Advertisement

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

01:42 AM Apr 26, 2024 | Team Udayavani |

ಕೋಲ್ಕತಾ: 2024ರ ಲೋಕಸಭಾ ಚುನಾವಣೆ, ವಿಶ್ವದಲ್ಲೇ ದುಬಾರಿ ಚುನಾವಣೆಯಾಗುವ ನಿಟ್ಟಿನಲ್ಲಿ ಸಾಗಿದೆ ಎಂದು ಸೆಂಟರ್‌ ಫಾರ್‌ ಮೀಡಿಯಾ (ಸಿಎಂಎಸ್‌) ಮುಖ್ಯಸ್ಥ ಎನ್‌.ಭಾಸ್ಕರ ರಾವ್‌ ಹೇಳಿದ್ದಾರೆ. ಕಳೆದ 35 ವರ್ಷಗಳಿಂದ ದೇಶದಲ್ಲಿನ ಚುನಾವಣ ವೆಚ್ಚವನ್ನು ಗಮನಿಸುತ್ತಿರುವ ಅವರ ಪ್ರಕಾರ, 2019ರಲ್ಲಿ 60,000 ಕೋಟಿ ರೂ. ಖರ್ಚಾಗಿತ್ತು. ಈ ಬಾರಿ ಅದು ದುಪ್ಪಟ್ಟಾಗಿದ್ದು, 1.35 ಲಕ್ಷ ಕೋಟಿ ರೂ.ಗೇರಲಿದೆ ಎಂದಿದ್ದಾರೆ. ಈ ಲೆಕ್ಕಾಚಾರವನ್ನು ಮಾಡುವಾಗ ಚುನಾವಣೆಗಾಗಿ ಆಯೋಗ, ರಾಜಕೀಯ ಪಕ್ಷಗಳು, ಸಂಸ್ಥೆಗಳು, ಅಭ್ಯರ್ಥಿಗಳು, ಸರಕಾರಗಳು ಮಾಡಿದ ಖರ್ಚು ಸೇರಿದೆ. ನೇರ, ಪರೋಕ್ಷ ಖರ್ಚುಗಳೂ ಈ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಭಾಸ್ಕರ ರಾವ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next