ನಿತ್ಯದ ಯೋಗ ತಪ್ಪಿಸಿ ಮೋದಿ ಹೋದದ್ದೆಲ್ಲಿಗೆ ? ಇಲ್ಲಿದೆ ರಹಸ್ಯ !
Team Udayavani, Jan 10, 2017, 11:53 AM IST
ಗಾಂಧಿನಗರ : ಪ್ರಧಾನಿ ನರೇಂದ್ರ ಮೋದಿ ಅವರಿಂದು ತಮ್ಮ ದೈನಂದಿನ ಯೋಗಾಭ್ಯಾಸವನ್ನು ಕೈಗೊಳ್ಳದೆ ಎಲ್ಲಿ ನಾಪತ್ತೆಯಾದರು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಇಲ್ಲಿನ ಮಹಾತ್ಮ ಮಂದಿರ್‌ನಲ್ಲಿಂದು 8ನೇ ಆವೃತ್ತಿಯ ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮ್ಮಿಟ್ ಉದ್ಘಾಟಿಸಲು ಇಲ್ಲಿಗೆ ಬಂದಿರುವ ನರೇಂದ್ರ ಮೋದಿ ತಮಗೆ ದೊರಕಿದ ಕಿಂಚಿತ್ ಕಾಲಾವಕಾಶವನ್ನು ಸದುಪಯೋಗಿಸಿಕೊಂಡು ರಾಜ್ಯದ ರಾಜಧಾನಿಗೆ ಸನಿಹದಲ್ಲೇ ಇರುವ ರೈಸಾನ್ ಗ್ರಾಮದಲ್ಲಿರುವ ತಮ್ಮ ತಾಯಿ, 97ರ ಹರೆಯದ ಹರಿಬಾ ಅವರನ್ನು ಭೇಟಿಯಾಗಲು ಅಲ್ಲಿಗೆ ಹೋದರು. ಅಲ್ಲಿ ಆಕೆಯೊಂದಿಗೆ ಕುಶಲೋಪರಿ ನಡೆಸಿ ಜತೆಯಾಗಿ ಬೆಳಗ್ಗಿನ ಉಪಾಹಾರ ಸೇವಿಸಿದರು.
ವಿದೇಶೀ ನಾಯಕರನ್ನು ಭೇಟಿಯಾಗಲು ಮಹಾತ್ಮ ಮಂದಿರಕ್ಕೆ ಹೋಗುವ ಮುನ್ನ ಮೋದಿ ಅವರು ಟ್ವೀಟ್ ಮಾಡಿ, “ದಿನನಿತ್ಯದ ಯೋಗಾಭ್ಯಾಸವನ್ನು ತಪ್ಪಿಸಿಕೊಂಡು ತಾಯಿಯನ್ನು ಕಾಣಲು ಹೋದೆ; ನಸುಕಿಗೆ ಮುನ್ನವೇ ಆಕೆಯೊಂದಿಗೆ ಉಪಾಹಾರ ಸೇವಿಸಿದೆ; ತಾಯಿಯೊಂದಿಗೆ ಕಳೆದ ಸಮಯವು ಅತ್ಯಮೋಘ ಮತ್ತು ಅತ್ಯಮೂಲ್ಯ’.
ನಿನ್ನೆ ಸೋಮವಾರ ಮೋದಿ ಅವರು ಗಾಂಧಿನಗರ ರೈಲ್ವೆ ಸ್ಟೇಶನ್‌ನ ಪುನರಭಿವೃದ್ಧಿ ಯೋಜನೆ, ವೈಬ್ರಂಟ್ ಗುಜರಾತ್ ಟ್ರೇಡ್ ಶೋ, ಗಿಫ್ಟ್ ಸಿಟಿಯಲ್ಲಿನ ಅಂತಾರಾಷ್ಟ್ರೀಯ ವಿನಿಮಯ ಮತ್ತು ಅಹ್ಮದಾಬಾದ್ ನಗರದ ಸಯನ್ಸ್ ಸಿಟಿಯಲ್ಲಿನ ನೊಬೆಲ್ ಪ್ರಶಸ್ತಿ ಎಗ್ಸಿಬಿಷನ್ ಉದ್ಘಾಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maha Kumbh: ಪ್ರಯಾಗ್ ರಾಜ್ ನಲ್ಲಿ ಮತ್ತೆ ಬೆಂಕಿ… 15 ಟೆಂಟ್ ಗಳು ಬೆಂಕಿಗಾಹುತಿ
Burqa Row: ಪರೀಕ್ಷಾ ಕೇಂದ್ರಗಳಲ್ಲಿ ಬುರ್ಖಾ ನಿಷೇಧಿಸಿ..: ಮಹಾ ಸಚಿವ
Yamuna Poisoning Row: ಧೈರ್ಯವಿದ್ದರೆ ಈ ನೀರನ್ನು ಕುಡಿಯರಿ: ಕೇಜ್ರಿವಾಲ್ ಸವಾಲು
ಅತ್ಯಾಚಾರ ಪ್ರಕರಣ: ಪತ್ರಿಕಾಗೋಷ್ಠಿ ನಡುವೆಯೇ ಕಾಂಗ್ರೆಸ್ ಸಂಸದನನ್ನು ಬಂಧಿಸಿದ ಪೊಲೀಸರು
ವಿದ್ಯಾರ್ಥಿಯನ್ನು ಮದುವೆಯಾದ ಪ್ರಾಧ್ಯಾಪಕಿ.. Video ವೈರಲ್ ಆಗುತ್ತಲೇ ಎಚ್ಚೆತ್ತ ಅಧಿಕಾರಿಗಳು