲ್ಲಿ ಆಡುತ್ತಿಲ್ಲ. ಅವರ ಬದಲಿಗೆ ಶಾಬಾಜ್ ಅಹ್ಮದ್ ತಂಡಕ್ಕೆ ಸೇರಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧ ಉತ್ತಮ ನಿರ್ವಹಣೆ ನೀಡಿದ ಮೊಹಮ್ಮದ್ ಸಿರಾಜ್ ಸಹಿತ ಶಮಿ, ಉಮ್ರಾನ್ ಮಲಿಕ್ ತಂಡದ ವೇಗದ ಶಕ್ತಿಯಾಗಿದ್ದರೆ ಹಾರ್ದಿಕ್ ಆಲ್‌ರೌಂಡರ್ ಆಗಿ ತಂಡವನ್ನು ಆಧರಿ ಸಲಿದ್ದಾರೆ. ಸ್ಪಿನ್ ದಾಳಿಗೆ ಕುಲದೀಪ್ ಅಥವಾ ಚಹಲ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.
ನ್ಯೂಜಿಲ್ಯಾಂಡ್ ಬಲಿಷ್ಠ
ತಂಡದಲ್ಲಿ ಪ್ರಮುಖ ಆಟಗಾರ ರಾದ ಕೇನ್ ವಿಲಿಯಮ್ಸನ್, ಸೌಥಿ, ಬೋಲ್ಟ್ ಇಲ್ಲದಿದ್ದರೂ ನ್ಯೂಜಿ ಲ್ಯಾಂಡ್ ತಂಡ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಪಾಕಿಸ್ಥಾನ ವಿರುದ್ಧ ಆಡಿದ ನ್ಯೂಜಿಲ್ಯಾಂಡ್ ತಂಡ ಇಲ್ಲಿಗೆ ಆಗ ಮಿಸಿದೆ. ಆರಂಭಿಕ ಫಿನ್ ಅಲೆನ್, ಗ್ಲೆನ್ ಫಿಲಿಪ್ಸ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಫಿಲಿಪ್ಸ್ ಪಾಕ್ ವಿರುದ್ಧದ ನಿರ್ಣಾಯಕ ಪಂದ್ಯದಲಿ ಏಕಾಂಗಿಯಾಗಿ ಹೋರಾಡಿ ಪಂದ್ಯ ಜಯಿಸಿದ್ದರು.
ಸಂಭಾವ್ಯ ತಂಡಗಳು
ಭಾರತ:
ರೋಹಿತ್ ಶರ್ಮ (ನಾಯಕ), ಶುಭ್‌ಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಸ್‌ಭರತ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.
ನ್ಯೂಜಿಲ್ಯಾಂಡ್:
ಟಾಮ್ ಲಾಥಮ್ (ನಾಯಕ), ಫಿನ್ ಅಲೆನ್, ಡಾಗ್ ಬ್ರೇಸ್‌ವೆಲ್, ಮೈಕಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೋನ್ ಕಾನ್ವೆ, ಜಾಕಬ್ ಡುಫಿ, ಲೂಕಿ ಫರ್ಗ್ಯುಸನ್, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಹೆನ್ರಿ ಶಿಪ್ಲೆ, ಐಶ್ ಸೋಧಿ, ಬ್ಲೇರ್ ಟಿಕ್ನರ್.