Advertisement

Vijayapura; ವೃದ್ಧನ ಸಜೀವ ದಹನಕ್ಕೆ ಯತ್ನಿಸಿದ ಮೂವರ ಬಂಧನ; ಮೂವರು ಪರಾರಿ

06:03 PM Mar 21, 2024 | Team Udayavani |

ವಿಜಯಪುರ: ತನ್ನ ಜಮೀನಿನಲ್ಲಿ ಕಬ್ಬಿನ ತ್ಯಾಜ್ಯಕ್ಕೆ ಹಚ್ಚಿದ ಬೆಂಕಿ ಪಕ್ಕದ ಜಮೀನಿನಲ್ಲಿದ್ದ ಮೇವಿನ ಬಣವೆಗೆ ತಾಗಿದ್ದು, ಇದರಿಂದ ಸಿಟ್ಟಿಗೆದ್ದವರು ವೃದ್ಧನ‌ ಸಜೀವ ದಹನಕ್ಕೆ ಯತ್ನಿಸಿದ ಘಟನೆ ಬಬಲೇಶ್ವರ ತಾಲೂಕಿನಲ್ಲಿ ಜರುಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ 70 ವರ್ಷದ ವೃದ್ಧ ದುಂಡಪ್ಪ ಹರಿಜನ ಎಂಬಾತನೇ ಸಜೀವ ದಹನ ಕೃತ್ಯದಲ್ಲಿ ತೀವ್ರ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾರ್ಚ 15 ರಂದು ಜರುಗಿರುವ ಈ ಕೃತ್ಯ ಇದೀಗ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಗಾಯಗೊಂಡಿರುವ ದುಂಡಪ್ಪನಿಗೆ ಬೆನ್ನು, ಕೈಗಳಿಗೆ ಸುಟ್ಟ ಗಾಯಗಳಾಗಿವೆ.

ಘಟನೆಗೆ ಸಂಬಂಧಿಸಿದಂತೆ ಕಾರಜೋಳ ಗ್ರಾಮದವರೇ ಆದ ಮಲ್ಲಪ್ಪ ಆಸಂಗಿ, ಹನುಮಂತ ಮಲಘಾಣ, ಸಂಗಪ್ಪ ವಾಲೀಕಾರ, ಲಕ್ಷ್ಮಣ ವಾಲೀಕಾರ, ಸರಸ್ವತಿ ಆಸಂಗಿ ಹಾಗೂ ಪವನ ಆಸಂಗಿ ವಿರುದ್ಧ ದೂರು ದಾಖಲಾಗಿದ್ದು, ಹನುಮಂತ ಮಲಘಾಣ, ಲಕ್ಷ್ಮಣ ವಾಲಿಕಾರ, ಪವನ ಆಸಂಗಿ ಇವರನ್ನು ಬಂಧಿಸಿರುವ ಪೊಲೀಸರು, ತಲೆ ಮರೆಸಿಕೊಂಡಿರುವ ಇತರರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಆಗಿದ್ದೇನು?: ದುಂಡಪ್ಪ ಹರಿಜನ ತನ್ನ ಜಮೀನಿನಲ್ಲಿ ಕಬ್ಬಿನ ಕಟಾವಿನ ಬಳಿಕ ಉಳಿದ ತ್ಯಾಜ್ಯಕ್ಕೆ ಬೆಂಕಿಹಚ್ಚಿ ಸುಡಲು ಮುಂದಾಗಿದ್ದರು. ಈ ಹಂತದಲ್ಲಿ ಬೆಂಕಿಯ ಕಿಡಿ ಪಕ್ಕದ ಜಮೀನಿನಲ್ಲಿ ಮಲ್ಲಪ್ಪ ಆಸಂಗಿ ಅವತಿಗೆ ಸೇರಿದ ಮೇವಿನ ಬಣವೆಗೂ ತಾಗಿ, ಬವಣೆ ಸುಟ್ಟು ಕರಕಲಾಗಿತ್ತು.

Advertisement

ಇದರಿಂದ ಸಿಟ್ಟಿಗೆದ್ದ ಮಲ್ಲಪ್ಪ ಆಸಂಗಿ ಹಾಗೂ ಇತರೆ ಆರೋಪಿಗಳು ದುಂಡಪ್ಪ ಅವರೊಂದಿಗೆ ಜಗಳ ಮಾಡಿ ಹಲ್ಲೆ ನಡೆಸಿದ್ದರು. ಆಕಸ್ಮಿಕವಾಗಿ ಆಗಿರುವ ಹಾನಿಗೆ ನಷ್ಟ ಭರಿಸಿಕೊಡುತ್ತೇನೆ ಎಂದು ದುಂಡಪ್ಪ ಒಪ್ಪಿಕೊಂಡಿದ್ದ. ನಷ್ಟವಾದಷ್ಟು ಪ್ರಮಾಣದ ಮೇವು ಕೊಡಿಸುತ್ತೇನೆ ಎಂದು ಹೇಳಿದರೂ ಆರೋಪಿಗಳು ಕೇಳಿರಲಿಲ್ಲ.

ಉದ್ದೇಶ ಪೂರ್ವಕವಾಗಿ ಮೇವಿನ ಬಣವೆಗೆ ಬೆಂಕಿ ಹಚ್ಚಿದ್ದು, ನಿನ್ನನ್ನೂ ಅದೇ ಬೆಂಕಿಯಲ್ಲಿ ಸುಟ್ಟು ಹಾಕುತ್ತೇವೆ ಎಂದು ದುಂಡಪ್ಪ ಹರಿಜನನನ್ನು ಹೊತ್ತಿ ಉರಿಯುತ್ತಿದ್ದ ಬಣವೆಗೆ ಎಸೆದಿದ್ದರು.

ಈ ಕುರಿತು ಬಬಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಡಿಎಸ್ಪಿ ಜಿ.ಜಿ.ತಳಕಟ್ಟಿ ಹಾಗೂ ವಿಜಯಪುರ ಗ್ರಾಮೀಣ ವಲಯದ ಸಿಪಿಐ ಆನಂದರಾವ್ ನೇತೃತ್ವದ ಪೊಲೀಸರು ತಂಡ ತನಿಖೆ ಆರಂಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next