Advertisement

ಇದು ಗೂಡಲ್ಲ ಕಾರ್ಪೊರೆಟ್‌ ಕಂಪನಿ

12:30 AM Mar 14, 2019 | |

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ,
ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು,ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು…

Advertisement

ಒಂದು ಕಾರ್ಪೊರೆಟ್‌ ಕಂಪನಿ ಹೇಗಿರುತ್ತದೆ. ಅದಕ್ಕೆ ಹಗಲು ರಾತ್ರಿ ಎಬುದೇ ಇರುವುದಿಲ್ಲ. ದಿನದ 24 ಗಂಟೆಗಳ ಕಾಲವೂ ಕೆಲ ಕಂಪನಿಗಳು ಕೆಲಸ ಮಾಡುತ್ತಲೇ ಇರುತ್ತವೆ. ಬೆಳಗ್ಗಿನಿಂದ ರಾತ್ರಿಯವರೆಗೆ ಹಗಲು ಪಾಳಿಯವರು ಕೆಲಸ ಮಾಡಿದರೆ, ರಾತ್ರಿಯಿಂದ ಬೆಳಗ್ಗಿನವರೆಗೆ ರಾತ್ರಿ ಪಾಳಿಯವರು ಕೆಲಸ ಮಾಡುತ್ತಾರೆ. ಒಟ್ಟಿನಲ್ಲಿ ಕಂಪನಿಯ ಕೆಲಸ ನಡೆಯುತ್ತಲೇ ಇರುತ್ತದೆ. ಇದೇ ರೀತಿ ಕೆಲಸ ಮಾಡುವ ಕಂಪನಿಯೊಂದು ಕೀಟಜಗತ್ತಿನಲ್ಲಿದೆ. ಆ ಕಾರ್ಪೊರೆಟ್‌ ಸಂಸ್ಥೆ ಮತ್ಯಾವುದೂ ಅಲ್ಲ, ಇರುವೆ ಗೂಡು. ಇರುವೆಗಳು ಶ್ರಮಕ್ಕೆ ಹೆಸರಾದುದು ಎಂಬ ಸಂಗತಿ ಎಲ್ಲರಿಗೂ ತಿಳಿದಿರುತ್ತದೆ. ಅವು ತಮ್ಮ ನಿಮ್ಮಂತೆ ದಿನಕ್ಕೆ ಒಂದೆರಡು ಬಾರಿ ಗಂಟೆಗಳ ಕಾಲ ನಿದ್ದೆ ಹೋಗದೆ, ದಿನಕ್ಕೆಎ ಏನಿಲ್ಲವೆಂದರೂ 250 ಬಾರಿ, ಕೆಲವೇ ನಿಮಿಷಗಳಷ್ಟು ಕಾಲ ನಿದ್ದೆ ಹೋಗುತ್ತವೆ. ಈ ವ್ಯವಸ್ಥೆಯಿಂದ ಅವುಗಳಿಗೇ ಲಾಭ. ಈ ನಿದ್ರಾ ವ್ಯವಸ್ಥೆಯಿಂದಾಗಿ ದಿನದ ಯಾವುದೇ ಹೊತ್ತಿನಲ್ಲಿ ಶೇ. 80ರಷ್ಟು ಇರುವೆಗಳು ಕೆಲಸಕ್ಕೆ ಸದಾ ಸನ್ನದ್ಧರಾಗಿರುತ್ತವೆ. ಒಂದು ಕಾರ್ಪೊರೆಟ್‌ ಕಂಪನಿಯಲ್ಲಿ ದಿನದ ಯಾವುದೇ ಹೊತ್ಕತಿನಲ್ಲಿಯೂ ಸವಾಲುಗಳು ಎದುರಾಗಬಹುದು. ಮಧ್ಯರಾತ್ರಿಯ ಹೊತ್ತಿನಲ್ಲಿ ವಿದೇಶದಲ್ಲಿನ ಬ್ಯಾಂಕ್‌ಒಂದರ ಕಂಪ್ಯೂಟರ್‌ನಲ್ಲಿ ದೋಷ ಕಾಣಿಸಿಕೊಳ್ಳಬಹುದು. ಆಗ ಆ ತೊಂದರೆಯನ್ನು ಅಟೆಂಡ್‌ ಮಾಡಲು, ಅಂದರೆ ಅದಕ್ಕೊಂದು ಗತಿ ಕಾಣಿಸಲು ಒಬ್ಬರಾದರೂ ಕಚೇರಿಯಲ್ಲಿರುತ್ತಾರೆ. ಅದೇ ರೀತಿ ಇರುವೆಗೂಡಿನಲ್ಲಿಯೂ ಯಾವುದೇ ತೊಂದರೆ ಎದುರಾದರೂ ಒಂದಲ್ಲ ಒಂದು ಇರುವೆ ಎಚ್ಚರದಿಂದಿರುತ್ತದೆ. ಕೆಲ ಇರುವೆಗಳು ನಿದ್ದೆ ಹೋದರೂ ಅದರ ಸ್ತಾನವನ್ನು ಎಚ್ಚರದಿಂದಿರುವ ಇರುವೆಗಳು ತುಂಬುತ್ತವೆ.

