Advertisement

ನನ್ನ ಕೆರಿಯರ್‌’ಗೆ ಮೈಲೇಜ್‌ ನೀಡುವ ಸಿನಿಮಾ…; ತೋತಾಪುರಿ ಕುರಿತು ಅದಿತಿ ಮಾತು

04:38 PM Sep 23, 2022 | Team Udayavani |

“ನನ್ನ ಕೆರಿಯರ್‌ನಲ್ಲಿ ಈ ಸಿನಿಮಾ ತುಂಬಾ ಮುಖ್ಯವಾಗುತ್ತದೆ…’ – ಹೀಗೆ ಹೇಳಿ ನಕ್ಕರು ನಟಿ ಅದಿತಿ ಪ್ರಭುದೇವ. ಅವರು ಹೇಳಿದ್ದು “ತೋತಾಪುರಿ’ ಚಿತ್ರದ ಬಗ್ಗೆ. ಈ ಚಿತ್ರ ಸೆ.30ರಂದು ತೆರೆಕಾಣುತ್ತಿದೆ. ಈಗಾಗಲೇ ಟ್ರೇಲರ್‌ ಹಾಗೂ ಹಾಡಿನಲ್ಲಿ ಅದಿತಿ ಮಿಂಚಿದ್ದಾರೆ. ಈ ಚಿತ್ರದ ಮೇಲೆ ಈಗ ಅದಿತಿ ನಿರೀಕ್ಷೆ ಇಟ್ಟಿದ್ದಾರೆ.

Advertisement

“ವಿಜಯ ಪ್ರಸಾದ್‌ ಅವರ ಕೆಲವು ಸಿನಿಮಾಗಳನ್ನು ನೋಡಿದ್ದೆ ಮತ್ತು ಅವರ ಶೈಲಿ ಗೊತ್ತಿತ್ತು. ನನ್ನನ್ನು ನೋಡಿದ ಕೂಡಲೇ ಅವರ ಕಲ್ಪನೆಯ ಪಾತ್ರಕ್ಕೆ ಹೊಂದಿಕೆಯಾಗುತ್ತೇನೆಂದು ನನ್ನನ್ನುಆಯ್ಕೆ ಮಾಡಿದರು. ಆರಂಭದಲ್ಲಿ ಸಿನಿಮಾದ ಸಂಭಾಷO ಅದರೊಳಿನ ಒಳಾರ್ಥಗಳು ನನಗೆ ಅರ್ಥವಾಗುತ್ತಿರಲಿಲ್ಲ. ಮುಂದೆ ಶೂಟಿಂಗ್‌ ಮಾಡುತ್ತಾ ಗೊತ್ತಾಯಿತು. ತುಂಬಾ ಒಳ್ಳೆಯ ಪಾತ್ರ. ಇಡೀ ಸಿನಿಮಾವನ್ನು ನೈಜವಾಗಿ ಕಟ್ಟಿಕೊಟ್ಟಿದ್ದಾರೆ. ಹಳ್ಳಿ ಕಡೆ ಒಂದು ತುಂಬಿದ ಕುಟುಂಬ ಹೇಗಿರುತ್ತದೋ ಮತ್ತು ಎಷ್ಟು ನೈಜವಾಗಿರುತ್ತದೋ ಅದೇ ರೀತಿ ಇಡೀ ಸಿನಿಮಾವಿದೆ. ಮುಖ್ಯವಾಗಿ ಸಿನಿಮಾದಲ್ಲೊಂದು ಅದ್ಭುತವಾದ ಸಂದೇಶವಿದೆ. ಜಾತಿ, ಧರ್ಮ ಹಾಗೂ ಮನುಷ್ಯತ್ವ ..ಈ ಮೂರು ವಿಚಾರ ಸಿನಿಮಾದ ಹೈಲೈಟ್‌. ನನ್ನ ಕೆರಿಯರ್‌ನಲ್ಲಿ ಈ ಚಿತ್ರ ತುಂಬಾ ಭಿನ್ನವಾಗಿ ನಿಲ್ಲುತ್ತದೆ’ ಎನ್ನುತ್ತಾರೆ.

