Advertisement

ಸೋಲಾರ್‌ಗೆ ಇಲ್ಲಿದೆ ನಾನಾ ದಾರಿಗಳು

03:55 PM Feb 05, 2018 | Team Udayavani |

ಹಣವನ್ನು ಹೇಗೋ ಹೊಂಚಬಹುದು. ಸಾಲ ಸಿಗುತ್ತದೆ. ಅಷ್ಟಿಷ್ಟು ಸಬ್ಸಿಡಿಯೂ ಗಿಟ್ಟುತ್ತದೆ. ಆದರೆ ಸೋಲಾರ್‌ ಪ್ಯಾನೆಲ್‌ ಹಾಕುವ ಯೋಜನೆಯನ್ನು ಹಾಕಿಕೊಂಡವರು ಮೊದಲು ನಿರ್ಧರಿಸಬೇಕಾಗಿರುವುದು ಸ್ಥಳಾವಕಾಶವನ್ನು. ಸ್ವಂತದ ಮನೆ ಇರಬೇಕು. ಫ್ಯಾÉಟ್‌ನಲ್ಲಿ ಬಾಡಿಗೆಗೆ ಇರುವವರಿಗೆ ಅಥವಾ ಫ್ಯಾÉಟ್‌ ಮಾಲೀಕರಿಗೆ ಇದು ವಜ್ಯì. ಮನೆಯ ಮೇಲ್ಛಾವಣಿ ಇದಕ್ಕೆ ಪ್ರಶಸ್ತ ಬೇರುಗಳು ಮನೆಯನ್ನೇ ನಡುಗಿಸಬಲ್ಲವು !

Advertisement

ಸ್ಥಳ. ಒಂದೊಮ್ಮೆ ಆ ಅವಕಾಶ ಇನ್ನಾವುದೋ ಕಾರಣಕ್ಕೆ ಇಲ್ಲ ಎಂತಾದರೆ ನಾವು ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಿ ವಿದ್ಯುತ್‌ ಸ್ವಾವಲಂಬಿಯಾಗುವ ಅಥವಾ ವಿದ್ಯುತ್‌ ಪ್ರಸರಣ ಗ್ರಿಡ್‌ಗೆ ಮಾರಾಟ ಮಾಡುವ ಯೋಚನೆಯನ್ನೇ ಕೈ
ಬಿಡಬೇಕೇ?

