Advertisement

ಇದು ಕಾಂಗ್ರೆಸ್‌ ಅಲ್ಲ, ಮೋದಿ ಸರಕಾರ: ಅಮಿತ್‌ ಶಾ

01:00 AM Feb 18, 2019 | Team Udayavani |

ಅಸ್ಸಾಂನ ಲಖೀಂಪುರದಲ್ಲಿ ಭಾನುವಾರ ರ್ಯಾಲಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಪುಲ್ವಾಮಾ ದಾಳಿಯನ್ನು ಪ್ರಸ್ತಾಪಿಸುತ್ತಲೇ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. “ಹಿಂದಿನ ಕಾಂಗ್ರೆಸ್‌ ನೇತೃತ್ವದ ಸರಕಾರದಂತೆ ನಾವು ಭದ್ರತಾ ವಿಚಾರದಲ್ಲಿ ಯಾವುದೇ ರೀತಿಯಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ. ನಮ್ಮ ಯೋಧರ ಬಲಿದಾನ ವ್ಯರ್ಥಗೊಳ್ಳಲು ಬಿಡುವುದಿಲ್ಲ. ಈಗ ಅಧಿಕಾರದಲ್ಲಿರುವುದು ಕಾಂಗ್ರೆಸ್‌ ಅಲ್ಲ. ನರೇಂದ್ರ ಮೋದಿ ಸರಕಾರ’ ಎಂದು ಶಾ ಗುಡುಗಿದ್ದಾರೆ. ಇದೇ ವೇಳೆ, ನಾವು ಅಸ್ಸಾಂ ಅನ್ನು ಮತ್ತೂಂದು ಕಾಶ್ಮೀರ ಆಗಲು ಬಿಡೆವು. ಅದಕ್ಕಾಗಿಯೇ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಜಾರಿ ಮಾಡಿದ್ದೇವೆ ಎಂದೂ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next