Advertisement
ಪತ್ರಿಕಾಗೋಷ್ಠಿ ಆರಂಭದದಲ್ಲಿಯೇ ಜೈಪಾಲ್ ರೆಡ್ಡಿ ಕುರಿತು ಪ್ರಸ್ತಾಪಿಸಿದ ಅವರು, ಜೈಪಾಲ್ ರೆಡ್ಡಿಯವರು 69 ರಿಂದ 84 ವರೆಗೆ ಆಂಧ್ರಪ್ರದೇಶ ವಿಧಾನಸಭೆಗೆ ಆಯ್ಕೆಯಾಗಿದ್ದರು. ಐದು ಬಾರಿ ಲೋಕಸಭೆ ಸದಸ್ಯರಾಗಿ ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಕೇಂದ್ರ ಸಚಿವರಾಗಿ ಒಳ್ಳೆಯ ಆಡಳಿತ ನೀಡಿದ್ದರೆಂದು ಭಾವುಕರಾಗಿ ಹೇಳಿದರು. ಅವರು ನನ್ನ ಹಿರಿಯ ಸಹೋದರನ ರೀತಿ ಮಾರ್ಗದರ್ಶನ ನೀಡುತ್ತಿದ್ದರು. ಉತ್ತಮ ಸಂಸದೀಯ ಪಟುವಾಗಿದ್ದ ಅವರು ಇಂದು ನಿಧನರಾಗಿದ್ದಾರೆ. ಇಂದು ನನಗೆ ಅತ್ಯಂತ ದುಃಖದ ದಿನ. ಅತ್ಯಂತ ಪ್ರಾಮಾಣಿಕ ರಾಜಕಾರಣಿಯಾಗಿದ್ದ ಜೈಪಾಲ್ ರೆಡ್ಡಿ ಪಕ್ಷಾಂತ ನಿಷೇಧ ಕಾಯ್ದೆ ವಿಷಯದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದರು ಎಂದು ದುಃಖದಲ್ಲಿಯೇ ಹೇಳಿದರು. ಇದೇ ವೇಳೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿಬಸು, ಸೋಮನಾಥ ಚಟರ್ಜಿ, ಮೋಹನ್‌ಕುಮಾರ್ ಮಂಗಳಂ, ಇಂದ್ರಜಿತ್ ಗುಪ್ತಾ, ಚಂದ್ರಜಿತ್ ಯಾದವ್, ಮಧು ಲಿØಮೆ, ಜಾರ್ಜ್ ಫರ್ನಾಂಡಿಸ್, ಮಧು ದಂಡವತೆ ಅವರನ್ನು ನೆನೆದು, ಈ ವ್ಯಕ್ತಿಗಳೆಲ್ಲ ನಮ್ಮ ಸಂಸತ್ತಿನಲ್ಲಿ ಇದ್ದರಾ? ಈಗ ನಾವೆಲ್ಲಿದ್ದೇವೆ ಎಂಬ ಪ್ರಶ್ನೆ ಮೂಡುತ್ತಿದೆ ಎಂದರು.
