Advertisement

ಪರಿಷತ್‌ ಸದಸ್ಯರ ಪ್ರಮಾಣ ವಚನಕ್ಕೆ ಸಾವಿರಾರು ಜನ

08:59 PM Jan 07, 2022 | Team Udayavani |

ಬೆಂಗಳೂರು: ರಾಜ್ಯ ವಿಧಾನಪರಿಷತ್‌ಗೆ ಆಯ್ಕೆಯಾದ 25 ಸದಸ್ಯರ ಪ್ರಮಾಣ ವಚನ ಸಮಾರಂಭದಲ್ಲಿ ಸಾವಿರಾರು ಜನರು ಭಾಗ ವಹಿಸಿದ್ದು ಫೋಟೋ ಸೆಷನ್‌ಗೆ ನೂಕು ನುಗ್ಗ ಲು ಉಂಟಾಗಿದ್ದು ಚರ್ಚೆಗೆ ಗ್ರಾಸವಾಯಿತು. ವಿಧಾನಸೌಧದ ಬಾಂಕ್ವೆಟ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಕೊರೊನಾ ಮಾರ್ಗಸೂಚಿ ಹೊರಡಿಸಿ ಸಭೆ ಸಮಾರಂಭಗಳಿಗೆ ಇಂತಿಷ್ಟೇ ಜನ ಭಾಗವಹಿಸಬೇಕು ಎಂದು ನಿಗದಿ ಮಾಡಿದ್ದರೂ ನೂತನ ಪರಿಷತ್‌ ಸದಸ್ಯರ ಕುಟುಂಬ ಸದಸ್ಯರು, ಬೆಂಬಲಿಗರು ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದು ಕೊರೊನಾ ನಿಯಮ ಪಾಲಿಸದಿರುವುದು ವ್ಯಾಪಕ ಟೀಕೆಗೂ ಕಾರಣವಾಯಿತು.

Advertisement

ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಹಾಗೂ ಪರಿಷತ್‌ ಸಭಾಪತಿಯವರು ಇದ್ದ ಕಾರ್ಯಕ್ರಮದಲ್ಲೇ ಈ ರೀತಿ ನಿಯಮ ಪಾಲಿಸದಿದ್ದರೆ ಹೇಗೆ ಎಂದು ಪ್ರತಿಪಕ್ಷ ಕಾಂಗ್ರೆಸ್‌ ಪ್ರಶ್ನಿಸಿ, ಕಾರ್ಯಕ್ರಮದಲ್ಲಿ ಭಾಗಿಯಾಗಿ ನಿಯಮ ಉಲ್ಲಂ ಸಿದ ಸಚಿವರ ಮೇಲೂ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದೆ.

ಇಷ್ಟೇ ಅಲ್ಲದೆ ವಿಧಾನಸೌಧದಲ್ಲಿ ಗುರು ವಾರ ನಡೆದ ಸಚಿವ ಸಂಪುಟ ಸಭೆ ನಡೆ ಯುವ ಸಭಾಂಗಣದ ಬಳಿಯೂ ಸಚಿ ವರು ಹಾಗೂ ಶಾಸಕರ ಆಪ್ತರು, ಬೆಂಬಲಿ ಗರ ದಂಡೇ ನೆರೆದಿತ್ತು. ವಿಧಾನಸೌಧ ಕಾರಿಡಾರ್‌ ಗಳಲ್ಲಿಯೂ ಕೊರೊನಾ ನಿಯಮಾವಳಿ ಪಾಲನೆ ಕಂಡು ಬರಲಿಲ್ಲ.

ಡಿಕೆಶಿ ಆಕ್ರೋಶ: ಸುದ್ದಿಗಾರರ ಜತೆ ಮಾತ ನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ರಾಜ್ಯದಲ್ಲಿ ಕೋವಿಡ್‌ ಇದೆ ಎಂದು ನಿರ್ಬ ಂಧ ಹಾಕಿದ್ದರೂ ವಿಧಾನಸೌ ಧದ ಬಾಕ್ವೆಂಟ್‌ ಹಾಲ್‌ನಲ್ಲಿ ವಿಧಾನ ಪರಿ ಷತ್‌ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿದೆ. ಅಲ್ಲಿ ಸಾವಿ ರಾರು ಜನ ಸೇರಿದ್ದಾರೆ. ಸರ್ಕಾರ ಏನು ಮಾಡುತ್ತಿದೆ. ಗೃಹ ಮಂತ್ರಿಗಳು ಇಲ್ಲಿರುವ ಯಾರನ್ನಾದರೂ ಮುಟ್ಟಲು ಸಾಧ್ಯವೇ, ಇವರ ಮೇಲೆ ಯಾಕೆ ಪ್ರಕರಣ ದಾಖಲಿಸಿಲ್ಲ. ಇದು ಸಭೆ, ಸಮಾರಂ ಭವಲ್ಲವೇ ಎಂದು ಪ್ರಶ್ನಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next