ಬಳ್ಳಾರಿ: ನಗರದ 5ನೇ ವಾರ್ಡ್ ವ್ಯಾಪ್ತಿಯ ಕೊಂಡಾಪುರ ಗುಡಿಸಲಿಗೆ ಬೆಂಕಿ ಆಕಸ್ಮಿಕದಿಂದ ಮೂರು ಗುಡಿಸಿಲುಗಳು ಸಂಪೂರ್ಣ ಸುಟ್ಟುಹೋಗಿರುವ ಘಟನೆ ಬುಧವಾರ ರಾತ್ರಿ ಸಂಭವಿಸಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ. ಬೆಂಕಿ ಅವಘಡ ಕುರಿತ
ವಿಷಯ ತಿಳಿದ ಕೂಡಲೇ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಅಗ್ನಿಶಾಮಕ ವಾಹನವನ್ನು ಕಳುಹಿಸಿ ಬೆಂಕಿ ನಂದಿಸುವ ವ್ಯವಸ್ಥೆ ಮಾಡಿದರು. ನಂತರ ಗುರುವಾರ ಬೆಳಗ್ಗೆ ಶಾಸಕ ಜಿ. ಸೋಮಶೇಖರ್ ರೆಡ್ಡಿ ಅವರು ಸಹಾಯಕ ಆಯುಕ್ತರಮೇಶ ಕೋನರೆಡ್ಡಿ, ತಹಸೀಲ್ದಾರ್ ರೆಹಮಾನ್ ಪಾಶಾ, ಕಂದಾಯ ನಿರೀಕ್ಷಕರು ಮತ್ತು ಪೊಲೀಸ್ ಅಧಿ ಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಂಕಿ ಅವಘಡದಲ್ಲಿ ಹಣ, ಅಪಾರ ದವಸ ಧಾನ್ಯಗಳು, ಬಟ್ಟೆಗಳು ಹಾಗೂ ಇನ್ನಿತರ ಗೃಹ ಉಪಯೋಗಿ ವಸ್ತುಗಳು ಭಸ್ಮವಾಗಿವೆ. ಹೊಲದಲ್ಲಿ ಬೆಳೆದಿದ್ದ ದವಸಧಾನ್ಯ ಮಾರಾಟದಿಂದ ಬಂದಿದ್ದ 2.50 ಲಕ್ಷ ರೂ. ಹಣ ಜಮೀನಿನ ಮಾಲೀಕನಿಗೆ ನೀಡಲು ಮನೆಯಲ್ಲಿಟ್ಟಿದ್ದು, ಈ ಹಣವು ಬೆಂಕಿ ಅವಘಡದಲ್ಲಿ ಸುಟ್ಟುಹೋಗಿದೆ.
ಇದನ್ನೂ ಓದಿ:ಹಸಿ ಕಸದಿಂದ ಗೊಬ್ಬರ ತಯಾರಿಕೆ: ಗೆಹ್ಲೋಟ್
ಶಾಸಕ ಸೋಮಶೇಖರ್ ರೆಡ್ಡಿ, ಜಿಲ್ಲಾ ಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಸೂಚಿಸಿದರು.ಇದೇ ವೇಳೆ ಶಾಸಕರು ಸಂತ್ರಸ್ತರಿಗೆ ಧೈರ್ಯ ತುಂಬಿ, ತಾತ್ಕಾಲಿಕವಾಗಿ ರೇಷನ್, ಬಟ್ಟೆ ಹಾಗೂ ಹಣ ನೀಡಿ ತಾತ್ಕಾಲಿಕವಾಗಿ ಪರಿಹಾರ ವ್ಯವಸ್ಥೆ ಮಾಡಿದರು ಮತ್ತು ಸ್ಲಂ ಬೋರ್ಡ್ ವತಿಯಿಂದ ಸಂತ್ರಸ್ತ 3 ಕುಟುಂಬಗಳಿಗೆ ಮನೆಯನ್ನು ಕಟ್ಟಿ ಕೊಡುವ ಭರವಸೆ ನೀಡಿದರು.
ಮುಖಂಡ ಪಾಲಣ್ಣ ಸಂತ್ರಸ್ತರಿಗೆ ದವಸಧಾನ್ಯಗಳ ವ್ಯವಸ್ಥೆ ಮಾಡಿದರು. ಈ ಸಂದರ್ಭದಲ್ಲಿ ರಾಬಕೊ ಹಾಲುಒಕ್ಕೂಟದ ನಿರ್ದೇಶಕ ವೀರಶೇಖರರೆಡ್ಡಿ, ಮುಖಂಡರಾದ ಶ್ರೀನಿವಾಸ ಮೋತ್ಕರ್, ಕೃಷ್ಣಾರೆಡ್ಡಿ ಇನ್ನಿತರೆ ಮುಖಂಡರು, ವಿವಿಧ ಇಲಾಖೆಗಳ ಅಧಿ ಕಾರಿಗಳು ಇದ್ದರು.