Advertisement

ಜೀವಸಂಕುಲದ ಅಸ್ತಿತ್ವಕ್ಕೇ ಧಕ್ಕೆ: ಡಾ|ಶಿವಣ್ಣ

12:48 PM Jan 28, 2017 | Team Udayavani |

ದಾವಣಗೆರೆ: ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಗುರುತಿಸಿ, ವರ್ಗೀಕರಿಸಿ, ಸಂರಕ್ಷಿಸದಿದ್ದಲ್ಲಿ ಜೀವಸಂಕುಲದ ಅಸ್ತಿತ್ವಕ್ಕೇ ಧಕ್ಕೆ ಉಂಟಾಗಲಿದೆ ಎಂದು ದೆಹಲಿ ವಿಶ್ವವಿದ್ಯಾಲಯ ಸಸ್ಯಶಾಸ್ತ್ರ  ವಿಭಾಗದ ನಿವೃತ್ತ ಮುಖ್ಯಸ್ಥ ಡಾ| ಕೆ.ಆರ್‌. ಶಿವಣ್ಣ ಆತಂಕ ವ್ಯಕ್ತಪಡಿಸಿದ್ದಾರೆ. 

Advertisement

ಶುಕ್ರವಾರ  ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಸ್ಯಗಳ ವರ್ಗೀಕರಣ ಮತ್ತು ಔಷಧಿ ಸಸ್ಯಗಳ ಮಹತ್ವ. ವಿಷಯ ಕುರಿತ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪೃಥ್ವಿ ಮೇಲಿರುವ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವಲ್ಲಿ ಆಡಳಿತ ವ್ಯವಸ್ಥೆ, ಅವುಗಳ ಕುರಿತಾದ ಸಂಶೋಧನೆಯತ್ತ ಶಿಕ್ಷಣ ಕ್ಷೇತ್ರವೂ ಆಸಕ್ತಿ, ಪರಿಣಾಮಕಾರಿ ಪ್ರಕ್ರಿಯೆ ತೋರುತ್ತಿಲ್ಲ ಎಂದು ವಿಷಾದಿಸಿದರು. 

ಆಹಾರೋತ್ಪಾದನೆಯಲ್ಲಿ ಪರಾಗಸ್ಪರ್ಶ  ಪ್ರಕ್ರಿಯೆ ಅತೀ ಪ್ರಮುಖ ಅಂಶ. ಕೃಷಿಯಲ್ಲಿ ಮಿತಿಮೀರಿ ಬಳಸುತ್ತಿರುವ ರಾಸಾಯನಿಕ ಗೊಬ್ಬರ, ಕೀಟನಾಶಕಗಳು ಸಹಜವಾದ ಪರಾಗಸ್ಪರ್ಶ ಪ್ರಕ್ರಿಯೆಗೆ ಕಾರಣ ಆಗುವಂಥಹ ಕೀಟ, ಪ್ರಾಣಿ ಸಂಕುಲಗಳ ವಿನಾಶಕ್ಕೆ ಕಾರಣವಾಗುತ್ತಿವೆ ಎಂದು  ತಿಳಿಸಿದರು. 

ಖ್ಯಾತ ಸಸ್ಯಶಾಸ್ತ್ರಜ್ಞ ಡಾ| ಆರ್‌. ರಾಘವೇಂದ್ರರಾವ್‌ ಮಾತನಾಡಿ, ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಗುರುತಿಸಿ,  ವರ್ಗೀಕರಿಸಿ, ಸಂರಕ್ಷಿಸಲು ಬೇಕಾದಂಥಹ ಮೂಲ ವಿಜ್ಞಾನದ ಅಧ್ಯಯನದ ಬಗ್ಗೆಯೇ ಆಸಕ್ತಿ ಕಡಿಮೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಹಿರಿಯ ವಿಜ್ಞಾನಿ ಡಾ| ಎಂ. ನಂಜಪ್ಪ ಮಾತನಾಡಿ, ಚಂದ್ರ, ಮಂಗಳ ಮುಂತಾಗ  ಗ್ರಹಗಳ ಬಗ್ಗೆ ತಿಳಿದುಕೊಳ್ಳು ತೋರುತ್ತಿರುವಂಥಹ ಆಸಕ್ತಿಯನ್ನು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿರುವ ಸಸ್ಯಗಳ ಬಗ್ಗೆ ತಿಳಿದುಕೊಳ್ಳಲು ತೋರುತ್ತಿಲ್ಲ ಎಂದು ತಿಳಿಸಿದರು. 

Advertisement

ಅಧ್ಯಕ್ಷತೆ ವಹಿಸಿದ್ದ ಕಾಲೇಜು ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಮಾತನಾಡಿ, ಯಾವುದೇ ಆರಣ್ಯ ಪ್ರದೇಶವನ್ನು ವಿವಿಧ ಯೋಜನೆಗಳಿಗೆ ಬಳಸುವಂಥಹ ಸಂದರ್ಭದಲ್ಲಿ ಅಲ್ಲಿರುವ ಸಸ್ಯ ಪ್ರಭೇದ ಗುರುತಿಸಿ, ಬೇರೆ ಕಡೆ ಬೆಳೆಸುವಂಥಹ ವ್ಯವಸ್ಥೆ ಆಗಬೇಕಿದೆ ಎಂದರು. 

ಉಪ ಅರಣ್ಯ  ಸಂರಕ್ಷಣಾಧಿಕಾರಿ ಎನ್‌.ಬಿ. ಮಂಜಪ್ಪ, ಕಾಲೇಜು ಪ್ರಾಚಾರ್ಯ ಡಾ| ಎಸ್‌. ಸುಬ್ರಹ್ಮಣ್ಯಸ್ವಾಮಿ, ಡಾ| ಬಿ.ಇ. ರಂಗಸ್ವಾಮಿ, ಡಾ| ರಾಮಲಿಂಗಪ್ಪ,  ಡಾ| ಪೂಜಾರ್‌, ಡಾ| ಜಿ.ಪಿ. ದೇಸಾಯಿ, ಪ್ರಕಾಶ್‌ ಇತರರು ಇದ್ದರು. ವಾಸುದೇವನಾಯಕ್‌ ನಿರೂಪಿಸಿದರು. ಡಾ| ಎಂ.ಎಸ್‌. ಮಂಜಪ್ಪ  ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next