Advertisement

ದೇಶದ ಹಲವು ರಾಜ್ಯಗಳಲ್ಲಿ ಮೆಡಿಕಲ್ ‌ಆಕಿಜನ್ಸ್ ‌ಕೊರತೆ

06:10 PM Sep 30, 2020 | Nagendra Trasi |

ನವದೆಹಲಿ: ದೇಶದ ಹಲವು ರಾಜ್ಯಗಳ ಆಸ್ಪತ್ರೆಗಳಲ್ಲಿ ಮೆಡಿಕಲ್‌ ಆಕ್ಸಿಜನ್‌ ಕೊರತೆ ಉಂಟಾಗಿದೆ. ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ದೇಶದಲ್ಲಿ
ಹೆಚ್ಚಾಗುತ್ತಿರುವಂತೆಯೇ ಈ ಆತಂಕಕಾರಿ ವಿಚಾರ ಹೊರಬಿದ್ದಿದೆ.

Advertisement

ದೇಶದ ಪೂರ್ವ ಭಾಗ ಮತ್ತು ಪಶ್ಚಿಮ ಭಾಗಗಳಲ್ಲಿ ಮೆಡಿಕಲ್‌ ಆಕ್ಸಿಜನ್‌ ಪೂರೈಕೆ ಮಾಡುವ ಸ್ಥಾವರಗಳು ಹೆಚ್ಚಾಗಿವೆ. ಆದರೆ, ನವದೆಹಲಿ, ಮಧ್ಯ ಪ್ರದೇಶ,ಬಿಹಾರಗಳಲ್ಲಿಅಂಥ ಸ್ಥಾವರಗಳ ಕೊರತೆ ಇದೆ.

ಮಾರ್ಚ್‌ನಲ್ಲಿ 1,300 ಸೋಂಕಿನ ಪ್ರಕರಣಗಳು ವರದಿಯಾಗಿದ್ದಾಗ 750 ಟನ್‌ ಮೆಡಿಕಲ್‌ ಆಕ್ಸಿಜನ್‌ ಬಳಕೆ ಮಾಡಲಾಗಿತ್ತು ಎಂದು ಅಖಿಲ ಭಾರತ ಅನಿಲ
ಉತ್ಪಾದಕರ ಸಂಘಟನೆ ಅಧ್ಯಕ್ಷ ಸಾಕೇತ್‌ ಟಿಕು ತಿಳಿಸಿದ್ದಾರೆ. ಈ ತಿಂಗಳಲ್ಲಿ ಅದರ ಬಳಕೆ ಪ್ರಮಾಣ ಪ್ರತಿ ದಿನಕ್ಕೆ 2,800 ಟನ್‌ಗೆ ಏರಿಕೆಯಾಗಿದೆ ಎಂದಿದ್ದಾರೆ.
ಹೀಗಾಗಿ, ಆಸ್ಪತ್ರೆ ಮತ್ತು ವೈದ್ಯಕೀಯ ಅಗತ್ಯ ಪೂರೈಸಲು ಹೆಣಗಾಡುವಂತಾಗಿದೆ ಎಂದರು.

ದೇಶದಲ್ಲಿ ಕೋವಿಡ್ ಸೋಂಕಿನಿಂದ ಗುಣ ಮುಖರಾಗುವವರ ಶೇಕಡಾವಾರು ಪ್ರಮಾಣ 83ಕ್ಕೆ ಏರಿಕೆಯಾಗಿದೆ. ಕರ್ನಾಟಕ, ಮಹಾರಾಷ್ಟ್ರ. ಆಂಧ್ರಪ್ರದೇಶ, ತಮಿಳುನಾಡು, ಉ.ಪ್ರದೇಶ, ದೆಹಲಿ, ಒಡಿಶಾ, ಕೇರಳ, ಪ. ಬಂಗಾಳ, ಮಧ್ಯ ಪ್ರದೇಶಗಳಿಂದ ಶೇ.73ರಷ್ಟು ಗುಣ ಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ದಿನವಹಿ 20 ಸಾವಿರ ಗುಣಮುಖರಾಗಿದ್ದರೆ, ಕರ್ನಾಟಕ, ಆಂಧ್ರದಲ್ಲಿ 7 ಸಾವಿರಕ್ಕಿಂತಲೂ ಅಧಿಕ ಮಂದಿ ಚೇತರಿಸಿಕೊಂಡಿದ್ದಾರೆ.

ಸೋಮವಾರ ಬೆಳಗ್ಗೆ 8 ಗಂಟೆಯಿಂದ ಮಂಗಳವಾರ ಬೆಳಗ್ಗೆ 8 ಗಂಟೆಯ ವರೆಗಿನ ಅವಧಿಯಲ್ಲಿ 70,589 ಹೊಸ ಕೇಸುಗಳು ದಾಖಲಾಗಿವೆ. 776 ಮಂದಿ ಅಸುನೀಗಿದ್ದಾರೆ. ಕಳೆದ ಕೆಲ ದಿನಗಳಿಗೆ ಹೋಲಿಕೆ ಮಾಡಿದರೆ ದಿನವಹಿ ಸೋಂಕು ದಾಖಲೆ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next