Advertisement
ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕೊರೊನಾ ವೈರಸ್ ನಿಯಂತ್ರಣ ಕುರಿತ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ಬಿಪಿಎಲ್ ಪಡಿತರದಾರರಿಗೆ ಎರಡು ತಿಂಗಳ ಪಡಿತರ ಧಾನ್ಯಗಳನ್ನು ವಿತರಿಸಿದ್ದು, ಜಿಲ್ಲೆಯಲ್ಲಿ ಶೇ.85 ರಷ್ಟು ಪೂರ್ಣಗೊಳಿಸಿದೆ. ಇದೀಗ ಅದೇ ಮಾದರಿಯಲ್ಲಿ ಕೇಂದ್ರ ಸರ್ಕಾರವೂ ಬಿಪಿಎಲ್ ಪಡಿತರದಾರರಿಗೆ ಒಬ್ಬರಿಗೆ ತಿಂಗಳಿಗೆ 5 ಕೆಜಿ ಅಕ್ಕಿ, ಪಡಿತರ ಚೀಟಿಯೊಂದಕ್ಕೆ 2 ಕೆಜಿ ಬೇಳೆಯಂತೆ ಎರಡು ತಿಂಗಳಿಗೆ 10 ಕೆಜಿ ಅಕ್ಕಿ, ಬೇಳೆಯನ್ನು ವಿತರಿಸಲಾಗುತ್ತದೆ. ಇದೇ ಮೇ 1 ರಿಂದ ದೇಶಾದ್ಯಂತ ಪಡಿತರ ವಿತರಣೆ ಕಾರ್ಯ ಚಾಲನೆ ಪಡೆದುಕೊಳ್ಳಲಿದೆ ಎಂದು ವಿವರಿಸಿದರು.
ದೇಶಾದ್ಯಂತ ಲಾಕ್‌ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆ ಸೇರಿ ರಾಜ್ಯಾದ್ಯಂತ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ರೈತರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ ಇಲಾಖೆ ನಿರ್ದೇಶಕರಿಂದ ಸಹಾಯವಾಣಿ ಆರಂಭಿಸಲಾಗುತ್ತಿದೆ ಎಂದರು. ಇದಕ್ಕೂ ಮುಖ್ಯವಾಗಿ ಬೆಳೆಯ ಬೆಲೆ ಕುಸಿಯುತ್ತಿದೆ. ಈಚೆಗೆ ಹೈದರಾಬಾದ್ ಗೆ ಲಾರಿಯಲ್ಲಿ ಕೊಂಡೊಯ್ದಿದ್ದ ಅಂಜೂರವನ್ನು ಖರೀದಿಸುವವರಿಲ್ಲದೇ ವಾಪಸ್ ತರಲಾಗಿದೆ. ಬಳ್ಳಾರಿ, ಸಿರುಗುಪ್ಪ,
ಕೊಪ್ಪಳ, ಗಂಗಾವತಿಯಲ್ಲಿ ಈಚೆಗೆ ಸುರಿದ ಅಕಾಲಿಕ ಮಳೆಯಿಂದ ಬೆಳೆಹಾನಿಯಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಸಮೀಕ್ಷೆ ನಡೆಸಿ ಸಂಕಷ್ಟದಲ್ಲಿರುವ ರೈತರಿಗೆ ಸಾಧ್ಯವಾದಷ್ಟು ಪರಿಹಾರ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಭರವಸೆ ನೀಡಿದರು.
Related Articles
ಎಂದ ಸಚಿವರು, ಕೊರೊನಾ ವೈರಸ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ಪೊಲೀಸರು, ಜಿಲ್ಲಾಡಳಿತಕ್ಕೆ ಒಂದು ಸೆಲ್ಯೂಟ್ ಹೊಡೆಯುತ್ತೇನೆ ಎಂದರು. ಸಂಸದ ವೈ.ದೇವೇಂದ್ರಪ್ಪ, ಶಾಸಕ ಎಂ.ಸೋಮಲಿಂಗಪ್ಪ, ಜಿಪಂ ಸಿಇಒ ಕೆ.ನಿತೀಶ್, ಎಸ್‌ಪಿ ಸಿ.ಕೆ. ಬಾಬಾ ಇತರರಿದ್ದರು.
Advertisement
ಬಳ್ಳಾರಿ ವಿಮ್ಸ್‌ನಲ್ಲಿ ಈಚೆಗೆ ತೆರೆಯಲಾಗಿರುವ ಟೆಸ್ಟಿಂಗ್ ಲ್ಯಾಬ್ 110 ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯ ಹೊಂದಿದೆ. ಆದರೆ, ರಕ್ತದ ಮಾದರಿಗಳನ್ನು ಸಂಗ್ರಹಿಸುವಲ್ಲಿ ನಿಧಾನವಾಗುತ್ತಿದೆ. ಸದ್ಯ ಲ್ಯಾಬ್‌ನಲ್ಲೂ ಕಡಿಮೆ ಸಿಬ್ಬಂದಿ ಇದ್ದು, 2 ಶಿಫ್ಟ್ ನಡೆಯುತ್ತಿದೆ. ಇನ್ನು ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಅಧಿಕಾರಿಗಳು ಟ್ರಿಪಲ್ ಲೇಯರ್ ಮಾಸ್ಕ್ ಧರಿಸಬೇಕು. ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ಸಿಬ್ಬಂದಿ ಎನ್95 ಮಾಸ್ಕ್ ನೀಡಬೇಕು ಎಂದಿದೆ. ಅದರಂತೆ ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಟ್ರಿಪಲ್ ಲೇಯರ್ ಮಾಸ್ಕ್ ನೀಡಲಾಗಿದೆ. ಜತೆಗೆ ಜಿಲ್ಲೆಗೆ ಟ್ರಿಪಲ್ ಲೇಯರ್ ಮಾಸ್ಕ್ 2 ಲಕ್ಷ ಬಂದಿದ್ದು, ಸದ್ಯ 94 ಸಾವಿರ ದಾಸ್ತಾನಿದೆ. ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಒಬ್ಬರಿಗೆ 10 ರಂತೆ ಎಲ್ಲ ಪಿಎಚ್‌ಸಿ, ತಾಲೂಕು ಆಸ್ಪತ್ರೆಗಳಿಗೆ ಪೂರೈಸಲಾಗಿದೆ. ಜತೆಗೆ ಗೌನ್‌ಗಳನ್ನು ನೀಡಲಾಗಿದೆ ಎಂದು ಡಿಸಿ ಎಸ್.ಎಸ್. ನಕುಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.