Advertisement
“ವಿಜಯ ಪ್ರಸಾದ್ ಅವರ ಕೆಲವು ಸಿನಿಮಾಗಳನ್ನು ನೋಡಿದ್ದೆ ಮತ್ತು ಅವರ ಶೈಲಿ ಗೊತ್ತಿತ್ತು. ನನ್ನನ್ನು ನೋಡಿದ ಕೂಡಲೇ ಅವರ ಕಲ್ಪನೆಯ ಪಾತ್ರಕ್ಕೆ ಹೊಂದಿಕೆಯಾಗುತ್ತೇನೆಂದು ನನ್ನನ್ನುಆಯ್ಕೆ ಮಾಡಿದರು. ಆರಂಭದಲ್ಲಿ ಸಿನಿಮಾದ ಸಂಭಾಷO ಅದರೊಳಿನ ಒಳಾರ್ಥಗಳು ನನಗೆ ಅರ್ಥವಾಗುತ್ತಿರಲಿಲ್ಲ. ಮುಂದೆ ಶೂಟಿಂಗ್ ಮಾಡುತ್ತಾ ಗೊತ್ತಾಯಿತು. ತುಂಬಾ ಒಳ್ಳೆಯ ಪಾತ್ರ. ಇಡೀ ಸಿನಿಮಾವನ್ನು ನೈಜವಾಗಿ ಕಟ್ಟಿಕೊಟ್ಟಿದ್ದಾರೆ. ಹಳ್ಳಿ ಕಡೆ ಒಂದು ತುಂಬಿದ ಕುಟುಂಬ ಹೇಗಿರುತ್ತದೋ ಮತ್ತು ಎಷ್ಟು ನೈಜವಾಗಿರುತ್ತದೋ ಅದೇ ರೀತಿ ಇಡೀ ಸಿನಿಮಾವಿದೆ. ಮುಖ್ಯವಾಗಿ ಸಿನಿಮಾದಲ್ಲೊಂದು ಅದ್ಭುತವಾದ ಸಂದೇಶವಿದೆ. ಜಾತಿ, ಧರ್ಮ ಹಾಗೂ ಮನುಷ್ಯತ್ವ ..ಈ ಮೂರು ವಿಚಾರ ಸಿನಿಮಾದ ಹೈಲೈಟ್. ನನ್ನ ಕೆರಿಯರ್‌ನಲ್ಲಿ ಈ ಚಿತ್ರ ತುಂಬಾ ಭಿನ್ನವಾಗಿ ನಿಲ್ಲುತ್ತದೆ’ ಎನ್ನುತ್ತಾರೆ.
Related Articles
Advertisement
“ತೋತಾಪುರಿ’ ಎರಡು ಭಾಗಗಳಲ್ಲಿ ತಯಾರಾಗಿದ್ದು, ನೂರಾರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕಾಮಿಡಿ ಸಿನಿಮಾವೊಂದಕ್ಕೆ ಈ ಪರಿ ಶೂಟಿಂಗ್ ಮಾಡಿರುವುದು ಒಂದೆಡೆಯಾದರೆ, ಜಗ್ಗೇಶ್ ನಟಿಸಿರುವ ಸಿನಿಮಾಗಳ ಪೈಕಿ ತೋತಾಪುರಿ ಬಿಗ್ ಬಜೆಟ್ ಸಿನಿಮಾ ಎಂಬುದು ಗಮನಾರ್ಹ. ಹಾಗೆಯೇ ಚಿತ್ರದಲ್ಲಿ ಸಾಕಷ್ಟು ತಾರಾಸಮೂಹವೇ ಇದೆ ಎಂಬುದು ಮತ್ತೂಂದು ಗಮನಾರ್ಹ ವಿಷಯ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ವೀಣಾ ಸುಂದರ್, ದತ್ತಣ್ಣ, ಹೇಮಾದತ್ ಸೇರಿದಂತೆ ಅನೇಕ ಕಲಾವಿದರು ತೋತಾಪುರಿ ತಾರಾಗಣದಲ್ಲಿದ್ದಾರೆ. ಕೆ.ಎ.ಸುರೇಶ್ ಈ ಚಿತ್ರದ ನಿರ್ಮಾಪಕರು