Advertisement

ಜಿಲ್ಲೆಯಲ್ಲಿ ಮತ್ತೆ ಮೂರು ಕೋವಿಡ್‌ 19 ಪ್ರಕರಣ ಪತ್ತೆ

06:59 AM Jul 04, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್‌ 19 ಅಟ್ಟಹಾಸ ಮುಂದುವರಿದಿದ್ದು, ಶುಕ್ರವಾರ ಹೊಸದಾಗಿ ಚಿಂತಾಮಣಿ 3, ಚಿಕ್ಕಬಳ್ಳಾಪುರದಲ್ಲಿ 1 ಸೇರಿ ಮೂರು ಪ್ರಕರಣಗಳು ಕಂಡು ಬಂದಿದ್ದು, ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ  233ಕ್ಕೆ ಏರಿಕೆ ಕಂಡಿದೆ. ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಕೋವಿಡ್‌-19 ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬರುತ್ತಲೇ ಇದ್ದು, ಜಿಲ್ಲೆಯ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

Advertisement

ಚಿಂತಾಮಣಿಯಲ್ಲಿ 50 ಹಾಗೂ 18 ವರ್ಷದ  ಇಬ್ಬರಲ್ಲಿ ಸೋಂಕು ದೃಢಪಟ್ಟರೆ ಚಿಕ್ಕಬಳ್ಳಾಪುರದಲ್ಲಿ 45 ವರ್ಷದ ವ್ಯಕ್ತಿಯಲ್ಲಿ ಕೋವಿಡ್‌ 19 ಸೋಂಕು ಪತ್ತೆಯಾಗಿದೆ. ಮೂವರ ಪೈಕಿ ಇಬ್ಬರಿಗೆ ಬೆಂಗಳೂರು ಪ್ರವಾಸ ಕೈಗೊಂಡ ಹಿನ್ನೆಲೆ ಇದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

233ಕ್ಕೆ ಸೋಂಕಿತರ ಏರಿಕೆ: ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ಹಾಗೂ ಚಿಂತಾಮಣಿ ತಾಲೂಕುಗಳಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಜಿಲ್ಲಾ ಕೇಂದ್ರದಲ್ಲಿ ಬರೋಬ್ಬರಿ 53 ಪ್ರಕರಣಗಳು ದಾಖಲಾದರೆ, ಚಿಂತಾಮಣಿಯಲ್ಲಿ 18,  ಬಾಗೇಪಲ್ಲಿ 53, ಗೌರಿಬಿದನೂರು 97, ಶಿಡ್ಲಘಟ್ಟ 12 ತಲುಪಿದೆ.

ಶುಕ್ರವಾರ ಇಬ್ಬರು ಮಾತ್ರ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದು, ಇದುವರೆಗೂ ಡಿಸ್ಚಾರ್ಜ್‌ ಆದವರ ಸಂಖ್ಯೆ 173 ದಾಟಿದೆ. ಜಿಲ್ಲೆಯಲ್ಲಿ 53 ಕೋವಿಡ್‌-19 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಲ್ಲಿ ಒಟ್ಟು 6 ಮಂದಿ ಕೋವಿಡ್‌ -19ಗೆ ಬಲಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next