ಚಿಕ್ಕಮಗಳೂರು : ”ಹಿಂದೂ ಅಂತ ಯಾರು ತಮ್ಮನ್ನ ಧರ್ಮದ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದೀರೋ ಅವರು ಕಾಂಗ್ರೆಸ್ ಗೆ ವೋಟ್ ಹಾಕಬಾರದು” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಬುಧವಾರ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಕುರಿತು ಕಿಡಿ ಕಾರಿದ್ದಾರೆ.
”ಸತೀಶ್ ಜಾರಕಿಹೊಳಿ ಹಾಗೂ ಅವರ ಪಾರ್ಟಿಗೆ ಹಿಂದೂ ಸಾಮರ್ಥ್ಯ ಏನು ಅಂತ ತೋರಿಸಬೇಕು. ಹಿಂದವಿ ಸಾಮ್ರಾಜ್ಯ ಸ್ಥಾಪನೆ ಮಾಡಿದ ಶಿವಾಜಿ ಮಹಾರಾಜ,ಮರಾಠ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ವಿಜಯನಗರದ ರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದ ನಾಯಕ ಸಮುದಾಯಕ್ಕೂ ಅಪಮಾನ ಮಾಡಿ, ಅವರು ಹುಟ್ಟಿದ ಸಮುದಾಯಕ್ಕೂ ಅಪಮಾನ ಮಾಡಿದ್ದಾರೆ” ಎಂದು ಕಿಡಿ ಕಾರಿದರು.
”ನೇತಾಜಿ ಸುಭಾಷ್ ಚಂದ್ರ ಬೋಸ್ ಅಜಾದ್ ಹಿಂದ್ ಫೌಜ್ ಕಟ್ಟಿದ್ದರು, ನೇತಾಜಿ ಅವರಿಗೆ ಅಪಮಾನ ಮಾಡಿದ್ದಾರೆ. ಸೈನ್ಯಕ್ಕೆ ಹೋದರೆ ಅವರು ಘೋಷಣೆ ಕೂಗೋದೆ ಜೈ ಹಿಂದ್ ಅಂತ. ಸೈನ್ಯಕ್ಕೆ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಧ್ಯಕ್ಷರಾಗಿ ತನ್ನ ತಪ್ಪಿಗೆ ಕ್ಷಮೆ ಕೇಳದೆ ದುರಾಂಕಾರದ ವರ್ತನೆ ತೋರಿದ್ದಾರೆ” ಎಂದು ಹೇಳಿದ್ದಾರೆ.