Advertisement

ನಿಮ್ಮನ್ನು ಮುಜುಗರದಿಂದ ತಪ್ಪಿಸಲು ವಾಟ್ಸ್‌ಆ್ಯಪ್‌ ಹೊಸ ಫೀಚರ್‌

10:17 PM Dec 19, 2022 | Team Udayavani |

ನವದೆಹಲಿ: ಇಂಥದ್ದೊಂದು ಸನ್ನಿವೇಶ ನೀವೆಲ್ಲರೂ ಎದುರಿಸಿರುತ್ತೀರಿ- ತಪ್ಪಾಗಿ ಯಾರಿಗೋ ಕಳುಹಿಸುವ ಸಂದೇಶವನ್ನು ಮತ್ಯಾವುದೋ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಕಳುಹಿಸುತ್ತೀರಿ. ಗೊತ್ತಾದ ಕೂಡಲೇ ಅದನ್ನು ಡಿಲೀಟ್‌ ಮಾಡುವ ಭರದಲ್ಲಿ, “ಡಿಲೀಟ್‌ ಫಾರ್‌ ಎವ್ರಿವನ್‌’ ಆಯ್ಕೆ ಒತ್ತುವ ಬದಲು, “ಡಿಲೀಟ್‌ ಫಾರ್‌ ಮಿ’ ಎಂದು ಒತ್ತುತ್ತೀರಿ. ಈಗ ಆ ಗ್ರೂಪ್‌ನಲ್ಲಿ ನೀವು ಕಳುಹಿಸಿದ ಸಂದೇಶ ನಿಮಗೊಬ್ಬರಿಗೆ ಕಾಣಿಸುವುದಿಲ್ಲ.

Advertisement

ಆದರೆ, ಉಳಿದವರೆಲ್ಲರಿಗೂ ಅದು ಕಾಣಿಸುತ್ತದೆ. ಆಗ ನೀವು ಮುಜುಗರಕ್ಕೊಳಗಾಗುತ್ತೀರಿ. ಏನು ಮಾಡುವುದೆಂದು ತೋಚುವುದಿಲ್ಲ.

ಈ ಸಮಸ್ಯೆಗೆ ಈಗ ವಾಟ್ಸ್‌ಆ್ಯಪ್‌ ಕಂಪನಿ ಪರಿಹಾರ ಕಂಡುಕೊಂಡಿದೆ. ನಿಮಗಾಗುವ ಮುಜುಗರ ತಪ್ಪಿಸಲೆಂದೇ ಹೊಸ ಫೀಚರ್‌ವೊಂದನ್ನು ಪರಿಚಯಿಸಿದೆ. ಅದರಂತೆ, ನೀವು ಮೆಸೇಜ್‌ ಡಿಲೀಟ್‌ ಮಾಡಿದ ಕೂಡಲೇ ನಿಮಗೆ ತಪ್ಪು ಸರಿಪಡಿಸಲು “5 ಸೆಕೆಂಡು’ಗಳ ಕಾಲಾವಕಾಶ ಸಿಗಲಿದೆ. ಮೆಸೇಜ್‌ ಡಿಲೀಟ್‌ ಆದ ಜಾಗದಲ್ಲೇ ಒಂದು ಪುಟ್ಟ ಡೈಲಾಗ್‌ ಬಾಕ್ಸ್‌ ಕಾಣಿಸಿಕೊಳ್ಳುತ್ತದೆ. ಅದರಲ್ಲಿ “ಅನ್‌ಡೂ'(UNDO) ಎಂಬ ಬಟನ್‌ ಕಾಣಿಸಿಕೊಳ್ಳುತ್ತದೆ.

ಆ ಬಟನ್‌ ಕ್ಲಿಕ್‌ ಮಾಡಿದ ಕೂಡಲೇ, ನೀವು ಆಗಷ್ಟೇ ಡಿಲೀಟ್‌ ಮಾಡಿದ್ದ ಸಂದೇಶ ಮತ್ತೆ ನಿಮ್ಮ ಕಣ್ಣೆದುರಿಗೆ ಬರುತ್ತದೆ. ಆಗ ನೀವು ಹಿಂದಿನಂತೆ ತಪ್ಪು ಮಾಡದೇ “ಡಿಲೀಟ್‌ ಫಾರ್‌ ಎವ್ರಿವನ್‌’ ಎಂಬ ಆಯ್ಕೆ ಕ್ಲಿಕ್‌ ಮಾಡಬಹುದು. ನಂತರ ಆ ಗ್ರೂಪ್‌ನಲ್ಲಿರುವ ಎಲ್ಲರಿಗೂ ಸಂದೇಶ ಡಿಲೀಟ್‌ ಆಗುತ್ತದೆ. ಈ ಹೊಸ ಫೀಚರ್‌ಗೆ ವಾಟ್ಸ್‌ಆ್ಯಪ್‌ “ಆ್ಯಕ್ಸಿಡೆಂಟಲ್‌ ಡಿಲೀಟ್‌’ ಎಂದು ಹೆಸರಿಟ್ಟಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next