Advertisement

ಉಬೆರ್‌ ಕಪ್‌: ಕೊರಿಯಾ ವಿರುದ್ಧ ಭಾರತೀಯ ವನಿತಾ ತಂಡಕ್ಕೆ ಸೋಲು

10:56 PM May 11, 2022 | Team Udayavani |

ಬ್ಯಾಂಕಾಕ್‌: ಉಬೆರ್‌ ಕಪ್‌ನಲ್ಲಿ ಭಾರತೀಯ ವನಿತಾ ತಂಡವು “ಡಿ’ ಬಣದ ಕೊನೆಯ ಪಂದ್ಯದಲ್ಲಿ ಕೊರಿಯಾ ವಿರುದ್ಧ 0-5 ಅಂತರದಿಂದ ಸೋಲನ್ನು ಕಂಡಿದೆ. ಇದರಿಂದ ತಂಡದ ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ಬಿದ್ದಿದೆ.

Advertisement

ಇದೇ ವೇಳೆ ಥಾಮಸ್‌ ಕಪ್‌ಗಾಗಿ ನಡೆಯುತ್ತಿರುವ ಪುರುಷರ ವಿಭಾಗದ ಸ್ಪರ್ಧೆಯ ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ಭಾರತವು ಚೈನೀಸ್‌ ತೈಪೆ ವಿರುದ್ಧ 1-4 ಅಂತರದಿಂದ ಸೋಲನ್ನು ಕಂಡಿದೆ.

ಆದರೆ “ಸಿ’ ಬಣದ ಈ ಮೊದಲಿನ ಎರಡು ಪಂದ್ಯಗಳಲ್ಲಿ ಗೆದ್ದಿರುವ ಭಾರತೀಯ ತಂಡವು ಈಗಾಗಲೇ ನಾಕೌಟ್‌ ಹಂತಕ್ಕೇರಿದೆ.

“ಡಿ’ ಬಣದಲ್ಲಿ ಮೊದಲೆರಡು ಪಂದ್ಯಗಳಲ್ಲಿ ಗೆದ್ದಿರುವ ಭಾರತವು ಈಗಾಗಲೇ ಕ್ವಾರ್ಟರ್‌ಫೈನಲಿಗೇರಿದೆ.

ಆದರೆ ಕೊರಿಯಾ ವಿರುದ್ಧ ನಡೆದ ಐದು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿಯೂ ಗೆಲ್ಲದಿರುವುದರಿಂದ ಭಾರತೀಯ ತಂಡದ ಸಾಮರ್ಥ್ಯವನ್ನು ಪ್ರಶ್ನಿಸುವಂತಾಗಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಭಾರತವು ಥಾಯ್ಲೆಂಡ್‌ ತಂಡವನ್ನು ಎದುರಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next