Advertisement

ಇದು ಕ್ವಾಡ್‌ ಫೋನ್‌ಗಳ ಕಾಲ

12:28 AM Jan 31, 2020 | Sriram |

ದೂರವಾಣಿ ಸಂಪರ್ಕಕ್ಕಿಂತ ಮೊಬೈಲ್‌ಗ‌ಳನ್ನು ಕೆಮರಕ್ಕಾಗಿ ಬಳಸುವುದು ಜಾಸ್ತಿಯಾಗುತ್ತಿದೆ ಎನ್ನುತ್ತಾರೆ ಕಾರ್ತಿಕ್‌ ಅಮೈ.

Advertisement

ಸಂಪರ್ಕ ಸಂವಹನ ಉದ್ದೇಶಕ್ಕೆ ಬಂದ ಮೊಬೈಲ್‌ಗ‌ಳು ಇಂದು ಜನಪ್ರಿಯವಾಗು ತ್ತಿರುವುದು ಚರಿತ್ರೆ ನಿರ್ಮಾಣಕ್ಕೆ. ಹಾಗೆಂದರೆ ಪ್ರತಿಯೊಂದನ್ನೂ ದಾಖಲಿಸುತ್ತಾ, ಚರಿತ್ರೆಯನ್ನು ದಾಖಲಿಸುತ್ತಿದ್ದೇವೆಲ್ಲ ನಾವು. ನಮ್ಮ ಪ್ರವಾಸದಿಂದ ಹಿಡಿದು ಮನೆಯೊಳಗಿನ ಸವಿ ಕ್ಷಣಗಳನ್ನೂ ಹಿಡಿದಿಟ್ಟುಕೊಳ್ಳುತ್ತಿರುವುದು ಈಗ ಮೊಬೈಲ್‌ನಲ್ಲೇ.

ಅದೇ ಕಾರಣಕ್ಕಾಗಿ ಮೊಬೈಲ್‌ ಕುರಿತಾದ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿರುವುದು ಅದರ ಇನ್ನಿತರ ಉದ್ದೇಶಗಳಿಗೆ ಹೊರತು ಮುಖ್ಯ ಉದ್ದೇಶಕ್ಕಲ್ಲ. ಇದಕ್ಕೂ ಒಂದು ಕಾರಣವಿದೆ. ದೂರದಲ್ಲಿರುವವರೊಂದಿಗೆ ಮಾತನಾಡುವುದು, ತಮ್ಮ ಆಪ್ತರೊಂದಿಗೆ ಮಾತನಾಡುವುದು ಒಂದು ಕ್ರಮವಾಗಿಯಷ್ಟೇ ಉಳಿದಿದೆ. ಅಲ್ಲಿ ಮಾತಿನ ವಿನಿಮಯ, ಅಭಿಪ್ರಾಯ ವಿನಿಮಯ ಹೊರತು ಬೇರೇನೂ ಇಲ್ಲ. ಈ ಹಿನ್ನೆಲೆಯಿಂದಲೇ ನಮ್ಮ ಮೊಬೈಲ್‌ ಫೋನ್‌ ಆಲ್‌ ರೌಂಡರ್‌ ಆಗುತ್ತಿರುವುದು.

ವಿಜಿಎ ಕೆಮೆರಾದಿಂದ ಮೆಗಾ ಫಿಕ್ಸೆಲ್‌ ಕೆಮರಾ ಬಂದಾಗಲೇ ಎಲ್ಲರೂ ಹುಬ್ಬೇರಿಸಿದರು. ಬಳಿಕ ಮೆಗಾಫಿಕ್ಸೆಲ್‌ ಸಂಖ್ಯೆ ಹೆಚ್ಚುತ್ತಾ ಹೋಯಿತು. ಅದಾದ ಬಳಿಕ ಮೊಬೈಲ್‌ ಮಾರ್ಕೆಟ್‌ ವಿಸ್ತರಣೆಗೆ ಹತ್ತಾರು ಪೂರಕ ಸಂಗತಿಗಳು ಸೇರಿಕೊಂಡವು. ಬರೆಯುವ ಪ್ಯಾಡ್‌ ಆಯಿತು, ಸಿನಿಮಾ ಥಿಯೇಟರ್‌ ಸಹ ಆಯಿತು. ಇವತ್ತು ಕೆಲವು ಆ್ಯಪ್‌ ಗಳಿಂದ ನಮ್ಮ ಮನೆಯ ಬಚ್ಚಲು ಮನೆಯಲ್ಲಿರುವ ಗೀಸರ್‌ ಅನ್ನೂ ಆಫ್ ಮಾಡಲೂ ಸಾಧ್ಯ.

