ಮಲ್ಪೆ: ವಿದೇಶಗಳಲ್ಲಿ ಹೆಚ್ಚು ಪ್ರಚಾರದಲ್ಲಿರುವ ಕ್ಲಿಪ್ ಡೈವ್, ಫ್ಲೆ„ ಬೋರ್ಡ್, ಸ್ಕೂಬಾ ಡೈವ್ ಮೊದಲಾದ ಸಾಹಸ ಕ್ರೀಡೆಗಳ ಅನುಭವ ಪಡೆಯಬಹುದಾದ ವ್ಯವ ಸ್ಥೆಯನ್ನು ಮಲ್ಪೆ ಬೀಚ್ ಉತ್ಸವ ದಲ್ಲಿ ಕಲ್ಪಿಸಲಾಗಿದೆ. ಈ ಸಾಹಸ ಕ್ರೀಡೆ ಗಳನ್ನು ನಿರಂತರವಾಗಿ ನಡೆಸಲಾಗುವುದು.
ಸೈಂಟ್ ಮೇರಿಸ್ ದ್ವೀಪದಲ್ಲಿ ರಾಜ್ಯ ದಲ್ಲೇ ಮೊದಲು ಅತ್ಯಂತ ಸುರಕ್ಷಿತ ಕ್ಲಿಪ್‌ಡೈವ್ (ಬಂಡೆ ಮೇಲಿಂದ ಸಮುದ್ರಕ್ಕೆ ಹಾರುವುದು) ಸೌಲಭ್ಯ ಕಲ್ಪಿಸಲಾಗಿದೆ. ಸಮುದ್ರದ ನೀರಿನ ಮಟ್ಟದಿಂದ 25 ಅಡಿ ಮೇಲಿಂದ ಹಾರಬಹುದಾದ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ.
ಸ್ಲಾಕ್‌ಲೈನ್‌ವಾಕ್(ಹಗ್ಗದ ಮೇಲಿನ ನಡಿಗೆ)ಗೂ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಲಿದೆ. ಬೀಚ್‌ನಲ್ಲಿ ಫ್ಲೈಬೋರ್ಡ್ ವ್ಯವಸ್ಥೆ ಯಿದೆ. ಇದು ಮುಂದಿನ ಕೆಲವು ದಿನಗಳವರೆಗೂ ಇಲ್ಲಿಯೇ ಇರಲಿದೆ ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದರು. ಈ ವೇಳೆ ಸುದೇಶ್ ಶೆಟ್ಟಿ, ಮಂಜುನಾಥ ಕೊಳ ಮೊದಲಾದವರು ಉಪಸ್ಥಿತರಿದ್ದರು.
ಸ್ಪರ್ಧೆಯನ್ನು ಜಿಲ್ಲಾಧಿಕಾರಿ ಕೂರ್ಮಾ ರಾವ್ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ವಾಟರ್ ನ್ಪೋರ್ಟ್ಸ್ ವಿಷಯದಲ್ಲಿ ಏಷಿಯನ್ ಚಾಂಪಿಯನ್‌ಶಿಪ್ ನಡೆಸಲು ಸಿದ್ಧರಿದ್ದೇವೆ ಎಂದರು.
ಎಸ್‌ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಜಿಲ್ಲೆಗೊಂದು ಸಾಹಸ ಕ್ರೀಡಾ ಅಕಾಡೆಮಿ ಬರಬೇಕು ಎಂದರು.
ಕೆನರಾ ಬ್ಯಾಂಕ್ ಜನರಲ್ ಮ್ಯಾನೇ ಜರ್ ರಾಮ ನಾಯ್ಕ ಮಾತ ನಾಡಿ, ಉಡುಪಿಯ ಕರಾವಳಿ ಪ್ರದೇಶ ಅಭಿವೃದ್ಧಿಯ ಜತೆಗೆ ಪ್ರವಾ ಸೋದ್ಯಮಕ್ಕೆ ವ್ಯವಸ್ಥಿತವಾಗಿ ಬಳಸಿ ಕೊಳ್ಳಬೇಕು. ವಾಟರ್ ನ್ಪೋರ್ಟ್ಸ್ಗೆ ಹೆಚ್ಚಿನ ಆದ್ಯತೆ ಸಿಗಬೇಕು ಎಂದರು.
Related Articles
ಕರ್ನಾಟಕ ಸ್ವಿಮ್ಮಿಂಗ್ ಅಸೋಸಿ ಯೇಶನ್ ಅಧ್ಯಕ್ಷ ಗೋಪಾಲ್ ಬಿ. ಹೊಸೂರು, ಪೌರಾಯುಕ್ತ ಡಾ| ಉದಯ ಕುಮಾರ್ ಶೆಟ್ಟಿ, ಯುವ ಸಬಲೀಕರಣ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್ ಶೆಟ್ಟಿ, ಅಸೋಸಿ ಯೇಶನ್‌ನ ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.