ಗೋಡೆಗೆ ಪ್ಯಾನೆಲ್‌ ಶೃಂಗಾರ!
ಹೀಗೆ ಯೋಚಿಸಿ, ಮನೆಯ ಮೇಲ್ಛಾವಣಿ ಸೋಲಾರ್‌ ಪ್ಯಾನೆಲ್‌ ಹಾಕಲು ಸಿಕ್ಕುವುದಿಲ್ಲ. ಆದರೆ ಮನೆಯ ಎರಡು ಗೋಡೆಗಳು ಬಿಸಿಲಿದ್ದಷ್ಟೂ ಹೊತ್ತೂ ಸೂರ್ಯ ರಶ್ಮಿಗೆ ತೆರೆದಿರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಗೋಡೆಗೇ ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಿ ವಿದ್ಯುತ್‌ ಪಡೆಯಬಹುದೇ ಎಂಬ ಪ್ರಶ್ನೆ ಮೂಡದಿರದು. ಇದಕ್ಕೆ ನಾವು ದೂರದ ಅಮೆರಿಕಾದಿಂದ ದೃಷ್ಟಾಂತಗಳನ್ನೇ ಹಿಡಿದು ತರಬಹುದು! ನ್ಯೂಯಾರ್ಕ್‌ನ ಕ್ಯುಕೊÕàಟಿಕ್‌ ಸಿಸ್ಟಂ ಕಂಪನಿ ಅಲ್ಲಿನ ಅರ್ಬನ್‌ ಹೆಲ್ಪ್ ಪ್ಲಾನ್‌ ಹಾಸ್ಪಿಟಲ್‌ನ ಸಿಂಪ್ಸನ್‌ ಪೆವಿಲಿಯನ್‌ ಗೋಡೆಗೆ 37 ಕಿಲೋ ವ್ಯಾಟ್‌ ಸಾಮರ್ಥ್ಯದ ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಿದೆ. ಈ ಆಸ್ಪತ್ರೆಯ ಮೇಲ್ಛಾವಣಿಯ ಮೇಲೆ ಸೋಲಾರ್‌ ಪ್ಯಾನೆಲ್‌ ಕೂರಿಸಿದ್ದರೆ ಕೇವಲ 12.1 ಮೆಗಾ ವ್ಯಾಟ್‌ನಷ್ಟು ವಿದ್ಯುತ್‌ ಉತ್ಪಾದನೆಗೆ ಮಾತ್ರ ಅವಕಾಶವಿತ್ತು. ಹೆಚ್ಚುವರಿ ಸಾಮರ್ಥ್ಯದ ಸೋಲಾರ್‌ ಪ್ಯಾನೆಲ್‌ ಅಳವಡಿಕೆಯಿಂದ ಆಗುವ ವಿದ್ಯುತ್‌ ಲಾಭ ಒಂದೆಡೆಯಾದರೆ, ಉತ್ಪಾದನೆಯಾಗುವ ದರದಲ್ಲಿ ಶೇ. 30ರಷ್ಟು ಮಾತ್ರ ಕಡಿಮೆಯಾಗುತ್ತದೆ ಎಂಬುದು ಗಮನಾರ್ಹ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆದಿದ್ದು ಅಲಾಸ್ಕಾದಲ್ಲಿ ಸೂರ್ಯನ
ಪರಿಭ್ರಮಣೆಯನ್ನು ಅನುಸರಿಸಿ ಲೆಕ್ಕಿಸಿದಂತೆ ಗೋಡೆ ಸೋಲಾರ್‌ನ ಉತ್ಪಾದನೆ ಮೇಲ್ಛಾವಣಿ ಉತ್ಪಾದನೆಗಿಂತ ಶೇ. 9.8ರಷ್ಟು ಮಾತ್ರ ಕಡಿಮೆ ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಅಲಾಸ್ಕಾ ರಾಜ್ಯದಲ್ಲಿ ಸೋಲಾರ್‌ ಪ್ಯಾನೆಲ್‌ಗ‌ಳನ್ನು ಮನೆಯ ಕಲ್ಪನೆಯಿಂದಲೇ ಹೊರಗಿಟ್ಟು, ರಸ್ತೆ ಪಕ್ಕದಲ್ಲೆಲ್ಲ 15 ಡಿಗ್ರಿ ಕೋನದಲ್ಲಿ, ಅಷ್ಟೇಕೆ, ನೆಲಕ್ಕೆ 90 ಡಿಗ್ರಿ
ಲಂಬವಾಗಿಯೂ ಜೋಡಿಸಲಾಗಿದೆ. ಅಲ್ಲಿನ ಲೈಮ್‌ ಸೋಲಾರ್‌ ಸಿಸ್ಟಂ ಈ ಮಾದರಿಯನ್ನು ಅನುಸರಿಸಿದೆ.

ತೇಲುತ ವಿದ್ಯುತ್‌ ಶಾಕ್‌!
ಗುಜರಾತ್‌ನಲ್ಲಿ ನೀರಿನ ಕಾಲುವೆಗಳ ಮೇಲೆ ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಿ ವಿದ್ಯುತ್‌ ಉತ್ಪಾದನೆ ಮಾಡುವ ಕಥನಗಳನ್ನು ನಾವು ಕೇಳಿದ್ದೇವೆ. ಇದರಿಂದ ವಿದ್ಯುತ್‌ ಉತ್ಪತ್ತಿ ಜೊತೆಗೆ ಸೂರ್ಯ ಶಾಖದ ಕಾರಣ ಆವಿಯಾಗುವ ನೀರಿನ ಪ್ರಮಾಣ ಕೂಡ ಕಡಿಮೆಯಾಗುವುದು ಗಮನೀಯ ಅಂಶ. ಜಲ ವಿದ್ಯುತ್‌ನ ಹೊಸ ಯೋಜನೆ ಸಾಧ್ಯವಿಲ್ಲದಾಗ ಮತ್ತು ಅದಕ್ಕೆ ಬೇಕಾದ ನೀರೇ ಕಡಿಮೆಯಾಗುತ್ತಿರುವಾಗ ಇಂತಹ ಪ್ರಯೋಗ ಇನ್ನಷ್ಟು ಬೇಕು. ಕೇರಳ ರಾಜ್ಯದ ಬಹುದೊಡ್ಡ ಆಸ್ತಿ ನೀರು. ಈಗ ಆ ರಾಜ್ಯದಲ್ಲಿ ನೀರಿನ ಮೇಲೆ ತೇಲುವ ಸೋಲಾರ್‌ ಪ್ಯಾನೆಲ್‌ಗಳನ್ನು ಅಳವಡಿಸಿ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ.

