Advertisement

ನಾಲ್ಕು ದಿನದಲ್ಲಿ ಸಾವಿರ ಸೋಂಕು ಪ್ರಕರಣ

08:26 AM Jun 04, 2020 | Lakshmi GovindaRaj |

ಬೆಂಗಳೂರು: ಕೇವಲ ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಕೋವಿಡ್‌ 19 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಆರಂಭದಲ್ಲಿ ಇದೇ ಒಂದು ಸಾವಿರ ಪ್ರಕರಣಗಳಿಗೆ ಸುಮಾರು ಎರಡೂವರೆ ತಿಂಗಳ ಸಮಯ ಹಿಡಿದಿತ್ತು.  ಕಲಬುರಗಿಯಲ್ಲಿ ಕೋವಿಡ್‌ 19 ವೈರಸ್‌ ಅಬ್ಬರ ಮುಂದುವರೆದಿದೆ. ಬುಧವಾರ 105 ಮಂದಿಯಲ್ಲಿ ಸೋಂಕು ಪತ್ತೆಯಾಗುವ ಮೂಲಕ ಜಿಲ್ಲಾವಾರು ಸೋಂಕಿತರ ಪಟ್ಟಿಯಲ್ಲಿ 510 ಪ್ರಕರಣಗಳೊಂದಿಗೆ ಕಲಬುರಗಿ ಮೊದಲ ಸ್ಥಾನಕ್ಕೇರಿದೆ.

Advertisement

ಬುಧವಾರ ಒಂದೇ ದಿನ ರಾಜ್ಯದಲ್ಲಿ 267 ಮಂದಿ ಸೋಂಕಿತರಾಗಿದ್ದು, ದಾವಣಗೆರೆಯಲ್ಲಿ ಸೋಂಕಿತ ವೃದ್ಧೆ ಸಾವಿಗೀಡಾಗಿದ್ದಾರೆ. ಈ ಮೂಲಕ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 4,063ಕ್ಕೆ ಮತ್ತು ಸೋಂಕು ಚಿಕಿತ್ಸೆ  ಫ‌ಲಕಾರಿಯಾಗದೇ ಮೃತಪಟ್ಟವರ ಸಂಖ್ಯೆ 53ಕ್ಕೆ ತಲುಪದೆ. ಸದ್ಯ 2,494 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 1,514 ಮಂದಿ ಗುಣಮುಖರಾಗಿದ್ದಾರೆ.

ಬುಧವಾರದ 267 ಸೋಂಕಿತರಲ್ಲಿ 250 ಮಂದಿ ಹೊರ ರಾಜ್ಯದಿಂದ  ಬಂದಿದ್ದಾರೆ. ಈ ಪೈಕಿ ಮಹಾರಾಷ್ಟ್ರ  ದಿಂದಲೇ 234 ಮಂದಿ, ಬಿಹಾರ 4, ತಮಿಳುನಾಡು 2, ನವದೆಹಲಿ 8. ರಾಜಸ್ಥಾನದಿಂದ ಒಬ್ಬರು ಆಗಮಿಸಿದ್ದಾರೆ. ದಿನದ ಹೆಚ್ಚು ಸೋಂಕು ಪ್ರಕರಣಗಳು ಕಲಬುರಗಿ (105), ಉಡುಪಿ (62),  ರಾಯಚೂರು (35) ಬೆಂಗಳೂರು (20) ಮಂಡ್ಯ (13) ಜಿಲ್ಲೆಗಳಲ್ಲಿ ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ನಾಲ್ಕು ದಿನದಲ್ಲಿ ಸಾವಿರ: ಕಳೆದ ನಾಲ್ಕು ದಿನಗಳಲ್ಲಿ (ಮೇ 31 ರಿಂದ ಜೂ.3) ಒಟ್ಟು 1,141 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಹಿಂದೆಂದಿಗಿಂತಲೂ ಅತೀ ವೇಗದಲ್ಲಿ ಸೋಂಕು ಪ್ರಕರಣಗಳು ಸಾವಿರ ಗಡಿ ದಾಟಿವೆ. ರಾಜ್ಯದಲ್ಲಿ  ಮೊದಲ ಸೋಂಕು ಪ್ರಕರಣ ಕಾಣಿಸಿಕೊಂಡಿದ್ದು ಮಾರ್ಚ್‌ 8. ಕಠಿಣ ಲಾಕ್‌ಡೌನ್‌ ಹಿನ್ನೆಲೆ ನಿಯಂತ್ರ  ಣದಲ್ಲಿದ್ದ ಸೋಂಕು ಮೇ ತಿಂಗಳಿಂದ ಹೆಚ್ಚಳವಾಗುತ್ತಾ ಸಾಗಿತು. ರಾಜ್ಯಕ್ಕೆ ಸೋಂಕು ಆಗಮಿಸಿ 69 ದಿನಗಳ ಬಳಿಕ ಮೇ 15ರಂದು  ಸೋಂಕು ಪ್ರಕರಣಗಳು ಮೊದಲ ಸಾವಿರ ಗಡಿದಾಟಿದವು.

