Advertisement
ಬಂಧಿತರಿಂದ 1.80 ಲ.ರೂ. ಮೌಲ್ಯದ 61.29 ಗ್ರಾಂ ಚಿನ್ನಾಭರಣ, 27 ಸಾ. ರೂ., 135.78 ಗ್ರಾಂ ಬೆಳ್ಳಿಯ ಆಭರಣಗಳು, ಒಂದು ಮೊಬೈಲ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೊಡಗು ಎಸ್‌ಪಿ ಡಾ| ಸುಮನ್ ಡಿ.ಪನ್ನೇಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣದ ಪ್ರಮುಖ ಆರೋಪಿ ಸಣ್ಣಪ್ಪನು ಸಾರ್ವಜನಿಕರ ನಡುವೆಯೇ ಓಡಾಡಿಕೊಂಡು ಶನಿವಾರಸಂತೆ ಠಾಣಾ ವ್ಯಾಪ್ತಿಯಲ್ಲಿ ಬೀಗ ಹಾಕಿದ್ದ ಮನೆಗಳಲ್ಲಿ ಕಳವು ಮಾಡುತ್ತಿದ್ದ ಎಂದು ಎಸ್‌ಪಿ ತಿಳಿಸಿದರು. ಕೊಡಗು, ಹಾಸನ, ಸಕಲೇಶಪುರ ಸಹಿತ ವಿವಿಧೆಡೆಗಳಲ್ಲಿ ಕಳವು ನಡೆಸಿದ್ದ ಸಣ್ಣಪ್ಪ ಮತ್ತು ಆತನ ಸಹವರ್ತಿ ಗಳ ಬಂಧನಕ್ಕೆ ರಚಿಸಲಾಗಿದ್ದ ಸೋಮ ವಾರಪೇಟೆ ಉಪ ವಿಭಾಗದ ವಿಶೇಷ ತಂಡವು ಸಣ್ಣಪ್ಪನನ್ನು ಸೋಮ ವಾರಪೇಟೆಯಲ್ಲಿ ಬಂಧಿಸಿದರು. 34 ಪ್ರಕರಣಗಳು
ಸಣ್ಣಪ್ಪನ ಮೇಲೆ ಬೆಂಗಳೂರು, ಯಸಳೂರು, ಸಕಲೇಶಪುರ ಹಾಗೂ ಶನಿವಾರಸಂತೆ ಠಾಣೆಗಳಲ್ಲಿ 34 ಕಳವು ಪ್ರಕರಣ ದಾಖಲಾಗಿದ್ದು, ಶನಿವಾರಸಂತೆ ಠಾಣೆಯ 9 ಕಳವು ಪ್ರಕರಣಗಳಲ್ಲಿ ಆತನಿಗೆ ಶಿಕ್ಷೆಯಾಗಿತ್ತು. ಹಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ಸುಮಾರು 13 ಬಂಧನ ವಾರೆಂಟ್ ಜಾರಿಯಾಗಿದೆ.
Related Articles
ಆತನು ಕದ್ದ ಚಿನ್ನಾಭರಣಗಳನ್ನು 3ನೇ ಆರೋಪಿ, ಸೋಮವಾರಪೇಟೆ ಕಾರ್ಪೊರೇಶನ್ ಬ್ಯಾಂಕ್ ಅಟೆಂಡರ್ ಗಣೇಶ್ ಪ್ರಸಾದ್‌ಗೆ ಮಾರಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ಕದ್ದ ವಸ್ತುಗಳನ್ನು ಸಣ್ಣಪ್ಪನಿಂದ ಖರೀದಿಸಿದ್ದ ಆರೋಪದಲ್ಲಿ ಗಣೇಶ್ ಹಾಗೂ ಕುಶಾಲ್‌ನನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
Advertisement
ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‌ಪಿ ಎಚ್.ಎಂ. ಶೈಲೇಂದ್ರ ಅವರ ಮಾರ್ಗ ದರ್ಶನದಲ್ಲಿ ಸೋಮವಾರಪೇಟೆ ಸಿಐ ನಂಜುಂಡೇಗೌಡ ಹಾಗೂ ಕುಶಾಲನಗರ ಸಿಐ ಎಂ.ಮಹೇಶ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶನಿ ವಾರಸಂತೆ ಎಸ್‌ಐ ಕೃಷ್ಣ ನಾಯಕ್, ಸಿಬಂದಿ ವರ್ಗದ ಎಂ.ಎಸ್. ಬೋಪಣ್ಣ, ಎಸ್.ಸಿ. ಲೋಕೇಶ್, ಬಿ.ಡಿ. ಮುರಳಿ, ವಿನಯ್ ಕುಮಾರ್ ಮತ್ತು ಕುಶಾಲನಗರ ಉಪ ವಿಭಾಗದ ಅಪರಾಧ ಪತ್ತೆ ದಳದ ಸಿಬಂದಿ ವರ್ಗದ ಎಂ.ಎ. ಗೋಪಾಲ್, ಬಿ.ಎಸ್. ದಯಾನಂದ, ಟಿ.ಎಸ್.ಸಜಿ, ಸಿಪಿಐ ಕಚೇರಿಯ ಅನಂತ ಕುಮಾರ್, ಮಂಜುನಾಥ್ ಮತ್ತು ಕುಮಾರಸ್ವಾಮಿ ಹಾಗೂ ಕೊಡಗು ಜಿಲ್ಲಾ ಬೆರಳು ಮುದ್ರಾ ಘಟಕದ ಸಂತೋಷ್ ಹಾಗೂ ಮಡಿಕೇರಿ ಸಿ.ಡಿ.ಆರ್. ಸೆಲ್‌ನ ರಾಜೇಶ್ ಮತ್ತು ಗಿರೀಶ್ ಮೊದಲಾದವರು ಪಾಲ್ಗೊಂಡಿದ್ದರು.