Advertisement

ಇದು ವಿಶ್ವದ ಅತ್ಯಂತ ದುಬಾರಿ ಬಿರಿಯಾನಿ…! ಬೆಲೆ ಎಷ್ಟು..?

01:08 PM Feb 23, 2021 | Team Udayavani |

ನೀವು ಬಿರಿಯಾನಿಯನ್ನು ಇಷ್ಟ ತುಂಬಾ ಇಷ್ಟ ಪಡುತ್ತೀರಾ..? ವಾರದಲ್ಲಿ ಎಷ್ಟು ದಿನ ಬಿರಿಯಾನಿಯನ್ನು ತಿನ್ನುತ್ತೀರಿ..? ಎಷ್ಟೆಲ್ಲಾ ವೆರೈಟಿ ಬಿರಿಯಾನಿಯನ್ನು ನೀವು ತಿಂದಿದ್ದೀರಿ..? ಧಮ್ ಬಿರಿಯಾನಿ, ರಾಜಸ್ಥಾನ್ ಬಿರಿಯಾನಿ, ಹೈದರಾಬಾದ್ ಚಿಕನ್ ಬಿರಿಯಾನಿ… ಇನ್ನೆಷ್ಟು ವೆರೈಟಿ …?

Advertisement

ನೀವು ಎಷ್ಟೇ ವೆರೈಟಿ ಬಿರಿಯಾನಿ ತಿಂದಿದ್ದರೂ ಕೂಡ ಈ ದುಬಾರಿ ಬಿರಿಯಾನಿಯನ್ನು ನೀವು ಖಂಡಿತಾ ತಿಂದಿರಲಿಕ್ಕೆ ಸಾಧ್ಯವೇ ಇಲ್ಲ. ದುಬಾರಿನಾ..? ಅದೆಷ್ಟು ರೂಪಾಯಿ ರೀ..? ನಾವು ತಿನ್ನದೇ ಇರುವ ಬಿರಿಯಾನಿ ಇದೆಯಾ..? ಅಂತ ನೀವು ಕೇಳ್ತಿದ್ರೆ.. ನಾವು ಹೌದು ಅಂತ ಹೇಳಲೆ ಬೇಕು..!

ಓದಿ : ಭಾರೀ ಕುಸಿತ ಕಂಡಿದ್ದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 300 ಅಂಕ ಜಿಗಿತ, ನಿಫ್ಟಿ 14,700

ಹೌದು, ಇದು ಇದುವರೆಗಿನ ಅತ್ಯಂದ ದುಬಾರಿ ಬಿರಿಯಾನಿ ಎಂದು ಹೇಳಿಸಿಕೊಳ್ಳುತ್ತಿದೆ.

ಎಲ್ಲಿ ಸಿಗುತ್ತದೆ ಈ ದುಬಾರಿ ಬಿರಿಯಾನಿ..?

Advertisement

ದುಬೈನ ಇಂಟರ್ ನ್ಯಾಷನಲ್ ಪೈನಾನ್ಶಿಯಲ್ ಸೆಂಟರ್ ನಲ್ಲಿರುವ ಬಾಂಬೆ ಬಾರೋ (Bombay Borough) ಎನ್ನುವ ಐಷರಾಮಿ ಹೋಟೆಲ್ ನಲ್ಲಿ ಈ ದುಬಾರಿ ರಾಯಲ್ ಗೋಲ್ಡ್ ಬಿರಿಯಾನಿ ಸಿಗುತ್ತದೆ. ಈ ಬಿರಿಯಾನಿಯ ಬೆಲೆ ಎಷ್ಟು ಕೇಳಿದ್ರೇ ನೀವು ನಿಜಕ್ಕೂ ಹುಬ್ಬೇರಿಸುತ್ತೀರಿ ಎನ್ನುವುದರಲ್ಲಿ ಸಂಶಯವಿಲ್ಲ.

ದುಬಾರಿ ಅಂದರೇ, ಇದರ ಬೆಲೆ ಎಷ್ಟು..?

ಹೌದು, ನಾವು ಈ ರಾಯಲ್ ಗೋಲ್ಡ್ ಬಿರಿಯಾನಿಯನ್ನು ದುಬಾರಿ ಬಿರಿಯಾನಿ ಎನ್ನುವುದಕ್ಕೂ ಕೂಡ ಕಾರಣವಿದೆ. ಇದರ ಬೆಲೆ ಆಕಾಶದೆತ್ತರದಲ್ಲಿದೆ. ನಿಮ್ಮಲ್ಲಿ ಆ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚುತ್ತಿದೆ ಎನ್ನುವುದು ನಮಗೂ ಗೊತ್ತಾಗುತ್ತಿದೆ. ಖಂಡಿತಾ ಹೇಳುತ್ತೇವೆ. ಎದೆ ಸಿಡಿದೀತು ಎಚ್ಚರ..!

ಈ ರಾಯಲ್ ಗೋಲ್ಡ್ ಬಿರಿಯಾನಿಯ ಬೆಲೆ 1000 ಧಿರಮ್ಸ್, ಇದನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿದರೇ, ಸುಮಾರು 19,709 ರೂ. 86 ಪೈಸೆ ಆಗುತ್ತದೆ.