ಆ ನಂತರ ಮೇ 24ಕ್ಕೆ 2 ಸಾವಿರ, ಮೇ 31ಕ್ಕೆ 3 ಸಾವಿರ ಗಡಿದಾಡಿದ್ದು, ಮೂರು ದಿನಗಳ ಅಂತರದಲ್ಲಿ 4 ಸಾವಿರ ತಲುಪಿವೆ. ದಾವಣಗೆರೆಯಲ್ಲಿ 80 ವರ್ಷದ ವೃದ್ಧೆ  ಸೋಂಕಿನಿಂದ ಮೃತಪಟ್ಟಿದ್ದಾರೆ. ಮೇ.28 ರಂದು ಜ್ವರ, ಕೆಮ್ಮು, ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, 29ರಂದು ಸಾವಿಗೀಡಾಗಿದ್ದರು. ಸೋಂಕು ಪರೀಕ್ಷೆ ನಡೆಸಿದಾಗ ಸೋಂಕಿತರೊಬ್ಬರ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ದಾವಣಗೆರೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಐದಕ್ಕೇರಿದೆ.

Advertisement

ಮೊದಲ ಸ್ಥಾನದಿಂದ ಕೆಳಗಿಳಿದ ಉಡುಪಿ : ಉಡುಪಿಯಲ್ಲಿಯೂ ಸೋಂಕಿನ ಪ್ರವಾಹ ಮಂದುವರಿ ದಿದ್ದು, ಬುಧವಾರ 62 ಮಂದಿ ಸೋಂಕಿತರಾಗಿ ದ್ದಾರೆ. ಆದರೆ, ಮಂಗಳವಾರಕ್ಕೆ ಹೋಲಿಸಿದ ಅರ್ಧದಷ್ಟು ಪ್ರಕರಣಗಳು ಪತ್ತೆಯಾಗಿವೆ.  ಅಂತೆಯೇ ಕಲಬುರಗಿ  ಯಲ್ಲಿ ಹೆಚ್ಚು ಪ್ರಕರಣ ಕಾಣಿಸಿಕೊಂಡ ಹಿನ್ನೆಲೆ ಉಡುಪಿ ಜಿಲ್ಲೆ 2ನೇ ಸ್ಥಾನಕ್ಕಿಳಿದಿದೆ. ಎಲ್ಲಾ ಸೋಂಕಿತರು ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ.

ಸೋಂಕಿತರ ಪೈಕಿ ಹಾಸನ 28, ಬೆಂಗಳೂರು 19,  ದಾವಣಗೆರೆ, ಚಿಕ್ಕಬಳ್ಳಾಪುರ ತಲಾ 13, ದಕ್ಷಿಣ ಕನ್ನಡ 9, ಬೆಳಗಾವಿ 7, ಬಳ್ಳಾರಿ, ಬಾಗಲಕೋಟೆ ತಲಾ 5, ಶಿವಮೊಗ್ಗ 4, ವಿಜಯ  ಪುರ 3, ಗದಗ 3, ಉತ್ತರ ಕನ್ನಡ, ಧಾರವಾಡ ತಲಾ ಒಬ್ಬರು ಸೇರಿ 111 ಮಂದಿ ಗುಣಮುಖರಾಗಿದ್ದಾರೆ.  ಒಟ್ಟಾರೆ ಗುಣಮುಖರಾದವರ ಸಂಖ್ಯೆ 1514ಕ್ಕೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next