ಉಳ್ಳಾಲ: ಸ್ಕೂಟರ್ ಕಳವುಗೈದ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ತಪಾಸಣೆ ವೇಳೆ ಬಂಧಿಸಿದ್ದಾರೆ.
ಹಾವೇರಿ ಆನಗಲ್ ನಿವಾಸಿ ಸಂತೋಷ ಗೋವಿಂದಪ್ಪ ಬಾಳೂರು(31) ಹಾಗೂ ಪ್ರವೀಣ್ ಕುಮಾರ್ (25) ಬಂಧಿತ ಆರೋಪಿಗಳು.
ನ. 9ರಂದು ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಜೆಪ್ಪು ನಿವಾಸಿ ಮೊಹಮ್ಮದ್ ಶಕೀಬ್ ಅವರು ನಿಲ್ಲಿಸಿದ್ದ ಸ್ಕೂಟರನ್ನು ಕಳವು ನಡೆಸಲಾಗಿತ್ತು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಿಸಲಾಗಿತ್ತು.
ಮೇ 16ರಂದು ಕೋಟೆಕಾರ್ ಜಂಕ್ಷನ್ ಬಳಿ ಉಳ್ಳಾಲ ಠಾಣಾ ಪಿಎಸ್‌ಐ ಶಿವಕುಮಾರ್ ಹಾಗೂ ಸಿಬಂದಿ ವಾಹನ ತಪಾಸಣೆ ನಡೆಸುವ ಸಂದರ್ಭ ನಂಬರ್ ಪ್ಲೇಟ್ ಇಲ್ಲದ ಸ್ಕೂಟರನ್ನು ತಡೆದು ತಪಾಸಣೆ ನಡೆಸಿದ್ದರು.
Related Articles
ಇದನ್ನೂ ಓದಿ:ಜಾರಿಗೆಬೈಲು ಕಳ್ಳರ ಕೈಚಳಕ : 95 ಸಾವಿರ ಮೌಲ್ಯದ ನಗದು, ಸೊತ್ತು ಕಳವು
ಸೂಕ್ತ ದಾಖಲೆಗಳು ಇಲ್ಲದ ಹಿನ್ನೆಲೆಯಲ್ಲಿ ಸ್ಕೂಟರಿನಲ್ಲಿದ್ದ ಇಬ್ಬರನ್ನು ಹಾಗೂ ಸ್ಕೂಟರನ್ನು ವಶಕ್ಕೆ ಪಡೆಯಲಾಗಿತ್ತು. ಅಲ್ಲಿ ವಿಚಾರಣೆ ನಡೆಸಿದಾಗ ಸ್ಕೂಟರನ್ನು ಕಳವು ನಡೆಸಿ ನಂಬರ್ ಪ್ಲೇಟ್ ತೆಗೆದು ಸ್ವಂತಕ್ಕೆ ಉಪಯೋಗಿಸುತ್ತಿರುವುದು ತನಿಖೆ ವೇಳೆ ತಿಳಿದುಬಂದಿದೆ.
ಉಳ್ಳಾಲ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್. ನಿರ್ದೇಶನದಡಿ, ಉಪನಿರೀಕ್ಷಕರಾದ ಪ್ರದೀಪ್ ಟಿ. ಆರ್., ಶಿವಕುಮಾರ್ ಕೆ. ಸಿಬಂದಿ ಅಕºರ್ ಎಡ್ರಾಮಿ, ಸಾಗರ ದೇವಕತ್ತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.