Advertisement

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

10:47 AM Dec 01, 2021 | Team Udayavani |

ವಾಷಿಂಗ್ಟನ್‌: ಟ್ವಿಟರ್‌ ಸಂಸ್ಥೆಯ ಸಿಇಒ ಸ್ಥಾನಕ್ಕೇರಿ ಸುದ್ದಿಯಲ್ಲಿರುವ ಭಾರತೀಯ ಮೂಲದ ಪರಾಗ್‌ ಅಗರ್ವಾಲ್‌ ಅವರ ತಿಂಗಳ ವೇತನ ಎಷ್ಟಿರಬಹುದು?

Advertisement

ಬರೋಬ್ಬರಿ 62.56 ಲಕ್ಷ ರೂ.! ಹೌದು, ಪರಾಗ್‌ಗೆ ಸಂಸ್ಥೆಯು ವಾರ್ಷಿಕವಾಗಿ 1 ಬಿಲಿಯನ್‌ ಡಾಲರ್‌(7.5 ಕೋಟಿ ರೂ.) ಸಂಬಳ ನೀಡಲಿದೆ. ಅಷ್ಟೇ ಅಲ್ಲ, ವಾರ್ಷಿಕವಾಗಿ ಬೇಸ್‌ ಸಂಬಳದ ಶೇ.150ರಷ್ಟು ಹಣವನ್ನು ಬೋನಸ್‌ ರೂಪದಲ್ಲಿ ನೀಡಲಾಗುವುದು. ಹಾಗೆಯೇ 12.5 ಮಿಲಿಯನ್‌ ಡಾಲರ್‌ ಮೌಲ್ಯದ ನಿಯಂತ್ರಿತ ಷೇರನ್ನು(ಆರ್‌ಎಸ್‌ಯು) ಕೂಡ ಪರಾಗ್‌ ಹೆಸರಿಗೆ ವರ್ಗಾಯಿಸಲಾಗಿದೆ.

ಪರಾಗ್‌ರ ಈ ಸಾಧನೆಯನ್ನು ದೇಶದ ಜನತೆ ಸಂಭ್ರಮಿಸುತ್ತಿದೆ. ವಿಶೇಷವೆಂದರೆ ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲಾನ್‌ ಮಸ್ಕ್ ಕೂಡ ಈ ಬಗ್ಗೆ ಟ್ವೀಟ್‌ ಮಾಡಿದ್ದು, “ಭಾರತೀಯ ಟ್ಯಾಲೆಂಟ್‌ಗಳಿಂದ ಅಮೆರಿಕಕ್ಕೆ ಸಾಕಷ್ಟು ಕೊಡುಗೆ ಸಿಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

10 ವರ್ಷದ ಹಳೆ ಟ್ವೀಟ್‌:
ಪರಾಗ್‌ ಟ್ವಿಟರ್‌ ಸಂಸ್ಥೆ ಸೇರಿ 10 ವರ್ಷ ಕಳೆದಿದೆ. 2011ರ ಅಕ್ಟೋಬರ್‌ನಲ್ಲಿ ಸಂಸ್ಥೆ ಸೇರಿದ್ದ ಪರಾಗ್‌ಗೆ, ಸಂಸ್ಥೆ ಡ್ರಿಂಕ್ಸ್‌ ಬಾಟೆಲ್‌ ಕೊಟ್ಟು, “ವೆಲ್‌ಕಮ್‌’ ಎಂದಿತ್ತು. ಅದನ್ನು ಪರಾಗ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ಬಹುಶಃ ನಾನು ಈ ಕೆಲಸವನ್ನು ಪ್ರೀತಿಸಬಹುದು’ ಎಂದು ಬರೆದುಕೊಂಡಿದ್ದರು. ಇದೀಗ ಅವರು ಅದೇ ಸಂಸ್ಥೆಯ ಅತ್ಯುನ್ನತ ಹುದ್ದೆಗೆ ಏರಿದ್ದಾರೆ. ಕೂಡಲೇ ನೆಟ್ಟಿಗರು ಅವರ ಟ್ವಿಟರ್‌ ಖಾತೆ ಕೆದಕಿದ್ದು, ಆ ಹಳೆಯ ಟ್ವೀಟ್‌ ಸಖತ್‌ ವೈರಲ್‌ ಆಗಿದೆ.

ಇದನ್ನೂ ಓದಿ:ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯರ ಮುಷ್ಕರ

Advertisement

ಶ್ರೇಯಾ ಫ್ರೆಂಡ್‌ ಪರಾಗ್‌:
ಇದೀಗ ವಿಶ್ವದಲ್ಲೇ ಹೆಸರಾಗಿರುವ ಪರಾಗ್‌, ಭಾರತದ ಹೆಸರಾಂತ ಗಾಯಕಿ ಶ್ರೇಯಾ ಘೋಷಾಲ್‌ ಅವರ ಬಾಲ್ಯದ ಸ್ನೇಹಿತ. ಈ ವಿಚಾರವನ್ನು ಶ್ರೇಯಾ 2010ರಲ್ಲೇ ಹೇಳಿಕೊಂಡಿದ್ದರು. “ಮತ್ತೊಬ್ಬ ಬಾಲ್ಯದ ಸ್ನೇಹಿತ ಸಿಕ್ಕಿದ್ದಾನೆ’ ಎಂದು ಟ್ವಿಟರ್‌ನಲ್ಲಿ ಪರಾಗ್‌ರನ್ನು ಟ್ಯಾಗ್‌ ಮಾಡಿದ್ದರು. ಅವರ ಫೋಟೋಗಳು ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next