– ಶ್ವದಲ್ಲಿ ಇದಕ್ಕಿಂತ ತುಟ್ಟಿ ಕಾರು ಮತ್ತೂಂದಿಲ್ಲ
Advertisement
ಜಮಾನ ಬಲು ದುಬಾರಿ ಕಣ್ರೀ!ಹೀಗೆಂದಾಗ ಎದುರಿಗಿರುವವರು ಹೌದಪ್ಪಾ ಹೌದು, ಎಲ್ಲವೂ ದುಬಾರಿಯಾಗಿಬಿಟ್ಟಿವೆ’ ಎಂದು ತಲೆದೂಗುವುದು ಈ ದಿನಗಳಲ್ಲಿ ಸರ್ವೇ ಸಾಮಾನ್ಯ. ಹಿರಿಯರಾದರಂತೂ ಅವರ ಪ್ರತಿಕ್ರಿಯೆ ಹೀಗಿರುತ್ತದೆ. “ಅಯ್ಯೋ, ನಮ್ಮ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲಪ್ಪ, ಅಷ್ಟಕ್ಕೂ ಯಾಕ್ರೀ ಬೇಕು ಅಷ್ಟೊಂದು ದುಬಾರಿ ಲೈಫು” ಎಂದು ಮಾರುದ್ದ ಭಾಷಣ ಮಾಡಿ ಹೋಗುವುದೂ ಉಂಟು. ಆದರೆ ಲೈಫು ಹೀಗೆನ್ನುತ್ತಲೇ ಅವರು, ಇರಬೇಕೆಂದು ನಿರ್ಧಾರವಾಗಿದ್ದರೆ, ಬದಲಾಯಿಸಿಕೊಳ್ಳಲು ಯಾರಾದ್ರು ರೆಡಿಯಾಗ್ತಾರಾ? ಬದಲಾಯಿಸಿಕೊಂಡಿರುವ ಉದಾಹರಣೆಯೂ ಕಡಿಮೆ.
Related Articles
ವಿನ್ಯಾಸ ಅನನ್ಯ
ಕಾರಿನ ವಿನ್ಯಾಸ ವಿಭಿನ್ನವಾಗಿದೆ. ನ್ಪೋರ್ಟ್ ಕಾರುಗಳ ತಯಾರಿಕಾ ಸಂಸ್ಥೆ ಇದನ್ನು ತಯಾರಿಸಿದ್ಧರಿಂದ ಬಾಹ್ಯ ವಿನ್ಯಾಸ ರೇಸ್ ಕಾರುಗಳದ್ದೇ ಆಗಿದೆ. ಎಲ್ಲಾ ಭಾಗಗಳ ಶಾರ್ಪ್‌ನೆಸ್ ವಿಶ್ವದ ನ್ಪೋರ್ಟ್ ಕಾರುಗಳನ್ನು ತಯಾರಿಸುವ ಪ್ರತಿಷ್ಠಿತ ಕಂಪನಿಗಳಿಗೆ ಸವಾಲೊಡ್ಡುವಂತಿದೆ. ಆದರೆ ಪಗಾನಿ ಸಂಸ್ಥೆ ತನ್ನ ಜೊಂಡಾ ಸರಣಿಯ ಈ ಮೊದಲ ಕಾರುಗಳಿಗಿಂತಲೂ ಭಾರೀ ಬದಲಾವಣೆಯನ್ನೇನೂ ಮಾಡಿರುವುದು ಕಂಡುಬರುವುದಿಲ್ಲ. ಇನ್ನಷ್ಟು ಶಾರ್ಪ್ ಮಾಡುವಲ್ಲಿ ಗಮನ ಹರಿಸಿದೆ ಎನ್ನಬಹುದು. ಉಳಿದಂತೆ ವಿಶ್ವದ ಎಲ್ಲಾ ದುಬಾರಿ ನ್ಪೋರ್ಟ್ಸ್ ಕಾರುಗಳಲ್ಲಿರುವ ಅತ್ಯಾಧುನಿಕ ತಂತ್ರಜಾnನವನ್ನೇ ಇದರಲ್ಲಿಯೂ ಬಳಸಿಕೊಳ್ಳಲಾಗಿದೆ. ಡ್ಯಾಶ್‌ಬೋರ್ಡ್‌ನಲ್ಲೇ ನೂರಾರು ಆಪ್ಶನ್‌ಗಳನ್ನು ನೀಡಲಾಗಿದ್ದು, ಇನ್ನಷ್ಟು ಚಾಲಕ ಸ್ನೇಹಿಯಾಗಿರುವಂತೆ ಮುತುವರ್ಜಿ ವಹಿಸಲಾಗಿದೆ. ಮರ್ಸಿಡಿಸ್ ಬೆಂಜ್ ಕಾರುಗಳನ್ನು ವಿನ್ಯಾಸಗೊಳಿಸಿದ್ದ ಹೊರಾಶಿಯೋ ಈ ಕಾರನ್ನು ವಿನ್ಯಾಸಗೊಳಿಸಿದ್ದಾರೆ. ಅಷ್ಟೇ ಅಲ್ಲ, ಪಗಾನಿ ತಯಾರಿಸಿದ ಮೂರು ಕಾರುಗಳಲ್ಲಿ ಒಂದನ್ನು ಹೊರಾಶಿಯೋ ಅವರೇ ಕೊಂಡುಕೊಂಡಿದ್ದಾರೆ. ಉಳಿದ ಎರಡು ಕಾರುಗಳೂ ಈಗಾಗಲೇ ಮಾರಾಟವಾಗಿವೆ.
Advertisement
ಎಂಜಿನ್ ಸಾಮರ್ಥ್ಯಈ ಬಗ್ಗೆ ಪಿನ್ ಟು ಪಿನ್ ಮಾಹಿತಿ ಬೇಕಾಗಿಲ್ಲ. ಕಾರಣ, ಇದು ನ್ಪೋರ್ಟ್ಸ್ ಕಾರು ಎಂದ ಮೇಲೆ ವೇಗವಾಗಿ ಓಡುವ ಹಾಗೂ ಅಷ್ಟೇ ಸುರಕ್ಷಿ$ತವಾಗಿ ನಿಲ್ಲಿಸುವ ಎಲ್ಲಾ ತಂತ್ರಜಾnನಗಳನ್ನೂ ಅಳವಡಿಸಿರುವುದರಲ್ಲಿ ಅನುಮಾನವಿಲ್ಲ. ಜೊಂಡಾ ಎಚ್‌ಪಿ ಬರ್ಚೆಟ್ಟ, 7.3 ಲೀಟರ್‌ನ 7,300 ಸಿಸಿ ಭಲೇ ಸಾಮರ್ಥ್ಯದ ಕಾರಾಗಿದೆ. ಈ ಕಾರಿನಲ್ಲಿ ಮರ್ಸಿಡಸ್ ಎಎಂಜಿ ಎ120 12 ಎಂಜಿನ್ ಬಳಕೆ ಮಾಡಲಾಗಿದೆ. 6ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ 789ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸುವ ಈ ಎಂಜಿನ್‌ಗೆ ಇರುವುದರಿಂದ ವೇಗ ಮತ್ತು ಬಲ ಎರಡೂ ಜಾಸ್ತಿ. ಕೇವಲ 3.1 ಸೆಕೆಂಡ್‌ಗಳಲ್ಲಿ 0ದಿಂದ 100 ಕಿ.