ಆದರೂ ಕೆಮರಾಗಳ ಹಿಂದಿನ ಆಕರ್ಷಣೆ ಮಾತ್ರ ಕಡಿಮೆಯಾಗಿಲ್ಲ. ಬ್ಯಾಕ್‌ ಕೆಮರಾದಿಂದ ಫ್ರಂಟ್‌ ಕೆಮರಾ, ಡ್ಯುಯೆಲ್‌ ಕೆಮರಾ, ಟ್ರಿಪಲ್‌ ಕೆಮರಾ ಎಂದೆಲ್ಲಾ ಬಂದಿವೆ. 1 ಮೆಗಾಫಿಕ್ಸೆಲ್‌ನಿಂದ 108 ಮೆಗಾ ಫಿಕ್ಸೆಲ್‌ ತನಕ ಸಾಮರ್ಥ್ಯ ವಿಸ್ತರಣೆ ಆಗಿದೆ. ಈಗ 3 ಅಥವಾ ಟ್ರಿಪಲ್‌ ಕೆಮರಾಗಳ ಬಳಿಕ ಕ್ವಾಡ್‌ ಕೆಮರಾ ಫೋನ್‌ ಬಂದಿದೆ.
ನಮ್ಮಲ್ಲಿ ಮೊದಲ ಬಾರಿ ಕ್ವಾಡ್‌ ಕೆಮರಾಗಳಿರುವ ಫೋನ್‌ಗಳನ್ನು ಪರಿಚಯಿಸಿದ್ದು ಸ್ಯಾಮ್‌ಸಂಗ್‌ ಕಂಪೆನಿ. ಇದು ಗ್ಯಾಲಕ್ಸಿ ಎ 9 ಫೋನ್‌ ಮೂಲಕ ಸದ್ದು ಮಾಡಿತ್ತು. ಈ ಕ್ವಾಡ್‌ಫೋನ್‌ಗಳು ಡಿಎಸ್‌ಎಲ್‌ಆರ್‌ಗಳಿಗೆ ಯಾವುದೇ ಕಡಿಮೆ ಇಲ್ಲ. ಅಷ್ಟೇ ಸೊಗಸಾದ ಚಿತ್ರಗಳನ್ನು ಸೆರೆ ಹಿಡಿಯಬಲ್ಲವು.

