Advertisement

Surathkal:ಯುವಕನಿಂದ ಬೆದರಿಕೆ,ಆಶ್ಲೀಲ ಮೆಸೇಜ್‌:ಯುವತಿ ಆತ್ಮಹ*ತ್ಯೆಗೆ ಯತ್ನ;ಅಪಾಯದಿಂದ ಪಾರು

01:38 AM Oct 26, 2024 | Team Udayavani |

ಸುರತ್ಕಲ್‌: ಫೇಸ್‌ ಬುಕ್‌ ಮೆಸೆಂಜರ್‌ ಮೂಲಕ ಸ್ಥಳೀಯ ಸುರತ್ಕಲ್‌ ಇಡ್ಯಾದ ಯುವಕ ಶರೀಕ್‌ ಎಂಬಾತ ಆಶ್ಲೀಲ, ಬೆದರಿಕೆಯ ಮೆಸೇಜ್‌ ಕಳಿಸಿರುವುದು ಮಾತ್ರವಲ್ಲದೆ ಯುವತಿಯ ಕಡೆಯವರು ಪೊಲೀಸ್‌ ದೂರು ನೀಡಿದ ಕಾರಣ ಮತ್ತಷ್ಟು ಬೆದರಿಸುವ ಯತ್ನ ನಡೆಸಿದ್ದು ಇದರಿಂದ ಯುವತಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಬೆಳಗ್ಗೆ 3.30 ಗಂಟೆಗೆ ನಡೆದಿದೆ.

Advertisement

ಮಲಗಿದ್ದ ಮಗಳ ಬಳಿ ಪತ್ರ ದೊರಕಿದ್ದು, ಓದಿದಾಗ ಅನುಮಾನಗೊಂಡು ಎಚ್ಚರಿಸಲು ಯತ್ನಿಸಿದಾಗ, ಅರೆಪ್ರಜ್ಞಾವಸ್ಥೆಯಲ್ಲಿರುವುದನ್ನು ಕಂಡು ಮನೆ ಮಂದಿ ತತ್‌ಕ್ಷಣ ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದರು. ಸಕಾಲದಲ್ಲಿ ಚಿಕಿತ್ಸೆ ದೊರೆತ ಕಾರಣ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಅ. 23ರಂದು ಕಿರುಕುಳ ಕುರಿತಂತೆ ಸುರತ್ಕಲ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಮಗೆ ಅನುಮಾನವಿರುವ ಯುವಕ ಹಾಗೂ ಆತನ ತಾಯಿಯ ಕುರಿತಾಗಿ ದೂರಿನಲ್ಲಿ ಪೊಲೀಸರಿಗೆ ತಿಳಿಸಲಾಗಿತ್ತು. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಿದರೂ, ಆದರೆ ಸೂಕ್ತ ಸಾಕ್ಷ್ಯಾಧಾರದ ಕೊರತೆಯಿಂದ ಎಚ್ಚರಿಕೆ ನೀಡಿ ಕಳಿಸಿದ್ದರು. ಅ. 25ರಂದು ಮತ್ತೆ ಮೆಸೆಂಜರ್‌ ಮೂಲಕ ಜೈಲಿಗೆ ಹೋದರೂ ನಿನ್ನ ಬಿಡುವುದಿಲ್ಲ. ಹೊರಗೆ ಬಂದು ಕೊಲ್ಲುವೆ ಎಂಬ ಮೆಸೇಜ್‌ ಬಂದಿದೆ. ಇದರಿಂದ ಯುವತಿ ಆತಂಕಗೊಂಡು ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.

ಇಡ್ಯಾದಲ್ಲಿ ಯುವತಿ ಕುಟುಂಬ: ಸುರತ್ಕಲ್‌ ಇಡ್ಯಾದಲ್ಲಿ ಯುವತಿಯ ಕುಟುಂಬ ನೆಲೆಸಿದ್ದು, ಇತ್ತೀಚೆಗೆ ಯುವತಿ ಅಂಗಡಿಯೊಂದನ್ನು ತೆರೆದಿದ್ದಳು. ಇತ್ತೀಚೆಗೆ ಯುವಕರ ಗುಂಪೊಂದು ಅಂಗಡಿ ಬಳಿ ಬೈಕ್‌ ನಲ್ಲಿ ಬಂದು ನಿಲ್ಲುವುದು, ಯುವತಿಯನ್ನು ದುರುಗುಟ್ಟಿ ನೋಡುವುದು, ಆಶ್ಲೀಲ ಸನ್ನೆ ಮಾಡಿ ಮಾನಸಿಕವಾಗಿ ಕಿರುಕುಳ ನೀಡುತ್ತಿರುವುದರ ಬಗ್ಗೆಯೂ ಯುವತಿ ಪತ್ರದಲ್ಲಿ ಬರೆದಿದ್ದು ಪೊಲೀಸರು ಈ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ.

ಮೊಬೈಲಿಗೆ ಬಂದ ಈತನ ಬೇನಾಮಿ ಹೆಸರಿನ ನಂಬ್ರದಿಂದ ಈ ಮೆಸೇಜ್‌ ಮಾಡಿ ಆಳಿಸಿ ಹಾಕಲಾಗಿದ್ದು ಮೊಬೈಲ್‌ ವಶಕ್ಕೆ ಪಡೆದು ತಜ್ಞರ ಮೂಲಕ ಮೆಸೇಜ್‌ ಮರಳಿ ಪಡೆಯುವ ಯತ್ನ ನಡೆಯುತ್ತಿದೆ.