ಅಲ್ಲಿನ ವೈಯನಾಡಿನ ಬನಸುರ ನದಿಯ ಮೇಲೆ 500 ಕೆಡಬ್ಯು$Éಪಿ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ 1938 ಪ್ಯಾನೆಲ್‌ಗ‌ಳನ್ನು ಖುದ್ದು ಕೇರಳದ ರಾಜ್ಯ ವಿದ್ಯುತ್‌ ಬೋರ್ಡ್‌ 9.25 ಕೋಟಿ ರೂ. ವೆಚ್ಚದಲ್ಲಿ ಹಾಕಿದೆ. 18 ಫೆರೊÅà ಸಿಮೆಂಟ್‌ ತೇಲು ವ್ಯವಸ್ಥೆಯ ಮೇಲೆ ಅಳವಡಿಸಿರುವ ಸೋಲಾರ್‌ ಪ್ಯಾನೆಲ್‌ ಬರೋಬ್ಬರಿ 1.25 ಎಕರೆ ಪ್ರದೇಶವನ್ನು ಅವಲಂಬಿಸಿದೆ. ಜನವರಿ 2016ರಲ್ಲಿ ಇದನ್ನು ಸ್ಥಾಪಿಸಲಾಗಿದೆ. ಈಗ ಪ್ರತಿ ವರ್ಷ 7.5 ಲಕ್ಷ ಯೂನಿಟ್‌ ವಿದ್ಯುತ್‌ ಈ ಸ್ಥಾವರದಿಂದ ಉತ್ಪಾದನೆಯಾಗುತ್ತಿದೆ. ಒಂದೊಮ್ಮೆ ನಮ್ಮ ರಾಜ್ಯದಲ್ಲೂ ಕರ್ನಾಟಕ ಪವರ್‌ ಕಾರ್ಪೊರೇಷನ್‌ ಲಿಂಗನಮಕ್ಕಿ ಆಣೆಕಟ್ಟಿನ ಶರಾವತಿ ಹಿನ್ನೀರಿನಲ್ಲೂ ಇಂತಹ ಫೋ›ಟಿಂಗ್‌ ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಿದರೆ ಆವಿಯಾಗುವ ನೀರಿನ ಪ್ರಮಾಣ ಕಡಿಮೆಯಾಗುತ್ತಿತ್ತು ಮತ್ತು ಹೆಚ್ಚುವರಿಯಾಗಿ ನೀರಿನ ಉತ್ಪಾದನೆಯೂ ಆಗುತ್ತಿತ್ತು.
ಅಲ್ಲವೇ?

Advertisement

ಈ ನಡುವೆ ಮಡಚಬಹುದಾದಂತ ಸೋಲಾರ್‌ ಪ್ಯಾನೆಲ್‌ಗ‌ಳು ಬಂದಿವೆ. ಸೋಲಾರ್‌ ಪ್ಯಾನೆಲ್‌ಗ‌ಳ ಕ್ಷಮತೆ ಹೆಚ್ಚಾಗಿದೆ. ಅವುಗಳ ಬೆಲೆಯಲ್ಲೂ ಗಣನೀಯ ಇಳಿಕೆಯಾಗಿದೆ. ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ. ಪರಿಸರಕ್ಕೆ ಅಪಾಯಕಾರಿಯಾದ ಅಣು ವಿದ್ಯುತ್‌, ಥರ್ಮಲ್‌ಗ‌ಳ ಜಾಗದಲ್ಲಿ ಸೋಲಾರ್‌ ಕಡೆಗೆ ನಾವು ವಾಲಲೇಬೇಕಾಗಿದೆ.

– ಗುರು ಸಾಗರ

Advertisement

Udayavani is now on Telegram. Click here to join our channel and stay updated with the latest news.

Next