ಯಾಕೆ ಇಷ್ಟು ದುಬಾರಿ ರಾಯಲ್ ಗೋಲ್ಡ್ ಬಿರಿಯಾನಿ..?

3 ಕೆಜಿ ತೂಕದಲ್ಲಿ ಬರುವ ಈ  ರಾಯಲ್ ಗೋಲ್ಡ್ ಬಿರಿಯಾನಿಯನ್ನು ದೊಡ್ಡ ಗೋಲ್ಡನ್ ಮೆಟಾಲಿಕ್ ಪ್ಲೇಟ್‌ ನಲ್ಲಿ ಅಲಂಕರಿಸಲಾಗುತ್ತದೆ. ಮತ್ತು ಚಿಕನ್ ಬಿರಿಯಾನಿ ರೈಸ್, ಕೀಮಾ ರೈಸ್, ಮತ್ತು ವೈಟ್ ಮತ್ತು ಕೇಸರಿ ಅಕ್ಕಿ ಸೇರಿದಂತೆ ಮೂರು ಬಗೆಯ ಅಕ್ಕಿಗಳೊಂದಿಗೆ ಆಲೂಗಡ್ಡೆ ಮತ್ತು ಬೇಯಿಸಿದ ಮೊಟ್ಟೆಗಳ ಸ್ವಾದ ಈ ಬಿರಿಯಾನಿಗಿದೆ.

ಓದಿ : ರೈತರ ಟ್ರ್ಯಾಕ್ಟರ್ ಪರೇಡ್ ಹಿಂಸಾಚಾರ : ಜಮ್ಮು ಮೂಲದ ಇಬ್ಬರು ಆರೋಪಿಗಳ ಬಂಧನ..!

ಈ ಬಿರಿಯಾನಿಯಲ್ಲಿ  ಮೂರು ಬಗೆಯ ಚಿಕನ್ ಗ್ರಿಲ್ಸ್-ಮಲೈ ಚಿಕನ್, ರಜಪೂತಾನ ಮುರ್ಗ್ ಸುಲಾ, ಮತ್ತು ಚಿಕನ್ ಮೀಟ್‌ ಬಾಲ್‌ ಗಳು ಸೇರಿವೆ. ಪ್ಲ್ಯಾಟರ್ನಲ್ಲಿ ಲ್ಯಾಂಬ್ ಚಾಪ್ಸ್ ಮತ್ತು ಲ್ಯಾಂಬ್ ಸೀಖ್ ಕಬಾಬ್, ಪುದೀನ, ಹುರಿದ ಗೋಡಂಬಿ, ದಾಳಿಂಬೆ ಮತ್ತು ಹುರಿದ ಈರುಳ್ಳಿಗಳಿಂದ ಅಲಂಕರಿಸಲಾಗುತ್ತದೆ. ಬೃಹತ್ ತಟ್ಟೆಯಲ್ಲಿ ನಿಹಾರಿ ಸಲಾನ್, ಜೋಧಪುರಿ ಸಲಾನ್, ಬಾದಾಮಿ ಸಾಸ್, ಬಾದಾಮಿ ಮತ್ತು ದಾಳಿಂಬೆ ರೈತಾ ಸೇರಿದಂತೆ ಮೂರು ಭಕ್ಷ್ಯಗಳನ್ನು ನೀಡಲಾಗುತ್ತದೆ.

ಒಟ್ಟಿನಲ್ಲಿ, ರಾಯಲ್ ಫ್ಯಾಮಿಲಿ ಪಾರ್ಟಿಗೆ ಈ ರಾಯಲ್ ಗೋಲ್ಡ್ ಬಿರಿಯಾನಿ ಹೇಳಿ ಮಾಡಿಸಿದ್ದು. ಹಾಗಂತ ರಾಯಲ್ ಫ್ಯಾಮಿಲಿಯವರಿಗೆ ಮಾತ್ರ ಸೀಮಿತವಲ್ಲ ಈ ಬಿರಿಯಾನಿ. ನೀವು ಕೂಡ ಟೇಸ್ಟ್ ಮಾಡಬಹುದು. ಆದರೇ ದುಬಾರಿ ಅಷ್ಟೇ. ನೀವು ದುಬೈಗೆ ಹೋದರೆ, ಈ ಬಿರಿಯಾನಿಯನ್ನು ಸವಿಯಲು ಪ್ರಯತ್ನಿಸಿ. ಟೇಸ್ಟ್ ಹೇಗಿದೆ ಎಂದು ನಮಗೂ ತಿಳಿಸಿ.

-ಶ್ರೀರಾಜ್ ವಕ್ವಾಡಿ  

ಓದಿ : ಜೇವರ್ಗಿ ತಾಲೂಕಿನಲ್ಲಿ “ಶೌಚಕ್ರಾಂತಿ’

 

 

 

 

 

Advertisement

Udayavani is now on Telegram. Click here to join our channel and stay updated with the latest news.

Next