ಬೆಂಗಳೂರು: ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಸೋಮವಾರದ ವಿಧಾನಸಭೆಯ ಕಲಾಪದ ನಂತರ ರಾಜೀನಾಮೆ ಸಲ್ಲಿಸುತ್ತಾರಾ? ಸ್ವತ: ರಮೇಶ್‌ಕುಮಾರ್ ಅವರೇ ಈ ಬಗ್ಗೆ ಸುಳಿವು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಬಿಎಸ್‌ಪಿ ಶಾಸಕ ಎನ್.ಮಹೇಶ್ ವಿರುದ್ಧವೂ ಅವರ ಪಕ್ಷದ ಸದಸ್ಯರು ದೂರು ಸಲ್ಲಿಸಿದ್ದಾರೆ. ಶನಿವಾರ ದೂರು ಸಲ್ಲಿಕೆಯಾಗಿದ್ದು, ಈ ಬಗ್ಗೆ ಮುಂದೆ ಬರುವವರು ನೋಡಿಕೊಳ್ಳುತ್ತಾರೆ ಎನ್ನುವ ಮೂಲಕ ಯಡಿಯೂರಪ್ಪ ಅವರ ವಿಶ್ವಾಸಮತ ಯಾಚನೆ ಹಾಗೂ ನಂತರ ನಡೆಯುವ ಧನ ವಿನಿಯೋಗ ವಿಧೇಯಕ ಅಂಗೀಕಾರವಾದ ಮೇಲೆ ತಾವು ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ. ಬಿಜೆಪಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೂ ಮೊದಲೇ ರಮೇಶ್ ಕುಮಾರ್ ಗೌರವಯುತವಾಗಿ ತಮ್ಮ ಹುದ್ದೆಯಿಂದ ನಿರ್ಗಮಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಸೋಮವಾರದ ವಿಶ್ವಾಸಮತಯಾಚನೆ ಹಾಗೂ ಧನ ವಿನಿಯೋಗ ವಿಧೇಯಕ ಅಂಗೀಕಾರದ ನಂತರ ಸ್ವಯಂ ಪ್ರೇರಿತರಾಗಿ ರಾಜೀನಾಮೆ ಸಲ್ಲಿಸಿ, ಸ್ಪೀಕರ್ ಹುದ್ದೆಯ ವಿದಾಯ ಭಾಷಣ ಮಾಡುವ ಸಾಧ್ಯತೆ ಹೆಚ್ಚಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ತೀರ್ಪಿನಲ್ಲಿ ಪಕ್ಷಪಾತ ಮಾಡಿಲ್ಲ
Related Articles
ಬೆಂಗಳೂರು: ‘ನಾನು ತೀರ್ಪು ನೀಡುವಲ್ಲಿ ಯಾವುದೇ ಪಕ್ಷಪಾತ ಮಾಡಿಲ್ಲ. ಹಿಂದಿನ ಎಲ್ಲ ಚರಿತ್ರಾರ್ಹ ತೀರ್ಪು, ಆಯಾಮಗಳನ್ನು ಗಮನಿಸಿ ಈ ತೀರ್ಪು ನೀಡಿದ್ದೇನೆ’ ಎಂದು ಸ್ಪೀಕರ್ ರಮೇಶ್‌ಕುಮಾರ್ ಹೇಳಿದರು.
Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದಲ್ಲಿ ಪಕ್ಷಾಂತರ ನಿಷೇಧದ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳ ಸ್ಪೀಕರ್‌ಗಳು ತೆಗೆದುಕೊಂಡ ತೀರ್ಮಾನ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶರದ್ ಯಾದವ್ ಪ್ರಕರಣದಲ್ಲಿ ತೆಗೆದುಕೊಂಡ ತೀರ್ಪು, ರವಿ ನಾಯ್ಕ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲಿನ ತೀರ್ಪು ಹಾಗೂ ತಮಿಳುನಾಡಿನಲ್ಲಿ ಎಐಎಡಿಎಂಕೆ ಶಾಸಕರು ರಾಜೀನಾಮೆ ಸಲ್ಲಿಸಿ ರಾಜ್ಯಪಾಲರ ಬಳಿ ತೆರಳಿದ ನಂತರ ಅಲ್ಲಿನ ಸ್ಪೀಕರ್ ತೆಗೆದುಕೊಂಡ ತೀರ್ಪು ಆಧರಿಸಿ 14 ಶಾಸಕರನ್ನು ಅನರ್ಹಗೊಳಿಸುವುದಾಗಿ ಹೇಳಿದರು.
ಅನರ್ಹಗೊಂಡ ಶಾಸಕರದ್ದು ಏನಾದರೂ ಆಕ್ಷೇಪಗಳಿದ್ದರೆ, ಅವರು ಕೋರ್ಟ್ ಮುಂದೆ ತಮ್ಮ ವಾದ ಮಾಡಲು ಅವಕಾಶವಿದೆ. ನನಗಿರುವ ಅಧಿಕಾರ ಹಾಗೂ ಕಾನೂನಿನ ಮಾಹಿತಿಯಡಿಯಲ್ಲಿ ಈ ತೀರ್ಮಾನ ಕೈಗೊಂಡಿದ್ದೇನೆ. ಅವರ ಮುಂದಿನ ಹೋರಾಟದ ಬಗ್ಗೆ ನಾನು ಮಾತನಾಡುವುದಿಲ್ಲ. ಅದಕ್ಕೆ ಕೋರ್ಟ್‌ಗಳಿವೆ ಎಂದರು