Advertisement

ಕ್ವಾಡ್‌ ಕೆಮರಾ ಯಾಕೆ ಬೇಕು?
ಮೊದಲನೆಯದಾಗಿ ಡಿಎಸ್‌ಎಲ್‌ಆರ್‌ಗಳಂತೆ ಕಾರ್ಯ ನಿರ್ವಹಿಸುತ್ತವೆ. ಸನಿಹ ಇರುವ ಚಿತ್ರಗಳ ಜತೆಗೆ ದೂರದ ಚಿತ್ರಗಳನ್ನೂ ಸ್ಪಷ್ಟವಾಗಿ ಸೆರೆ ಹಿಡಿಯುತ್ತದೆ. ಇದರಲ್ಲಿ ಫೋಕಸ್‌ ಜತೆಗೆ ಉತ್ತಮ ಗುಣಮಟ್ಟದ ಚಿತ್ರಗಳು ಸೆರೆಯಾಗುವಂತೆ ಮಾಡುತ್ತದೆ. ಹೈ ರೆಸಲ್ಯೂಶನ್‌ ಚಿತ್ರಗಳೂ ಲಭ್ಯ. ಸ್ವಾಭಾವಿಕ (ಬಣ್ಣ ಇತ್ಯಾದಿ) ಚಿತ್ರದ ಜತೆಗೆ ಜತೆ ಇನ್‌ ಡೋರ್‌ ಅಥವಾ ರಾತ್ರಿ ಹೊತ್ತಿನ ಚಿತ್ರಗಳೂ ಸ್ಪಷ್ಟವಾಗಿ ಬರುತ್ತವೆ. ನೀವು ಚಿತ್ರವನ್ನು ಜೂಮ್‌ ಅಥವಾ ಕ್ರಾಪ್‌ ಮಾಡಿದಾಗಲೂ ಚಿತ್ರದ ಗುಣಮಟ್ಟ ಹಾಳಾಗದು. ಇನ್ನು ಈ ಕ್ವಾಡ್‌ ಕೆಮರಾಗಳ ಚಿತ್ರಗಳು ಹೆಚ್ಚು ಸ್ಪಷ್ಟ ಮತ್ತು ಪರಿಣಾಮಕಾರಿ. ದೂರದ ವಸ್ತುಗಳು ಅತ್ಯುತ್ತಮವಾಗಿ ಸೆರೆಯಾಗುತ್ತವೆ. ಇನ್ನು ಆ್ಯಕ್ಷನ್‌ ಚಿತ್ರಗಳನ್ನೂ ಚೆನ್ನಾಗಿ ಸೆರೆ ಹಿಡಿಯುತ್ತದೆ. ಉದಾಹರಣೆಗೆ ಬೆಂಕಿಯ ಕಿಡಿಗಳು ಹಾದು ಹೋಗುವುದನ್ನು ನೀವು ಸೆರೆ ಹಿಡಿಯಲು ಪ್ರಯತ್ನಿಸಿದ್ದರೆ ನಿಮ್ಮ ಕಲ್ಪನೆಯಂತೆ ಚಿತ್ರಗಳನ್ನು ಪಡೆಯಬಹುದು. ಇನ್ನು ಪೋಟ್ರೇಟ್‌ ಅಥವಾ ವ್ಯಕ್ತಿ ಚಿತ್ರಗಳನ್ನೂ ಚೆನ್ನಾಗಿ ತೆಗೆಯಬಹುದು. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಸ್ಯಾಮಸಂಗ್‌, ಹುವಾಯಿ, ರಿಯಲ್‌ ಇ, ರೆಡ್‌ಮಿ ಹಾಗೂ ಒಪ್ಪೊ ಕಂಪೆನಿಗಳ ಫೋನ್‌ಗಳು ಲಭ್ಯವಿವೆ.

ಏನಿದು ಕ್ವಾಡ್‌ ಕೆಮರಾ
ಕ್ವಾಡ್‌ ಕೆಮರಾ ಎಂದರೆ 4 ಕೆಮರಾಗಳಿರುವ ಫೋನ್‌. ಅಂದರೆ ಈಗ ಇರುವ ಡ್ಯುಯಲ್‌ ಅಥವಾ 2 ಕೆಮರಾಗಳ ಫೋನ್‌ನಂತೆ ಒಂದರ ಬಳಿಕ ಒಂದರಂತೆ 4 ಕೆಮರಾಗಳನ್ನು ಹೊಂದಿದೆ. ಹಾಗೆಂದು ಎಲ್ಲವೂ ಒಂದೇ ಕೆಲಸ ಮಾಡುತ್ತವೆ ಎಂದರ್ಥವಲ್ಲ. ನಾಲ್ಕು ಕೆಮರಾಗಳ ಪೈಕಿ ಕ್ರಮವಾಗಿ ಮೈನ್‌ ಕೆಮರಾ, ಟೆಲಿಫೋಟೊ ಲೆನ್ಸ್‌, ಆಲ್ಟ್ರಾ ವೈಡ್‌ ಆ್ಯಂಗಲ್‌ ಲೆನ್ಸ್‌, ಡೆಪ್ತ್ ಕೆಮರಾಗಳೆಂದು ವಿಭಾಗಿಸಲಾಗಿದೆ. ಈ ಎಲ್ಲ 4 ಕೆಮರಾಗಳ ಕೆಲಸಗಳು ಪ್ರತ್ಯೇಕ. ಕೆಮರಾ ಕಾರ್ಯವಿಧಾನದಲ್ಲಿನ ಪ್ರತಿಯೊಂದು ಲೆನ್ಸ್‌ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಸ್ಟ್ಯಾಂಡರ್ಡ್‌ ಅಥವಾ ಮೇನ್‌ ಲೆನ್ಸ್‌ ಎಂದಿನಂತೆ ಚಿತ್ರವನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಒಂದು ಕೆಮರಾ ಮೂಲ ವಸ್ತುವಿನ ಮೇಲೆ (ಸಬೆjಕ್ಟ್) ಕೇಂದ್ರೀಕೃತವಾದರೆ ಉಳಿದ ಕೆಮರಾಗಳು, ಬೆಳಕು, ಚಲನೆ ಹಾಗೂ ರೆಸಲ್ಯೂಶನ್‌ಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next