Advertisement

Gangolli ತ್ರಾಸಿ: ಸಮುದ್ರದಲ್ಲಿ ಅಪರಿಚಿತ ಶವ ಪತ್ತೆ

10:48 PM Feb 04, 2024 | Team Udayavani |

ಗಂಗೊಳ್ಳಿ: ತ್ರಾಸಿ ಸಮೀಪದ ಕಂಚಗೋಡು ಹೊಸಪೇಟೆ ಬಳಿಯ ಸಮುದ್ರದಲ್ಲಿ ಸುಮಾರು 45 – 50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಫೆ.4ರಂದು ಪತ್ತೆಯಾಗಿದೆ.

Advertisement

ಸ್ಥಳಕ್ಕೆ ಗಂಗೊಳ್ಳಿ ಠಾಣಾಧಿಕಾರಿ ಬಸವ ಕನಟ್ಟಿ ಅವರು ಸಿಬಂದಿ ವರ್ಗದ ನಾಗರಾಜ್‌ ನಾಯಕವಾಡಿ ಹಾಗೂ ಮಾಳಿಂಗರಾಯ ಜತೆಗೆ ಸ್ಥಳಕ್ಕೆ ಭೇಟಿ ನೀಡಿದರು.

ಗಂಗೊಳ್ಳಿ ಕರಾವಳಿ ಕಾವಲು ಪಡೆ ಕರಾವಳಿ ನಿಯಂತ್ರಣ ದಳದ ಸಿಬಂದಿ ನಿಶಾಂತ್‌ ಖಾರ್ವಿ ಅವರು ಶವವನ್ನು ಮೇಲೆತ್ತಲು ಸಹಕರಿಸಿದರು.

ಅನಂತರ ಗಂಗೊಳ್ಳಿ 24*7 ಆಪತ್ಭಾಂಧವ ಆ್ಯಂಬುಲೆನ್ಸ್‌ ತಂಡದ ಇಬ್ರಾಹಿಂ ಗಂಗೊಳ್ಳಿ, ಅಕ್ಷಯ್‌ ಖಾರ್ವಿ, ಕೃಷ್ಣ ಅವರು ಮೃತದೇಹವನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲು ಸಹಕರಿಸಿದರು.ಮೃತರ ವಾರಸುದಾರರಿದ್ದರೆ ಗಂಗೊಳ್ಳಿ ಠಾಣೆಯನ್ನು ಸಂಪರ್ಕಿಸಬಹುದು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next