Advertisement

ದೇಗುಲಕ್ಕೆ ಹೋದವರು ಇನ್ನೂ ಮನೆಗೆ ಬಂದಿಲ್ಲ!

12:30 AM Jan 11, 2019 | Team Udayavani |

ತಿರುವನಂತಪುರ/ಕೊಚ್ಚಿ: ಶಬರಿಮಲೆಯ ಅಯ್ಯಪ್ಪ ದೇಗುಲವನ್ನು ಜ.2ರಂದು ಮೊದಲ ಬಾರಿಗೆ ಪ್ರವೇಶಿಸಿದ್ದ ಬಿಂದು ಅಮ್ಮಿಣಿ (40) ಹಾಗೂ ಕನಕದುರ್ಗಾ (39) ಜೀವ ಬೆದರಿಕೆಗಳು ಇರುವುದರಿಂದ ಅವರಿನ್ನೂ ತಮ್ಮ ಮನೆಗಳಿಗೆ ಹಿಂದಿರುಗಲು ಸಾಧ್ಯವಾಗಿಲ್ಲ.  ಹಾಗಾಗಿ, ಅವರು ಅಜ್ಞಾತ ಸ್ಥಳಗಳಲ್ಲಿಯೇ ಅವಿತಿದ್ದಾರೆ. ಕಳೆದ ವರ್ಷ, ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ನೀಡ ಎಬಹುದೆಂದು ಸುಪ್ರೀಂ ಕೋರ್ಟ್‌ ಆದೇಶಿಸಿದ ನಂತರ, ಜ. 2ರಂದು ಅಮ್ಮಿಣಿ ಹಾಗೂ ಕನಕದುರ್ಗಾ ಅವರು ದೇಗುಲ ಪ್ರವೇಶಿಸಿದ್ದರು. ಅಜ್ಞಾತ ಸ್ಥಳದಿಂದಲೇ ಮಾಧ್ಯಮವೊಂದರ ಜತೆ ಮಾತನಾಡಿರುವ ಬಿಂದು, “”ದೇಗುಲ ಪ್ರವೇಶಿಸುವಾಗಲೂ ವಿರೋಧವಿದ್ದರೂ, ಆ ಬಗ್ಗೆ ದೃಢ ನಿಶ್ಚಯ ಹೊಂದಿದ್ದೆವು. ಎಲ್ಲಾ ಪ್ರತಿಭಟನೆಗಳನ್ನು ಬಿಜೆಪಿಯೇ ನಿಯಂತ್ರಿಸುತ್ತಿದೆ” ಎಂದಿದ್ದಾರೆ. 

Advertisement

ಜಾಮೀನು ನಕಾರ: ಮಹಿಳೆಯರ ವಿರುದ್ಧ ಕೀಳು ಹೇಳಿಕೆ ನೀಡಿರುವ ಆರೋಪ ಹೊತ್ತಿರುವ ಮಲಯಾಳಂ ನಟ ಕೊಲ್ಲಂ ತುಳಸಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್‌ ತಿರಸ್ಕರಿಸಿದೆ.

ಯಾತ್ರಾರ್ಥಿ ಸಾವು: ಶಬರಿಮಲೆ ಯಾತ್ರಿಕರೊಡನೆ ಎರುಮಲೆಯಿಂದ ಪಂಪಾಗೆ ಅರಣ್ಯ ಮಾರ್ಗವಾಗಿ ತೆರಳುತ್ತಿದ್ದ ಪರಮಶಿವಂ (35) ಎಂಬ ಯುವಕನೊಬ್ಬ ಕಾಡಾನೆಯ ತುಳಿತಕ್ಕೆ ಬಲಿಯಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಕೇರಳದ ಕೊಟ್ಟಾಯಂ ಪ್ರಾಂತ್ಯದಲ್ಲಿ ನಡೆದಿದೆ. ತಮಿಳುನಾಡಿನ ಸೇಲಂನಿಂದ ತನ್ನ 7 ವರ್ಷದ ಮಗನೊಂದಿಗೆ ಶಬರಿಮಲೆ ಯಾತ್ರೆಗಾಗಿ ಈತ ಬಂದಿದ್ದ. 

Advertisement

Udayavani is now on Telegram. Click here to join our channel and stay updated with the latest news.

Next