Advertisement
ರಿಯಲ್ ಎಸ್ಟೇಟ್, ರೆಸ್ಟೋರೆಂಟ್‌ಗಳು, ವಿಮಾನಯಾನ ಮತ್ತು ಆತಿಥ್ಯ ವಲಯದ ಸಂಸ್ಥೆ, ಉದ್ಯಮಗಳಿಗೆ ಅನು ಕೂಲವಾಗುವಂತೆ 6 ತಿಂಗಳು ಜಿಎಸ್‌ಟಿ ಪಾವತಿಯಿಂದ ವಿನಾಯಿತಿ ನೀಡುವುದು, ಪ್ರಸ್ತುತ ಇರುವ ಇನ್‌ವಾಯ್ಸ ಆಧರಿಸಿ ತೆರಿಗೆ ವಿಧಿಸುವ ಬದಲು ನಗದು ಆಧರಿಸಿ ವಿಧಿಸುವ ಕ್ರಮ ಜಾರಿ ಮತ್ತು ಈಗಾಗಲೇ ಸರಕು ಮಾರಾಟ ಮಾಡಿದ್ದರೂ ಲಾಕ್‌ಡೌನ್‌ನಿಂದ ಹಣ ಪಾವತಿಯಾಗದೆ ಇದ್ದರೆ ಅದನ್ನು ವಸೂಲಿಯಾಗದ ಸಾಲ ಎಂದು ಪರಿಗಣಿಸಿ ಜಿಎಸ್‌ಟಿ ಪರಿಹಾರ ಒದಗಿಸು ವುದು ಈ ಪ್ಯಾಕೇಜ್‌ನಲ್ಲಿ ಸೇರಿವೆ.
ಸಣ್ಣ ಉದ್ದಿಮೆಗಳ ಚೇತರಿಕೆಗೆ ಕೇಂದ್ರ 3 ಲಕ್ಷ ಕೋ.ರೂ. ಭದ್ರತಾ ಸಾಲ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಿದೆ. ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ 3 ಲಕ್ಷ ಕೋಟಿ ರೂ. ಭದ್ರತೆ ಸಾಲ ಸವಲತ್ತು ಕಲ್ಪಿಸುವ ಪ್ರಸ್ತಾವನೆ, ಶೇ.20ರಷ್ಟು ಔಟ್‌ಸ್ಟಾಂಡಿಂಗ್ ಕ್ರೆಡಿಟ್ ಸೌಲಭ್ಯ ಕಲ್ಪಿಸುವ ಚಿಂತನೆ ಇದೆ ಎಂದು ಮೂಲಗಳು ತಿಳಿಸಿವೆ.