Advertisement

ಮೋಸ ಮಾಡಿದ ಸಂಗಾತಿ ವಿರುದ್ಧ ಜಾಹೀರಾತು ನೀಡಿದ ಮಹಿಳೆ !

12:02 PM Aug 14, 2022 | Team Udayavani |

ಪತ್ರಿಕೆಗಳಲ್ಲಿ ಜಾಹೀರಾತು ಬರುವುದು ಸಾಮಾನ್ಯ. ಆದರೆ, ಇತ್ತೀಚೆಗೆ ಆಸ್ಟ್ರೇಲಿಯಾದ “ಮ್ಯಾಕೆ ಲೈಫ್’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಜಾಹೀರಾತೊಂದು ಎಲ್ಲರ ಹುಬ್ಬೇರಿಸಿತ್ತು.

Advertisement

ಜೆನ್ನಿ ಎಂಬ ಹೆಸರಿನ ಮಹಿಳೆಗೆ ಸ್ಟೀವ್‌ ಹೆಸರಿನ ಸಂಗಾತಿ ಮೋಸ ಮಾಡಿ, ಇನ್ನೊಬ್ಬಳ ಜತೆ ಜೀವನ ಆರಂಭಿಸಿದ್ದಾನೆ. ಇದರ ಬಗ್ಗೆಯೇ ಜಾಹೀರಾತು ಕೊಟ್ಟಿರುವ ಜೆನ್ನಿ, “ಪ್ರೀತಿಯ ಸ್ಟೀವ್‌, ನೀನು ಅವಳೊಂದಿಗೆ ಖುಷಿಯಿಂದ ಇದ್ದೀಯ ಎಂದು ನಂಬಿದ್ದೇನೆ. ನೀನು ಎಷ್ಟು ಹೊಲಸು ಮೋಸಗಾರ ಎನ್ನುವುದು ಈಗ ಪೂರ್ತಿ ನಗರಕ್ಕೆ ತಿಳಿಯುತ್ತದೆ’ ಎಂದು ಜಾಹೀರಾತಿನಲ್ಲಿ ಹೇಳಿದ್ದಾರೆ.

ಕೊನೆಯಲ್ಲಿ “ನಾನು ನಿನ್ನದೇ ಕ್ರೆಡಿಟ್‌ ಕಾರ್ಡ್‌ ಹಣದಿಂದ ಈ ಜಾಹೀರಾತು ಹಾಕಿಸಿದ್ದೇನೆ’ ಎಂದೂ ತಿಳಿಸಿದ್ದಾರೆ.

ಪೂರ್ತಿ ಪುಟದಲ್ಲಿ ದೊಡ್ಡ ಅಕ್ಷರಗಳಲ್ಲಿ ಇರುವ ಈ ಜಾಹೀರಾತು ನೋಡಿರುವ ಅನೇಕರು ಪತ್ರಿಕೆಯ ಕಚೇರಿಗೆ ಕರೆ ಮಾಡಿ, ಸ್ಟೀವ್‌ ಮತ್ತು ಜೆನ್ನಿ ಬಗ್ಗೆ ಮಾಹಿತಿ ಕೇಳಿದ್ದಾರಂತೆ!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next