Advertisement

ಆಲಿಯಾ ಭಟ್‌ಗೆ ಬೆದರಿಕೆ ಲಕ್ನೋದಲ್ಲಿ ಒಬ್ಬನ ಸೆರೆ

11:26 AM Mar 03, 2017 | Harsha Rao |

ಮುಂಬಯಿ: ಬಾಲಿವುಡ್‌ ನಿರ್ಮಾಪಕ ಮಹೇಶ್‌ಭಟ್‌ಗೆ  50 ಲಕ್ಷ  ರೂ. ನೀಡಬೇಕು. ಇಲ್ಲದಿದ್ದಲ್ಲಿ ಪುತ್ರಿ ಆಲಿಯಾ ಭಟ್‌ರನ್ನು ಹತ್ಯೆ ಮಾಡುವುದಾಗಿ ವ್ಯಕ್ತಿ ಫೋನ್‌ ಹಾಗೂ ವಾಟ್ಸ್‌ಆ್ಯಪ್‌ ಮೂಲಕ ಬೆದರಿಕೆ ಹಾಕಿದ್ದಾನೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ನಡುವೆ ಮುಂಬೈ ಪೊಲೀಸರ ಸುಳಿವಿನ ಮೇರೆಗೆ ಉತ್ತರ ಪ್ರದೇಶದಲ್ಲೂ ತನಿಖೆ ನಡೆಸಲಾಗಿದ್ದು, ಒಬ್ಬನನ್ನು ಬಂಧಿಸಿದ್ದಾರೆ. ಬೆದರಿಕೆ ಕರೆ ಬಂದಿರುವ ಬಗ್ಗೆ ಹಾಗೂ ಅದಕ್ಕೆ ಕಾರಣನಾದ ವ್ಯಕ್ತಿಯನ್ನು ಬಂಧಿಸಿರುವ ಬಗ್ಗೆ ಪೊಲೀಸರು ಮಹೇಶ್‌ ಭಟ್‌ ಸಂತಸ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ. “ನಾನು ಸುರಕ್ಷಿತವಾಗಿದ್ದೇನೆ. ತಂದೆಯೂ ಸುರಕ್ಷಿತವಾಗಿದ್ದಾರೆ’ ಎಂದು ಆಲಿಯಾ ಭಟ್‌ ಹೇಳಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next