ಸ್ವಚ್ಛತೆಗೆ ಇದೇ ರಾಯಭಾರಿಯಾಗಬಹುದು!
ಕೆಲ ಸಮಯದ ಹಿಂದೆ ನಟ ಅಕ್ಷಯ್‌ ಕುಮಾರ್‌ ಅವರ “ಟಾಯ್ಲೆಟ್‌: ಎಕ್‌ ಪ್ರೇಂ ಕಥಾ’ ಎನ್ನುವ ಸಿನಿಮಾ ಬಂದಿತ್ತು. ಬಯಲು ಶೌಚವನ್ನು ನಿಷೇಧಿಸಿ ಪ್ರತಿ ಮನೆಯೂ ಶೌಚಾಲಯವನ್ನು ಹೊಂದಿರಬೇಕು ಎನ್ನುವುದು ಆ ಸಿನಿಮಾದ ಕತೆಯಾಗಿತ್ತು. ಅದಕ್ಕೂ ಮೊದಲೇ ನಟ ಆಮೀರ್‌ ಖಾನ್‌ ಸ್ವಚ್ಛತಾ ಅರಿವು ಮೂಡಿಸುವ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಇವೆಲ್ಲದರಿಂದ ನಮ್ಮಲ್ಲಿ ಸ್ವಚ್ಛತೆ ಕುರಿತು ಅರಿವನ್ನು ಮೂಡಿಸುವ ವಿವಿಧ ಕೆಲಸಗಳಂತೂ ಆಗುತ್ತಿದೆ ಎಂದು ತಿಳಿಯಬಹುದು.
  
ಈ ಒಂದು ಪ್ರಾಣಿಯ ಒಂದು ಸ್ವಭಾವ ತಿಳಿದರೆ ಅದನ್ನು ಸ್ವಚ್ಛತಾ ಅಭಿಯಾನಕ್ಕೆ ರಾಯಬಾರಿಯಾಗಿಸಿದರೆ ಅದರಲ್ಲಿ ಅನುಮಾನವಿಲ್ಲ. ಈ ಪ್ರಾಣಿ ಸ್ಲಾತ್‌. ಆ ಸ್ವಾರಸ್ಯಕರ ಸ್ವಭಾವ ಎಂದರೆ ಅದು 8ರಿಂದ 10 ದಿನಗಳಿಗೊಮ್ಮೆ ಮಾತ್ರ ಶೌಚಕ್ಕೆ ಹೋಗುವುದು. ದಿನಕ್ಕೊಮ್ಮೆಯಾದರೂ ಹೋಗುವವರಿಗೆ ಈ ಸ್ವಭಾವ ಅಚ್ಚರಿಯಾಗಿ ಕಾಣಬಹುದು. ಒಂದು ವಿಷಯವೆಂದರೆ ಅದು ಸ್ವಚ್ಛತೆ ಕಾಪಾಡಲು ಹಾಗೆ ಮಾಡುತ್ತಿಲ್ಲ ಎನ್ನುವುದು. ಅದರ ಜೀರ್ಣಕ್ರಿಯೆ ಬಹಳ ನಿಧಾನ. ತಿಂದ ಆಹಾರವನ್ನು ಅರಗಿಸಿಕೊಳ್ಳಲೇ ಅದು 8 ದಿನಗಳ ಕಾಲ ತೆಗೆದುಕೊಳ್ಳುತ್ತದೆ. ಅದಕ್ಕೇ ಸ್ಲಾತ್‌ಗಳು 8 ದಿನಗಳಿಗೊಮ್ಮೆ ಶೌಚಕ್ಕೆ ಹೋಗುವುದು. ಈ ಪ್ರಾಣಿ ನಮ್ಮ ನಡುವೆಯಂತೂ ಇಲ್ಲ. ದಕ್ಷಿಣ ಅಮೆರಿಕ ಮತ್ತು ಮಧ್ಯ ಅಮೆರಿಕ ಪ್ರಾಂತ್ಯಗಳಲ್ಲಿ ಕಂಡುಬರುತ್ತದೆ. 

– ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next