Advertisement
ಹಾಲು, ಪೇಪರ್ ಸ್ಥಗಿತ: ನಗರದ ದಟ್ಟಗಳ್ಳಿ ಬಡಾವಣೆಯ ಜೋಡಿಬೇವಿನ ಮರದ ಬಳಿ ಇರುವ ಐಷಾರಾಮಿ ಬಂಗಲೆಯಲ್ಲಿ ವಾಸವಿದ್ದ ಓಂಪ್ರಕಾಶ್ ಕುಟುಂಬ ಸ್ಥಳೀಯರೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿರಲಿಲ್ಲ. ಅಕ್ಕಪಕ್ಕದಲ್ಲಿ ಯಾವುದೇ ಮನೆಗಳಿರದೇ, ವಿಲ್ಲಾ ಇರುವುದರಿಂದ ಕುಟುಂಬದ ಬಗ್ಗೆ ಮಾಹಿತಿ ಅಸ್ಪಷ್ಟವಾಗಿದೆ. ಮನೆಗೆ ದಿನಪತ್ರಿಕೆ, ಹಾಲು ಹಾಗೂ ತರಕಾರಿ ಹಾಕಲು ಬರುತ್ತಿದ್ದವರಿಗೆ ವಾರದ ಹಿಂದೆಯೇ ಮನೆಗೆ ಪೇಪರ್, ಹಾಲು ಹಾಕದಂತೆ ಹೇಳಿ, ಅವರಿಗೆ ನೀಡಬೇಕಿದ್ದ ಹಣವನ್ನು ನೀಡಿ ಹೋಗಿದ್ದರು ಎಂದು ಹಾಲು ಹಾಕುವ ವ್ಯಕ್ತಿ ತಿಳಿಸಿದ್ದಾರೆ.
Related Articles
Advertisement
ಮೈನಿಂಗ್ ಕಂಪನಿ ಮುಚ್ಚಿದ ನಂತರ ಸಂಕಷ್ಟಕ್ಕೆ ಸಿಲುಕಿದ್ದ ಓಂ ಪ್ರಕಾಶ್, ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ.)ದಿಂದ ತನಿಖೆ ಸಹ ಎದುರಿಸುತ್ತಿದ್ದರು ಎನ್ನಲಾಗಿದೆ. ಮೈನಿಂಗ್ ವ್ಯವಹಾರದಲ್ಲಿ ಈತನಿಗೆ ಭೂಗತ ಲೋಕದಿಂದ ಬೆದರಿಕೆ ಇದ್ದ ಕಾರಣ ತಮ್ಮ ರಕ್ಷಣೆಗಾಗಿ 3 ಜನ ಅಂಗರಕ್ಷಕರನ್ನು ಹೊಂದಿದ್ದರು ಎಂದು ಬಲ್ಲ ಮೂಲಗಳ ಮಾಹಿತಿ.
ಚಾಮರಾಜನಗರದಲ್ಲಿ ಒಂದೇ ಕುಟುಂಬ 5 ಮಂದಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಓಂಪ್ರಕಾಶ್ ಕುಟುಂಬದ ಬಗ್ಗೆ ಈಗಷ್ಟೆ ಮಾಹಿತಿ ಕಲೆ ಹಾಕುತ್ತಿದ್ದು, ಅವರ ಕುಟುಂಬ, ವ್ಯಾಪಾರ ವಹಿವಾಟಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಈವರೆಗೆ ಮೈಸೂರಿನಲ್ಲಿ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಹಿಂದಿನ ಪೊಲೀಸ್ ಆಯುಕ್ತರನ್ನ ಭೇಟಿ ಮಾಡಿದ್ದರ ಬಗ್ಗೆ ಈಗಷ್ಟೆ ಮಾಹಿತಿ ಕಲೆ ಹಾಕಬೇಕಿದೆ. ಹವಾಲ ಹಣ ವರ್ಗಾವಣೆ ಬಗ್ಗೆಯೂ ತನಿಖೆಯಲ್ಲಿ ಪರಿಶೀಲನೆ ಮಾಡಲಾಗುತ್ತದೆ. ನೂರಾರು ಕೋಟಿ ರೂ. ವರ್ಗಾವಣೆ ಆಗಿದ್ದರೆ ಪೊಲೀಸರಿಗೆ ಗೊತ್ತಾಗುತ್ತಿತ್ತು. ಅವರ ಬ್ಯಾಂಕ್ ಖಾತೆಗಳನ್ನ ಪರಿಶೀಲನೆ ಮಾಡುವ ಪ್ರಯತ್ನ ಮಾಡುತ್ತೇವೆ. ಅವರ ಕುಟುಂಬಸ್ಥರು ಸಂಪರ್ಕಕ್ಕೆ ಸಿಕ್ಕ ನಂತರವೇ ಮುಂದಿನ ತನಿಖೆ ಸಾಧ್ಯ. ಜೊತೆಗೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತೇವೆ.-ಕೆ.ಟಿ.ಬಾಲಕೃಷ್ಣ, ಪೊಲೀಸ್ ಆಯುಕ್ತ ಓಂ ಪ್ರಕಾಶ್ ಸ್ವಾಭಾವತಃ ಒಳ್ಳೆಯ ವ್ಯಕ್ತಿಯಾಗಿದ್ದರು. ನನಗೆ ತಿಳಿದಂತೆ ಅವರಿಗೆ ಯಾವುದೇ ಹಣಕಾಸಿನ ಸಮಸ್ಯೆ ಇರಲಿಲ್ಲ. ಅವರು ಸಾಮಾನ್ಯವಾಗಿ ಯಾವುದೇ ಕಾನೂನು ವಿಚಾರಗಳಿಗೆ ನನ್ನ ಬಳಿ ಬರುತ್ತಿದ್ದರು. ಕಳೆದ ಐದು ತಿಂಗಳ ಹಿಂದೆ ನಮ್ಮಿಬ್ಬರ ಭೇಟಿಯಾಗಿತ್ತು. ಕಳೆದ ಒಂದೂವರೆ ತಿಂಗಳ ಹಿಂದೆ ಅವರ ತಾಯಿ ಹೇಮರಾಜು ಅವರನ್ನು ಭೇಟಿಯಾಗಿದ್ದೆ. ಅಲ್ಲದೇ ನಾನು ಕಳೆದ ತಿಂಗಳು ಮನೆಗೆ ಬಂದಾಗ ಮನೆಯಲ್ಲಿ ಯಾರು ಸಹ ಇರಲಿಲ್ಲ.
-ಕೆ.ಎಸ್. ಅಮರೇಶ್, ವಕೀಲ