Advertisement

ಜನ ನಾಯಕರಾದವರು ಜನರಿಗೆ ಹಂಚಿಕೆ ಮಾಡಬೇಕು : ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು

07:35 PM Mar 13, 2023 | Team Udayavani |

ಕುರುಗೋಡು: ಜನ ಸೇವೆ ಮಾಡಲು ಬರುವ ನಾಯಕರು ದುಡಿದು ಮನೆಯಲ್ಲಿ ಇಟ್ಟುಕೊಳ್ಳದೆ ಜನರಿಗೆ ಹಂಚುವ ಮನೋಭಾವನೆ ರೂಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಟಿ. ಎಚ್. ಸುರೇಶ್ ಬಾಬು ಹೇಳಿದರು.

Advertisement

ಪಟ್ಟಣದ ಬಿಜೆಪಿ ಶ್ರೀ ದೊಡ್ಡ ಬಸವೇಶ್ವರ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಅಭಿಯಾನದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ನಾನು ಚುನಾವಣೆ ಅಂಗವಾಗಿ ನಮ್ ಪತ್ನಿಯಿಂದ ಪ್ರತಿಯೊಂದು ವಾರ್ಡ್ ಗೆ ಸ್ಯಾರಿ ಹಂಚುವ ಕಾರ್ಯಕ್ರಮ ನಡೆಸುತ್ತಿಲ್ಲ. ಹಾಗೇನು ಇದ್ರೆ ಚುನಾವಣೆ ಸಂದರ್ಭದಲ್ಲಿ ಹಮ್ಮಿಕೊಳ್ಳುತಿದ್ದೆ, ಒಬ್ಬ ನಾಯಕ ಆದವರು ಜನರಿಗೆ ಹಂಚಿಕೆ ಮಾಡಬೇಕು ಹೊರೆತು ದುಡಿದು ಮನೆಯಲ್ಲಿ ಹಿಟ್ಟುಕೊಳ್ಳುವುದಲ್ಲ ಎಂದು ತಿಳಿಸಿದರು.

ಮಾ.14 ರಂದು ವಿಜಯ ಸಂಕಲ್ಪ ಯಾತ್ರೆಯ ಸಿರುಗುಪ್ಪ ಮುಗಿಸಿಕೊಂಡು ಕುರುಗೋಡು ಪಟ್ಟಣದ ಗಾದಿಲಿಂಗೇಶ್ವರ ದೇವಸ್ಥಾನ ದಿಂದ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನ ದವರೆಗೆ ಬೃಹತ್ ರೋಡ್ ಶೋ ನಡೆದು ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ದೊರೆಯಲಿದೆ ಈ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಈ ಯಾತ್ರೆಯಲ್ಲಿ ಪಕ್ಷದ ರಾಜ್ಯ ನಾಯಕರುಗಳಾದ ಜಗದೇಶ್ ಶೆಟ್ಟರ್,ಬಿ. ಶ್ರೀರಾಮುಲು, ಭಗವಂತ್, ಪ್ರಭು ಚವ್ಹಾನ್, ಹಾಲಪ್ಪ ಆಚಾರ್, ಆನಂದ್ ಸಿಂಗ್, ಅರವಿಂದ್ ಲಿಂಬವಳಿ, ಬಾಬು ರಾವ್, ಮಾಲಿಕೆಯ ಗುತ್ತೇದಾರ್, ಸಿದ್ದರಾಜು, ಮಾರುತಿ ರಾವ್ ಮೂಳೆ. ರಘುನಾಥ್ ರಾವ್, ಅಮರನಾಥ್ ಪಾಟೀಲ್, ಸಿದ್ದೇಶ್ ಯಾದವ್, ಡಿ. ಕೆ ಅರುಣ್, ಹಿಮಂತ್ ಬಿಸ್ವಾಸ್ ಶರ್ಮಾ, ನಳಿನ್ ಕುಮಾರ್ ಕಟೀಲ್.

ಆಗಮಿಸಲಿದ್ದಾರೆ. ಕ್ಷೇತ್ರದ ಎಲ್ಲ ಗ್ರಾಮಗಳಿಂದಲೂ ಜನ ಆಗಮಿಸಬೇಕು ಕಾರ್ಯಕ್ರಮದಲ್ಲಿ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.

Advertisement

ಪ್ರಧಾನಿ ನರೇಂದ್ರ ಮೋದಿ, ಅಮಿಶ್ ಶಾ ಹಾಗೂ ಜೆ.ಪಿ ನಡ್ಡಾ ಅವರ ಮುಂದಾಳತ್ವದಲ್ಲಿ ಬಿಜೆಪಿ ವಿಶ್ವದ ಅತಿ ದೊಡ್ಡ ಪಕ್ಷವಾಗಿ ಬೆಳೆದಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಅವರ ನೇತೃತ್ವದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಒಳ್ಳೆಯ ಕೆಲಸಗಳು ನಡೆಯುತ್ತಿವೆ ಎಂದರು.

