Advertisement

ಭೂಗತ ಕೇಬಲ್‌ ಅಳವಡಿಕೆ ಚಿಂತನೆ

09:27 AM May 11, 2022 | Team Udayavani |

ಪುತ್ತೂರು: ವಿದ್ಯುತ್‌ ತಂತಿ ಮುಕ್ತ ನಗರ ನಿರ್ಮಾಣ ಕನಸು ಪುತ್ತೂರು, ಮೇ 10: ವಿದ್ಯುತ್‌ ತಂತಿ ಮುಕ್ತ ಪುತ್ತೂರು ನಗರವನ್ನು ರೂಪಿಸುವ ಪ್ರಯತ್ನಕ್ಕೆ ಪೂರಕ ಎಂಬಂತೆ ಈಗಾಗಲೇ 8 ಕಿ.ಮೀ. ಅಂಡರ್‌ ಗ್ರೌಂಡ್‌ ಕೇಬಲ್‌ ಅಳವಡಿಸಲಾಗಿದ್ದು ಇಡೀ ನಗರಕ್ಕೆ ವಿಸ್ತರಿಸುವ ಚಿಂತನೆ ನಡೆದಿದೆ.

Advertisement

ವಿದ್ಯುತ್‌ ಕಂಬದ ಮೇಲೆ ತಂತಿ ಹಾಕಿ ವಿದ್ಯುತ್‌ ಸರಬರಾಜು ಮಾಡುವ ಬದಲು ನೆಲದೊಳಗೆ ಕೇಬಲ್‌ ಅಳವಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ನಗರವಿಡೀ ಅನು ಷ್ಠಾನಕ್ಕೆ ಹಣ ವಿನಿಯೋಗ ಮತ್ತು ಯೋಜನೆಯ ರೂಪುರೇಷೆ ಸಿದ್ಧ ಗೊಳಿಸುವಂತೆ ಶಾಸಕರು ಮೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಬನ್ನೂರಿನಿಂದ-ಕೇಪುಳು ತನಕ ಒಂದು ಲೈನ್‌, ಬನ್ನೂರಿನಿಂದ ಕೋಟೇಚಾ ಹಾಲ್‌ ತನಕ ಎರಡು ಲೈನ್‌, ಬನ್ನೂರಿನಿಂದ ರೈಲ್ವೇ ಬ್ರಿಡ್ಜ್ ತನಕ 2 ಲೈನ್‌, ಬನ್ನೂರಿನಿಂದ ಕೆ.ಎಂ. ಸ್ಟೋರ್‌ ತನಕ 1 ಲೈನ್‌ ಕೇಬಲ್‌ ಅಳವಡಿಸಲಾಗಿದೆ. ಉಳಿದ ಕಡೆಗಳಲ್ಲಿ ಆರ್‌ಡಿಎಸ್‌ ಯೋಜನೆ ಸೇರಿದಂತೆ ಬೇರೆ-ಬೇರೆ ಯೋಜ ನೆಗಳ ಮೂಲಕ ಕೇಬಲ್‌ ಅಳವಡಿಸುವ ಚಿಂತನೆ ಯನ್ನು ಮೆಸ್ಕಾಂ ಹೊಂದಿದೆ. ಈ ಕೇಬಲ್‌ ಜಾಲಗಳು ಒಂದು ವಿದ್ಯುತ್‌ ಕೇಂದ್ರ ದಿಂದ ಇನ್ನೊಂದು ಕೇಂದ್ರ ದವರೆಗೆ ಅಳವಡಿಸು ವುದಾಗಿದೆ. ನಗರದ ಮುಖ್ಯ ರಸ್ತೆಯ ಸನಿಹದಲ್ಲಿರುವ ‌ ವಿದ್ಯುತ್‌ ಕಂಬದ ಬದಲು ಅಂಡರ್‌ ಗ್ರೌಂಡ್‌ನ‌ಲ್ಲಿ ವಿದ್ಯುತ್‌ ಪೂರೈಕೆ ಆಗಲಿ ದ್ದು ಪಟ್ಟಣ ವ್ಯಾಪ್ತಿ ಕೊನೆಗೊಂಡ ಅನಂತರ ಅಲ್ಲಿಂದ ಪುನಃ ಕಂಬಗಳ ಮೂಲಕ ವಿದ್ಯುತ್‌ ಕೃಷಿ, ಮನೆ, ವಾಣಿಜ್ಯ ಕಟ್ಟಡಗಳಿಗೆ ಪೂರೈಕೆ ಆಗಲಿದೆ.

ಕಂಬ ರಹಿತ ವಿದ್ಯುತ್‌ ಪೂರೈಕೆ ಪುತ್ತೂರು ನಗರವನ್ನು ವಿದ್ಯುತ್‌ ತಂತಿ ಮುಕ್ತ ನಗರವಾಗಿ ರೂಪಿಸುವ ಸಲು ವಾಗಿ ಅಂಡರ್‌ ಗ್ರೌಂಡ್‌ ಕೇಬಲ್‌ ಅಳ ವಡಿಕೆಗೆ ಒತ್ತು ನೀಡಲಾಗಿದೆ. ಇದಕ್ಕಾಗಿ 20 ಕೋ.ರೂ. ಅನುದಾನ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗಿದೆ. ಇಡೀ ನಗರದಲ್ಲಿ ವಿದ್ಯುತ್‌ ಕಂಬ ರಹಿತವಾದ ವಿದ್ಯುತ್‌ ಪೂರೈಕೆ ಜಾಲ ವಿಸ್ತರಿಸಲು ಕ್ರಮ ಕೈಗೊಳ್ಳ ಲಾಗುವುದು. – ಸಂಜೀವ ಮಠಂದೂರು, ಶಾಸಕರು, ಪುತ್ತೂರು.

8 ಕಿ.ಮೀ. ಪೂರ್ಣ ನಗರದಲ್ಲಿ 8 ಕಿ.ಮೀ.ದೂರದ ತನಕ ಭೂಗತ ಕೇಬಲ್‌ ಅಳವಡಿಕೆ ಆಗಿದ್ದು, ಇದಕ್ಕೆ 3.5 ಕೋ.ರೂ. ಖರ್ಚು ಮಾಡಲಾಗಿದೆ. ಕೇಬಲ್‌ ಅಳ ವಡಿಸಿರುವ ಪ್ರದೇಶದಲ್ಲಿ 3 ವರ್ಷಗಳ ತನಕ ಸಾಧಕ-ಬಾಧಕ ಪರಿಶೀಲಿಸುವ ನಿಟ್ಟಿನಲ್ಲಿ ವಿದ್ಯುತ್‌ ಕಂಬ ತೆರವು ಮಾಡಿಲ್ಲ. ಇಡೀ ನಗರದಲ್ಲಿ ಈ ಯೋಜನೆ ವಿಸ್ತರಿಸಲು ನೂರಾರು ಕೋ.ರೂ. ಆವಶ್ಯಕತೆ ಇದೆ. ರಾಮಚಂದ್ರ ಎ., ಸ. ಕಾರ್ಯ ನಿರ್ವಾಹಕ ಎಂಜಿನಿಯರ್‌ ಮೆಸ್ಕಾಂ ನಗರ ಉಪವಿಭಾಗ.

Advertisement
Advertisement

Udayavani is now on Telegram. Click here to join our channel and stay updated with the latest news.

Next