ಫಲಿತಾಂಶ
ಈಜು 10 ಕಿ.ಮೀ. ಮಹಿಳಾ ವಿಭಾಗ-ಕರ್ನಾಟಕದ ಪ್ರೀತಾ ವಿ. (ಪ್ರ), ನಿಖೀತಾ ಎಸ್.ವಿ. (ದ್ವಿ) ಹಾಗೂ
ಪಶ್ಚಿಮ ಬಂಗಾಲದ ದ್ವಿಪನ್ವಿತ ಮಂಡಲ್ (ತೃ). 7.5 ಕಿ.ಮೀ. ವಿಭಾಗ- ಕರ್ನಾಟಕದ ಅಸ್ಮಿತಾ ಚಂದ್ರ (ಪ್ರ), ಮಹಾರಾಷ್ಟ್ರದ ಅನುಷ್ಕಾ ಪಾಟೀಲ್ (ದ್ವಿ) ಹಾಗೂ ತಮಿಳುನಾಡಿನ ಮಹಾಲಕ್ಷ್ಮೀ (ತೃ). 10 ಕಿ.ಮೀ. ಪುರುಷರ ವಿಭಾಗ-ಪ. ಬಂಗಾಲದ ಪ್ರತ್ಯಯ್ ಭಟ್ಟಾಚಾರ್ಯ (ಪ್ರ), ಕರ್ನಾಟಕದ ಲಿತೇಶ್ ಎಸ್. ಗೌಡ (ದ್ವಿ) ಹಾಗೂ ಮಹಾರಾಷ್ಟ್ರದ ಸೋಂಪನ್ ಸೆಲೋರ್ (ತೃ). 7.5 ಕಿ.ಮೀ. ವಿಭಾಗದಲ್ಲಿ ಕರ್ನಾಟಕದ ಪ್ರಶಾಂನ್ಸ್ ಎಚ್.ಎಂ. (ಪ್ರ), ಮೊಹ್ಮದ್ ಅಬ್ದುಲ್ ಬಶೀತ್ (ದ್ವಿ) ಹಾಗೂ ಛತ್ತೀಸ್‌ಗಢದ ಆಯನ್ ಅಲಿಖಾನ್ ತೃತೀಯ ಸ್ಥಾನ ಗಳಿಸಿದ್ದಾರೆ.
150 ಈಜುಪಟುಗಳು
ನ್ಯಾಶನಲ್ ಓಪನ್ ವಾಟರ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ ಕೆನರಾ ಬ್ಯಾಂಕ್ ಸಹಕಾರದೊಂದಿಗೆ ಮಲ್ಪೆ ಕಡಲ ಕಿನಾರೆಯಲ್ಲಿ ಶನಿವಾರ ಬೆಳಗ್ಗೆ ನಡೆಯಿತು. 150 ಈಜುಪಟುಗಳು ಮುಕ್ತ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಅನುಭವಿಗಳ ತಂಡ
ಸೈಂಟ್‌ಮೇರಿಸ್‌ನಲ್ಲಿ ಸಾಹಸ ಕ್ರೀಡೆಗೆ ತರಬೇತಿ ನೀಡಲು ರಾಷ್ಟ್ರೀಯ ಮಟ್ಟದ ಈಜು ತರಬೇತುದಾರರಾದ ಪಾರ್ಥ ವಾರಾಣಸಿ, ಗೋಕುಲ್, ಯಾದವ್ ಸೇರಿದಂತೆ ಮಹಿಳಾ ತರಬೇತುದಾರರು ಇದ್ದಾರೆ.
ಗಾಳಿಪಟ ಉತ್ಸವ
ಬೀಚ್‌ನಲ್ಲಿ ಶನಿವಾರ ಸಂಜೆ ಗಾಳಿಪಟ ಉತ್ಸವ ಹಾಗೂ ಕುನಾಲ್ ಗಾಂಜಾವಾಲ ಅವರ ತಂಡದ ಸಂಗೀತವು ಮೆರುಗು ನೀಡಿತು. ಮಕ್ಕಳಿಂದ ಹಿಡಿದು ವಿವಿಧ ವಯೋಮಾನದವರು ಗಾಳಿಪಟ ಹಾರಿಸಿ ಖುಷಿಪಟ್ಟರು. ವಿವಿಧ ಸಾಹಸ ಕ್ರೀಡೆಗಳು, ಕಯಾ ಕಿಂಗ್, ತ್ರೋಬಾಲ್, ಕಬಡ್ಡಿ, ಆಹಾರ ಮೇಳ ವಿಶೇಷವಾಗಿತ್ತು.
ಇಂದು ಸಮಾರೋಪ
ಮಲ್ಪೆಯಲ್ಲಿ ನಡೆಯುತ್ತಿರುವ ರಜತ ಉಡುಪಿ- ಬೀಚ್ ಉತ್ಸವ ಸಮಾರೋಪ ಜ. 22ರಂದು ನಡೆಯಲಿದೆ. ರಾಜ್ಯದ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆ ಸಚಿವ ಆನಂದ್ ಸಿಂಗ್ ಭಾಗವಹಿಸಲಿದ್ದಾರೆ.