Advertisement

ಲಂಡನ್‌ ಹೊಟೇಲ್‌ ವಿರುದ್ಧ ತನಿಯಾ ಭಾಟಿಯಾ ಆಕ್ರೋಶ

11:24 PM Sep 28, 2022 | Team Udayavani |

ಹೊಸದಿಲ್ಲಿ: ಭಾರತೀಯ ವನಿತಾ ಕ್ರಿಕೆಟ್‌ ತಂಡದ ಆಟಗಾರ್ತಿ ತನಿಯಾ ಭಾಟಿಯಾ ಲಂಡನ್‌ನ “ಮಾರಿಯಟ್‌ ಹೊಟೇಲ್‌’ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕಳುವಿಗೆ ಸಂಬಂಧಿಸಿದಂತೆ ಸಲ್ಲಿಸಿದ ದೂರಿಗೆ ಈತನಕ ಯಾವುದೇ ಪ್ರತಿಕ್ರಿಯೆ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಮಾರಿಯಟ್‌ ಹೊಟೇಲ್‌ನ ಮೌನ ಧೋರಣೆಯಿಂದ ನಿರಾಸೆಯಾಗಿದೆ. ಹೊಟೇಲ್‌ ಆಡಳಿತ ಮಂಡಳಿ ಈವರೆಗೆ ನನ್ನ ದೂರಿಗೆ ಸ್ಪಂದಿಸಿಲ್ಲ. ಅಲ್ಲಿ ಕಳುವಾದುದೆಲ್ಲವೂ ಅಮೂಲ್ಯ ವಸ್ತುವಾಗಿದ್ದವು. ನನಗೆ ಇವುಗಳ ಅಗತ್ಯ ಬಹಳವಿತ್ತು. ಈ ಪ್ರಕರಣದ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಲಾಗಿದಯೇ? ಇದಕ್ಕೆ ಸಂಬಂಧಿಸಿದ ಬೆಳವಣಿಗೆಯ ಕುರಿತು ಮಾಹಿತಿಯೇನಾದರೂ ಲಭಿಸಿದರೆ ಅದು ಪ್ರಶಂಸನೀಯವೆನಿಸುತ್ತಿತ್ತು’ ಎಂಬುದಾಗಿ ತನಿಯಾ ಭಾಟಿಯಾ ಹೇಳಿದ್ದಾರೆ.

ಕಳೆದ ಇಂಗ್ಲೆಂಡ್‌ ಪ್ರವಾಸದ ವೇಳೆ ಲಂಡನ್‌ನ ಮಾರಿಯಟ್‌ ಹೊಟೇಲ್‌ನಲ್ಲಿ ತಂಗಿದ್ದ ವೇಳೆ ತನಿಯಾ ಭಾಟಿಯಾ ಕೋಣೆಯಲ್ಲಿ ಕಳುವಾಗಿತ್ತು. ಬೆಲೆಬಾಳುವ ಸೊತ್ತುಗಳನ್ನು ಕದ್ದೊಯ್ಯಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next