Advertisement

ನಿಂತಿದ್ದ ಟ್ರಕ್‌ ಗೆ ಬೈಕ್‌ ಢಿಕ್ಕಿ: ಮೂವರೂ ಸವಾರರು ಸ್ಥಳದಲ್ಲೇ ಸಾವು

04:42 PM Jan 06, 2017 | Team Udayavani |

ಮೊರೇನಾ, ಮಧ್ಯಪ್ರದೇಶ : ನಿಂತಿದ್ದ ಟ್ರಕ್‌ ಗೆ ಬೈಕ್‌ ಢಿಕ್ಕಿಯಾಗಿ ಮೂವರು ಸವಾರರು ದಾರುಣವಾಗಿ ಮೃತಪಟ್ಟ ಘಟನೆ ನಿನ್ನೆ ಗುರುವಾರ ತಡ ರಾತ್ರಿ ಇಲ್ಲಿ ಸಂಭವಿಸಿದೆ.

Advertisement

ಮೃತರನ್ನು ಭಿಂಡ್‌ ಜಿಲ್ಲೆಯ ಚರಣ್‌ ಸಿಂಗ್‌ ಜಾಟ್‌ 32, ಉತ್ತರ ಪ್ರದೇಶದ ಜಿತು ಚೌಧರಿ 28 ಮತ್ತು ಚಂದ್ರಪಾಲ್‌ ಜಾಟ್‌ 42 ಎಂದ ಗುರುತಿಸಲಾಗಿದೆ.

ಅತ್ಯಂತ ವೇಗವಾಗಿ ಬೈಕ್‌ ಚಲಾಯಿಸುತ್ತಿದ್ದ ಇವರು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀರಾಮ ಕಾಲೇಜಿನ ಸಮೀಪ ನಿಂತಿದ್ದ ಟ್ರಕ್‌ಗೆ ಢಿಕ್ಕಿ ಹೊಡೆದರು. ಪರಿಣಾವಾಗಿ ಎಲ್ಲರೂ ಸ್ಥಳದಲ್ಲೇ ಮೃತಪಟ್ಟರು ಎಂದು ಬಾನ್‌ಮೋರೆ ಎಸ್‌ಐ ಬಾದಾಮ್‌ ಸಿಂಗ್‌ ತಿಳಿಸಿದ್ದಾರೆ. 

ಬೈಕಿನಲ್ಲಿದ್ದವರು ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ಮಥುರಾ ಕಡೆಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.  

Advertisement

Udayavani is now on Telegram. Click here to join our channel and stay updated with the latest news.

Next