Advertisement

ಸಾಗರ: ವಕೀಲರಿಗೆ ಅಶ್ಲೀಲ ಪದಗಳಿಂದ ಬೆದರಿಕೆ; ನ್ಯಾಯಾಲಯ ಕಲಾಪ ಬಹಿಷ್ಕಾರ

06:03 PM Jun 17, 2022 | Vishnudas Patil |

ಸಾಗರ: ಇಲ್ಲಿನ ನ್ಯಾಯಾಲಯದ ನ್ಯಾಯವಾದಿ ಕನ್ನಪ್ಪ ಜಿ. ಎಂಬುವವರಿಗೆ ಎಂ.ಡಿ. ವಸಂತಕುಮಾರ್ ಎಂಬಾತ ಅಶ್ಲೀಲ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಸಂತಕುಮಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ, ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಆಗ್ರಹಿಸಿ ಶುಕ್ರವಾರ ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಎ.ಎಸ್ಪಿ. ರೋಹನ್ ಜಗದೀಶ್ ಅವರಿಗೆ ಮನವಿ ಸಲ್ಲಿಸಿದರು.

Advertisement

ವಕೀಲರ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ವಕೀಲರಿಗೆ ಜೀವಬೆದರಿಕೆ ಹಾಕುವುದು, ಸುಳ್ಳು ಕೇಸು ದಾಖಲಿಸುವುದು ನಡೆಯುತ್ತಿದೆ. ಅದರ ಮುಂದುವರೆದ ಭಾಗವಾಗಿರೀ ಘಟನೆ ನಡೆದಿದೆ. ಇಂತಹ ಘಟನೆಯು ವಕೀಲರು ನಿರ್ಭೀತಿಯಿಂದ ತಮ್ಮ ಕರ್ತವ್ಯ ನಿರ್ವಹಿಸಲು ಅಡ್ಡಿ ಉಂಟು ಮಾಡುತ್ತಿದೆ. ನಮ್ಮ ಸಹೋದ್ಯೋಗಿ ಕನ್ನಪ್ಪ ಅವರಿಗೆ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ವ್ಯಾಟ್ಸಪ್ ಮೂಲಕ ಕಳಿಸಿ ಜೀವ ಬೆದರಿಕೆ ಹಾಕಿ ಅವರ ಕುಟುಂಬವನ್ನು ಸಹ ಪ್ರಕರಣದಲ್ಲಿ ಎಳೆದು ತಂದಿದ್ದಾನೆ. ವಸಂತಕುಮಾರ್ ಕಳಿಸಿರುವ ವಿಡಿಯೋ ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಕನ್ನಪ್ಪ ಅವರು ವಸಂತ ಕುಮಾರ್ ಮೇಲೆ ದೂರು ನೀಡಿ 24 ಘಂಟೆ ಕಳೆದಿದ್ದರೂ ಪೊಲೀಸರು ಈ ತನಕ ಎಫ್‌ಐಆರ್ ದಾಖಲು ಮಾಡಿಲ್ಲ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎಂ.ರಾಘವೇಂದ್ರ, ವಿ.ಶಂಕರ್, ಕಿರಣ್ ಕುಮಾರ್, ವಿನಯ್ ಕುಮಾರ್, ಕೆ.ಎಲ್.ಭೋಜರಾಜ್, ಮರಿದಾಸ್, ಮಹ್ಮದ್ ಜಕ್ರಿಯ, ಎಚ್.ಆರ್.ಶ್ರೀಧರ್, ಪರಮೇಶ್ವರ್, ಎಚ್.ಎನ್.ದಿವಾಕರ್, ಜಾಹೀದ್ ಅಹ್ಮದ್, ಎಸ್.ಕೆ.ಗಣಪತಿ, ನಾಗವೇಣಿ, ಶುಭ ಕೆ., ಶಿಲ್ಪ, ಶೃತಿ, ನವೀನಕುಮಾರ್, ತ್ಯಾಗಮೂರ್ತಿ, ರಮೇಶ್ ಮರಸ ಇನ್ನಿತರರು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next