Advertisement

ಬೆನ್ನುಮೂಳೆಯ ವಕ್ರತೆ: ಬೆಂಡಾಯಿತು ಬದುಕು

11:07 PM Jun 17, 2019 | mahesh |

ಗುತ್ತಿಗಾರು: ಎಲ್ಲವೂ ಸರಿಯಿದ್ದರೆ ಈಕೆ ಎಲ್ಲರಂತೆ ಆಟವಾಡುತ್ತ ಬೆಳೆಯುತ್ತಿದ್ದಳು. ಆದರೆ, ವಿಧಿ ಈಕೆಯ ಬಾಳಲ್ಲಿ ಆಟವಾಡುತ್ತಿದೆ. ಥೋರೋಸಕ್‌ ಸ್ಕೊಲಿಯೋಸಿಕ್‌ (ಬೆನ್ನುಮೂಳೆಯ ವಕ್ರತೆ) ಎನ್ನುವ ವಿರಳವಾದ ಕಾಯಿಲೆಯಿಂದ ಬಳಲುತ್ತಿರುವ ಮಾವಿನಕಟ್ಟೆ ಹಿ.ಪ್ರಾ. ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಅಮೃತಾಳ ಬದುಕು ಬೆಂಡಾಗಿದೆ. ದೇವಚಳ್ಳ ಗ್ರಾಮದ ತಳೂರು ಮೆತ್ತಡ್ಕ ನಿವಾಸಿ ಸತೀಶ್‌ ನಾಯ್ಕ ಮತ್ತು ಗಾಯತ್ರಿ ಅವರ ಮೂವರು ಪುತ್ರಿಯರಲ್ಲಿ ಎರಡನೆಯವಳು. ಆರು ತಿಂಗಳಿನಿಂದ ಬೆನ್ನು ನೋವು ಆರಂಭವಾಗಿ ಕ್ರಮೇಣ ಬೆನ್ನು ಬಾಗಿ ಹೋಗಿದೆ.

Advertisement

ಗುಣಪಡಿಸುವ ಭರವಸೆ
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ. ಮಂಗಳೂರಿನ ಯೇನೆಪೊಯ ಆಸ್ಪತ್ರೆಯ ವೈದ್ಯರು ಸರಿಪಡಿಸುವ ಭರವಸೆ ನೀಡಿದ್ದಾರೆ. ಇದಕ್ಕೆ 4 ಲಕ್ಷ ರೂ. ಖರ್ಚು ತಗಲಬಹುದು ಎಂದು ತಿಳಿಸಿದ್ದಾರೆ. ಆದರೆ ತೀರಾ ಬಡತನದಲ್ಲಿರುವ ಆಕೆಯ ಹೆತ್ತವರಿಗೆ ಚಿಕಿತ್ಸಾ ವೆಚ್ಚ ಭರಿಸುವುದು ಅಸಾಧ್ಯವಾಗಿದೆ.

ಎರಗಿದ ಬರಸಿಡಿಲು
ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಹೆತ್ತವರಿಗೆ ಅಮೃತಾಳ ಅಸೌಖ್ಯದಿಂದ ಬರಸಿಡಿಲು ಎರಗಿದಂತಾಗಿದೆ. ಕೈಯಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ಚಿಕಿತ್ಸೆಗೆ ವ್ಯಯಿಸಲಾಗಿದ್ದು, ಇದೀಗ ಸಹೃದಯರಲ್ಲಿ ಅಂಗಲಾಚುತ್ತಿದ್ದಾರೆ. ಅಮೃತಾ ಎಲ್ಲ ಮಕ್ಕಳಂತೆ ನಲಿದಾಡಲು ಸಹೃದಯೀ ದಾನಿಗಳ ಸಹಾಯ ಬೇಕಾಗಿದೆ. ಅಮೃತಾಳ ಬದುಕಿಗೆ ದಾರಿದೀಪವಾಗಬೇಕು ಎನ್ನುವವರು ಆಕೆಯ ಅಜ್ಜಿ ಜಾನಕಿ, ಮೆತ್ತಡ್ಕ ಮನೆ ಅವರ ಸಿಂಡಿಕೇಟ್‌ ಬ್ಯಾಂಕ್‌ ಗುತ್ತಿಗಾರು ಶಾಖೆಯ ಖಾತೆ ಸಂಖ್ಯೆ: 01642200045005, ಐಎಫ್ಎಸ್‌ಸಿ ಸಂಖ್ಯೆ ಎಸ್‌ವೈಎನ್‌ಬಿ0000164 ಇದಕ್ಕೆ ಧನ ಸಹಾಯ ಮಾಡಬಹುದು.

ಥೋರೋಸಕ್‌ ಸ್ಕೊಲಿಯೋಸಿಕ್‌ (ಬೆನ್ನುಮೂಳೆಯ ವಕ್ರತೆ) ಎನ್ನುವ ವಿರಳವಾದ ಕಾಯಿಲೆಯಿಂದ ಬಳಲುತ್ತಿರುವ ಮಾವಿನಕಟ್ಟೆ ಹಿ.ಪ್ರಾ. ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಅಮೃತಾಗೆ ಚಿಕಿತ್ಸೆ ನೀಡಲು 4 ಲಕ್ಷ ರೂ.ಗಳಿಗೂ ಅಧಿಕ ವೆಚ್ಚ ತಗಲುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next