ಮೀ. ವೇಗ ಪಡೆದುಕೊಳ್ಳಬಲ್ಲದು. ಪ್ರತಿಗಂಟೆಗೆ 355ಕಿ.ುà. ಗರಿಷ್ಠ ವೇಗದ ಮಿತಿ ನೀಡಲಾಗಿದೆ. ಅಂದರೆ ಊಹಿಸಿಕೊಳ್ಳಿ, ಫಾರ್ಮುಲಾ ಒನ್ ರೇಸ್‌ಗಳಲ್ಲಿ ಬಳಸಿಕೊಳ್ಳಲಾಗುವ ಕಾರಿನ ವೇಗದಲ್ಲೇ ಚಲಿಸಲು ಸಾಧ್ಯ. ಸುರಕ್ಷತೆಗೆ ತಂತ್ರಜಾnನದ ಬಲ
ವೇಗದ ಮಿತಿ ಹಾಗೂ ಕಾಸಿಗೆ ತಕ್ಕ ಕಜಾjಯ ಎನ್ನುವಂತೆ ಜೊಂಡಾ ಎಚ್‌ಪಿ ಬರ್ಚೆಟ್ಟ ಕಾರಿನ ಸುರಕ್ಷತೆಯ ಗುಣಮಟ್ಟವನ್ನು ಸಾಕಷ್ಟು ಹೆಚ್ಚಿಸಲಾಗಿದೆ. ಹೈಪರ್ ಕಾರು ಇದಾಗಿದ್ದರಿಂದ ಚಕ್ರಗಳ ವೇಗವನ್ನು ಹತೋಟಿಗೆ ತರಲು ಶ್‌ಬೋನ್ಸ್, ರಾಕರ್ ಆರ್ಮ್ಗಳನ್ನು, ಒಹೋಲೈನ್ ಶಾರ್ಕ್ಸ್, ಆಂಟಿ ರೂಲರ್ ಬಾರ್, 380ು.ುà. ಬ್ರೇಕ್‌ಗಳ ಜತೆ ವೆಂಟಿಲೇಟೆಡ್ ಡಿಸ್ಕ್ಗಳನ್ನು ಬಳಸಿಕೊಳ್ಳಲಾಗಿದೆ. ಮುಂಭಾಗದಲ್ಲಿ 6ಪಿಸ್ಟನ್ ಕಾಲಿಪರ್ಸ್, ಹಿಂಭಾಗದಲ್ಲಿ ಫ್ಲೋರ್ ಪಿಸ್ಟನ್ ಕಾಲಿಪರ್ಸ್‌ಗಳನ್ನು ಬಳಸಿಕೊಳ್ಳಲಾಗಿದೆ. ಹೀಗಾಗಿ ಕಾರು ಎಷ್ಟೇ ವೇಗದಲ್ಲಿ ಓಡುತ್ತಿದ್ದರೂ ಸೆಕೆಂಡ್‌ಗಳ ಲೆಕ್ಕಾಚಾರದಲ್ಲಿ ಹತೋಟಿಗೆ ಪಡೆದುಕೊಳ್ಳುವ ಅವಕಾಶ ನೀಡಲಾಗಿದೆ. ಇವೆಲ್ಲವೂ ಚಾಲಕ ಸ್ನೇಯಾಗಿವೆ ಎನ್ನುವುದು ಕಂಪನಿಯ ಅಂಬೋಣ. ಜೊಂಡಾ ಎಚ್‌ಪಿ ಬರ್ಚೆಟ್ಟ ಕಾರಿನ ಬೆಲೆ: 12 ಕೋಟಿ ರೂ. ಹೈಲೈಟ್ಸ್
– ಟಾಪ್‌ಲೆಸ್ ನ್ಯಾಸವೇ ಸ್ಪೆಷಲ್
– ಇಬ್ಬರು ಮಾತ್ರ ಕುಳಿತುಕೊಳ್ಳಲು ಸಾಧ್ಯ
– ವಿಶ್ವದ ಅತ್ಯಂತ ದುಬಾರಿ ಕಾರು ಎಂಬ ಹೆಗ್ಗಳಿಕೆ – ಗಣಪತಿ ಅಗ್ನಿಹೋತ್ರಿ