ಕಾರ್ಯಕರ್ತರಿಗೆ ಪ್ರಮುಖ ಸ್ಥಾನಮಾನವಿದೆ. ಬಿಜೆಪಿ ಕಾರ್ಯಕರ್ತರನ್ನು ಅತ್ಯಂತ ಗೌರವ ನೀಡುವ ಪಕ್ಷವಾಗಿದೆ ಎಂದರು. ನನಗೆ ಕಾರ್ಯಕರ್ತರೇ ಶಕ್ತಿ. ಅವರು ನನಗೆ ಸಾಕಷ್ಟು ಪ್ರೀತಿ, ವಿಶ್ವಾಸ ಕೊಟ್ಟಿದ್ದಾರೆ. ಅವರ ಆಶಯದಂತೆ ಕೆಲಸ ಮಾಡುತ್ತಿದ್ದೇನೆ. ಕಾರ್ಯಕರ್ತರ ಪ್ರೀತಿ ವಿಶ್ವಾಸ ನನಗೆ ಶ್ರೀರಕ್ಷೆಯಾಗಿದೆ ಎಂದರು.

ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸೂಚಿಸುವ ಎಲ್ಲ ಕಾರ್ಯಚಟುವಟಿಕೆಗಳು ಅಚ್ಚುಕಟ್ಟಾಗಿ ನಡೆಯುತ್ತಿವೆ. ಬಿಜೆಪಿ ಸದಸ್ಯತ್ವ ಅಭಿಯಾನ ಯಶಸ್ವಿಯಾಗಿ ನಡೆದಿದೆ. ಪಕ್ಷದ ಎಲ್ಲ ಚಟುವಟಿಕೆಗಳು ಮುಂದೆಯೂ ಹೀಗೆಯೇ ನಡೆಯಬೇಕು. ಬೂತ್ ಮಟ್ಟದಲ್ಲಿ ಪಕ್ಷದ ಕಾರ್ಯಚಟುವಟಿಕೆಗಳು ಮತ್ತಷ್ಟು ಪರಿಣಾಮಕಾರಿಯಾಗಬೇಕು ಎಂದು ತಿಳಿಸಿದರು.

ಅಲ್ಲದೆ ಮಾ.21ಕ್ಕೆ ಯುವ ಮೋರ್ಚಾದ ವತಿಯಿಂದ ಕುರುಗೋಡಲ್ಲಿ ಬೃಹತ್ ಸಮಾವೇಶ ಜರುಗಲಿದೆ, ಅದರ ಅಧ್ಯಕ್ಷತೆ ಯನ್ನು ಯುವ ಮೋರ್ಚಾದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ವಹಿಸಲಿದ್ದಾರೆ ಜೊತೆಗೆ ಸಂಸದ ತೇಜಸ್ವಿ ಸೂರ್ಯ ಕೂಡ ಆಗಮಿಸಲಿದ್ದಾರೆ ಆದ್ದರಿಂದ ಹೆಚ್ಚಿನ ಸಂಖ್ಯೆ ಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ತಿಳಿಸಿದರು. ರಾಜ್ಯದಲ್ಲಿ ವಿಜಯೇಂದ್ರ ಅವರು ಯುವಕರ ಬಳಗ ವನ್ನು ಹೊಂದಿ ತಮ್ಮದೇ ಅದ ವರ್ಚಸ್ಸು ಪಡೆದುಕೊಂಡು ಪಕ್ಷಕ್ಕೆ ಬಲ ತುಂಬಿದ್ದಾರೆ. ಅಲ್ಲದೆ ಯಡಿಯೂರಪ್ಪ ಅವರು ಕೂಡ ನಾನು ಶಾಸಕ ನಾಗಿದ್ದಾಗ ಕೂಡ ತುಂಬಾ ಸಹಕಾರ ಮಾಡಿದ್ದಾರೆ ಅವರನ್ನು ಕೂಡ ಬರುವುದಕ್ಕೆ ತಿಳಿಸುತ್ತೇನೆ ಎಂದರು.

ಕಂಪ್ಲಿ ಕ್ಷೇತ್ರದ ಮಂಡಲ ಅಧ್ಯಕ್ಷ ಹಳ್ಳಳ್ಳಿ ವೀರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಉತ್ತಮವಾಗಿದೆ. ಪಕ್ಷವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಮಾಡಬೇಕಾದ ಕೆಲಸಗಳು ಮತ್ತು ವಿಜಯ ಸಂಕಲ್ಪ ಯಾತ್ರೆ ಯಶಸ್ವಿಗೊಳಿಸಲು ಕಾರ್ಯಕರ್ತರ ಜವಾಬ್ದಾರಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರೇಮ್, ಕುಮಾರ್, ಕಂಪ್ಲಿ ಮಂಡಲ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಕುಮಾರ್, ಸುಧಾಕರ್, ಕುರುಗೋಡಿನ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಎಂ.ರಾಜು, ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next