ಇದನ್ನೂ ಓದಿ:2024ರಲ್ಲಿ ಲಾಲು-ನಿತೀಶ್ ಜೋಡಿ ನಿರ್ನಾಮ: ಬಿಹಾರದಲ್ಲಿ ಗುಡುಗಿದ ಅಮಿತ್ ಶಾ

ಚಿತ್ರದಲ್ಲಿ ಅದಿತಿ ಶಕೀಲಾ ಭಾನು ಎಂಬ ಮುಸ್ಲಿಂ ಹುಡುಗಿಯ ಪಾತ್ರ ಮಾಡಿದ್ದರೂ, ಸಂಭಾಷಣೆ ಮಾತ್ರ ಅಚ್ಚ ಕನ್ನಡದಲ್ಲೇ ಇದೆ. ಅದು ಕೂಡಾ ಅದಿತಿ ಅವರಿಗೆ ಖುಷಿ ಕೊಟ್ಟಿದೆಯಂತೆ. ಜಗ್ಗೇಶ್‌ ಹಾಗೂ ವಿಜಯಪ್ರಸಾದ್‌ ಜೋಡಿ ಈಗಾಗಲೇ ನೀರ್‌ ದೋಸೆ ಸಿನಿಮಾ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದೆ ಎಂಬುದಕ್ಕೆ ಆ ಚಿತ್ರಕ್ಕೆ ಸಿಕ್ಕಿರುವ ಅಭೂತಪೂರ್ವ ಗೆಲುವೇ ಸಾಕ್ಷಿ. ಮುಖ್ಯವಾಗಿ ಮಹಿಳೆಯರು ಹಾಗೂ ಕುಟುಂಬವರ್ಗ ವೀಕ್ಷಿಸಿದ “ನೀರ್‌ದೋಸೆ’ ಬಾಕ್ಸಾಫೀಸ್‌ನಲ್ಲೂ ದೊಡ್ಡ ಮಟ್ಟದಲ್ಲಿ ದಾಖಲೆ ಮಾಡಿದೆ.

ಇನ್ನು ತೋತಾಪುರಿ ಇವರಿಬ್ಬರ ಕಾಂಬಿನೇಷನ್‌ನ ಮತ್ತೂಂದು ಚಿತ್ರ ಎಂಬುದು ಒಂದೆಡೆಯಾದರೆ, ಒಳ್ಳೆಯ ಸಮಯಕ್ಕೆ ಬಿಡುಗಡೆಯಾಗುತ್ತಿರುವುದರಿಂದ ಜನ ಈ ಚಿತ್ರವನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ಕೂಡಾ ಅದಿತಿ ಅವರಿಗಿದೆ.

Advertisement

“ತೋತಾಪುರಿ’ ಎರಡು ಭಾಗಗಳಲ್ಲಿ ತಯಾರಾಗಿದ್ದು, ನೂರಾರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕಾಮಿಡಿ ಸಿನಿಮಾವೊಂದಕ್ಕೆ ಈ ಪರಿ ಶೂಟಿಂಗ್‌ ಮಾಡಿರುವುದು ಒಂದೆಡೆಯಾದರೆ, ಜಗ್ಗೇಶ್‌ ನಟಿಸಿರುವ ಸಿನಿಮಾಗಳ ಪೈಕಿ ತೋತಾಪುರಿ ಬಿಗ್‌ ಬಜೆಟ್‌ ಸಿನಿಮಾ ಎಂಬುದು ಗಮನಾರ್ಹ. ಹಾಗೆಯೇ ಚಿತ್ರದಲ್ಲಿ ಸಾಕಷ್ಟು ತಾರಾಸಮೂಹವೇ ಇದೆ ಎಂಬುದು ಮತ್ತೂಂದು ಗಮನಾರ್ಹ ವಿಷಯ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ವೀಣಾ ಸುಂದರ್‌, ದತ್ತಣ್ಣ, ಹೇಮಾದತ್‌ ಸೇರಿದಂತೆ ಅನೇಕ ಕಲಾವಿದರು ತೋತಾಪುರಿ ತಾರಾಗಣದಲ್ಲಿದ್ದಾರೆ. ಕೆ.ಎ.ಸುರೇಶ್ ಈ ಚಿತ್ರದ ನಿರ್ಮಾಪಕರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next