Advertisement

ಯುವತಿ ಪತ್ರದಲ್ಲಿ ಉಲ್ಲೇಖಿಸಿರುವಂತೆ ಫೇಸ್‌ ಬುಕ್‌ ಹ್ಯಾಕ್‌ ಮಾಡಿ ಮೆಸೆಂಜರ್‌ ಮೂಲಕ ಆಶ್ಲೀಲ ಮೆಸೇಜ್‌ ಮಾಡುತ್ತಿರುವ ಬಗ್ಗೆ ಶನಿವಾರ ಶರೀಕ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಯುವತಿಯ ಸಹೋದರನ ಮೊಬೈಲ್‌ಗೆ ಹ್ಯಾಕ್‌ ಮಾಡಿ ಫೇಸ್‌ ಬುಕ್‌ ಮೂಲಕ ಆಶ್ಲೀಲ ಹಾಗೂ ಕೊಲೆಗೈದು ಬೆದರಿಕೆ ಹಾಕಿರುವ ಆರೋಪ ಈತನ ಮೇಲೆ ಮಾಡಲಾಗಿದೆ.

ನಿರ್ಲಕ್ಷ್ಯ ವಹಿಸದಿರಿ: ಯಾವುದೇ ಸಾಕ್ಷಿ ಸಿಗದಂತೆ ಮೆಸೆಂಜರ್‌ ಮೂಲಕ ಯುವತಿಗೆ ಬಂದ ಬೆದರಿಕೆಯನ್ನು ಪೊಲೀಸರು ನಿರ್ಲಕ್ಷಿಸಬಾರದು ಎಂದು ಶಾಸಕ ಡಾ| ಭರತ್‌ ಶೆಟ್ಟಿ ವೈ ಹೇಳಿದ್ದಾರೆ. ಪ್ರಾಥಮಿಕ ಹಂತದಲ್ಲಿ ಇಲಾಖೆ ಈ ಪ್ರಕರಣವನ್ನು ಹಗುರವಾಗಿ ಕಂಡ ಕಾರಣ ಪರಿಸ್ಥಿತಿ ಬಿಗಡಾಯಿಸಿದೆ ಎನ್ನಲಾಗಿದೆ. ಯುವತಿ ಆತ್ಮಹತ್ಯೆಗೆ ಯತ್ನ ನಡೆಸಿರುವುದು ಪ್ರಕರಣದ ಗಂಭೀರತೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ಮದುವೆ ಮಾಡಿಕೊಡಿ ಎಂದಿದ್ದರೆ?
ಸ್ಥಳೀಯ ಮುಸ್ಲಿಂ ಸಮುದಾಯದ ನೂರು ಜಹಾನ್‌ ಎಂಬಾಕೆ ಬಂದು ಈಕೆಯನ್ನು ತನ್ನ ಮಗನೊಂದಿಗೆ ಮದುವೆ ಮಾಡಿಕೊಡುವಂತೆ ಕೇಳಿದ್ದರು. ಅಲ್ಲದೆ ಇದನ್ನು ತಿರಸ್ಕರಿಸಿದಾಗ ಮೆಸೆಂಜರ್‌ ಮೂಲಕ ತಿಳಿಯದಂತೆ ಬೆದರಿಕೆ ಮೆಸೇಜ್‌ ಕಳಿಸಿರುವ ಸಾಧ್ಯತೆಯಿದೆ. ಅನುಮಾನದ ಮೇರೆಗೆ ಇಡ್ಯಾ ನಿವಾಸಿ ಶರೀಕ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮಾಡಿ ಎಚ್ಚರಿಕೆ ನೀಡಿ ಬಿಟ್ಟಿದ್ದು ಇದಾದ ಬಳಿಕ ಮತ್ತೆ ಮೆಸೇಜ್‌ ಮೂಲಕ ಕಿರುಕುಳ ನೀಡಿದ್ದಾರೆ ಎಂದು ಯುವತಿಯ ಸ್ನೇಹಿತೆ ತಿಳಿಸಿದ್ದಾರೆ.

ಸುರತ್ಕಲ್‌: ಕಾರು ಅಪಘಾತ, ಸ್ಕೂಟರ್‌ಗೆ ಹಾನಿ
ಸುರತ್ಕಲ್‌: ಸುರತ್ಕಲ್‌ ಜಂಕ್ಷನ್‌ನಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದ ಪರಿಣಾಮ ಸೂಪರ್‌ ಬಜಾರ್‌ ಒಂದರ ದರೆ ಕುಸಿಯಿತಲ್ಲದೆ, ಸಮೀಪದಲ್ಲೇ ನಿಲ್ಲಿಸಲಾಗಿದ್ದ ಸ್ಕೂಟರ್‌ ನಜ್ಜು ಗುಜ್ಜಾಯಿತು. ಸಮೀಪದಲ್ಲಿ ಜನ ಸಂಚಾರ ಇರದೇ ಇದ್ದುದರಿಂದ ಅಪಾಯ ತಪ್ಪಿದೆ.

 

Advertisement

Udayavani is now on Telegram. Click here to join our channel and stay updated with the latest news.

Next