Advertisement
ಅವಳನ್ನು ಪರೀಕ್ಷಿಸಿದ ಕೃಷ್ಣನ್ ಸ್ವಾಮಿನಾಥನ್, ಆ ಹುಡುಗಿ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂಬುದನ್ನು ಗಮನಿಸಿದರು. ಅವರು ಎಂಡೋಕ್ರಿನೊಲೊಜಿಸ್ಟ್ ಹಾಗೂ ಕೊಯಂಬತ್ತೂರಿನ ಕೊವೈ ವೈದ್ಯಕೀಯ ಕೇಂದ್ರ ಮತ್ತು ಆಸ್ಪತ್ರೆಯ ಅಧ್ಯಕ್ಷರು. ನಾವು ಹುಡುಗಿಯ ರಕ್ತ ಮತ್ತು ಮೂತ್ರವನ್ನು ಪುನಃ ವೈದ್ಯಕೀಯವಾಗಿ ಪರೀಕ್ಷಿಸಿದೆವು. ಆಗ ಅವೆರಡರಲ್ಲೂ ಒಂದು ಆರ್ಗನೋಫೋಸ್ಪೇಟಿನ (ಓಪಿ) ಅಧಿಕ ಪ್ರಮಾಣದ ಉಳಿಕೆ ಪತ್ತೆಯಾಯಿತು.
Related Articles
Advertisement
ಈ ಅಧ್ಯಯನದ ಫಲಿತಾಂಶಗಳು ಜಗತ್ತಿನ ಡಯಬಿಟಿಸ್ ರಾಜಧಾನಿ ಆಗಿರುವ ಭಾರತಕ್ಕೆ ಮುಖ್ಯವಾಗಿವೆ. 2015ರಲ್ಲಿ ನಮ್ಮ ದೇಶದ ಡಯಬಿಟಿಸ್ ಬಾಧಿತರ ಸಂಖ್ಯ 69 ಲಕ್ಷ$. ಈ ವರೆಗೆ ಡಯಬಿಟಿಸ್ ಪ್ರಧಾನವಾಗಿ ನಗರವಾಸಿಗಳನ್ನು ಬಾಧಿಸುತ್ತದೆ ಎಂದು ಪರಿಗಣಿಸಲಾಗಿತ್ತು. ಈಗ, ಆರ್ಗನೋಫೋಸ್ಪೇಟ್ ಕೀಟನಾಶಕಗಳ ಹೆಚ್ಚುತ್ತಿರುವ ಮತ್ತು ವಿವೇಚನಾರಹಿತ ಬಳಕೆಯಿಂದಾಗಿ, ಗ್ರಾಮೀಣ ಭಾರತದಲ್ಲಿಯೂ ಡಯಬಿಟಿಸ್ ಬಾಧಿತರ ಸಂಖ್ಯೆ ಸ್ಫೋಟವಾಗುವ ಸಾಧ್ಯತೆಯಿದೆ.
ಆರ್ಗನೋಫೋಸ್ಪೇಟ್ ಕೀಟನಾಶಕಗಳು ಅಧಿಕ ಪ್ರಮಾಣದಲ್ಲಿ ಶರೀರ ಸೇರಿದರೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಹಲವು ಅಧ್ಯಯನಗಳು ದೃಢೀಕರಿಸಿವೆ. 2015ರಲ್ಲಿ ಕ್ಯಾನ್ಸರ್ ಸಂಶೋಧನೆಯ ಅಂತರರಾಷ್ಟ್ರೀಯ ಏಜೆನ್ಸಿ ಹೀಗೆಂದು ಘೋಷಿಸಿದೆ: ಟೆಟ್ರಾಕ್ಲೊರ್ವಿನಾ#ಸ್, ಪಾರಾಥಿಯಾನ್, ಮಲಾಥಿಯಾನ್, ಡೈಯಾಜಿನೊನ್ ಮತ್ತು ಗ್ಲೆ„ಫೋಸ್ಪೇಟ… ಇಂತಹ ಆರ್ಗನೋಫೋಸ್ಪೇಟ… ಕೀಟನಾಶಕಗಳು ಕ್ಯಾನ್ಸರಿಗೆ ಕಾರಣ (ಕಾರ್ಸಿನೋಜೆನ್ಸ…) ಪಾರ್ಕಿನ್ಸನ್ ರೋಗ ಮತ್ತು ಅಲ್ಜಿಮೇರ್ಸ್ ರೋಗ- ಇಂತಹ ನರದೌರ್ಬಲ್ಯ ರೋಗಗಳಿಗೆ ಆರ್ಗನೋಫೋಸ್ಪೇಟುಗಳೂ ಕಾರಣವೆಂದು ಇಂತಹ ಹಲವಾರು ಅಧ್ಯಯನಗಳು ತೋರಿಸಿಕೊಟ್ಟಿವೆ. ಈ ವಿಷಭರಿತ ಕೀಟನಾಶಕಗಳು ಶಿಶುಗಳಲ್ಲಿ ಮತ್ತು ಎಳೆಯ ಮಕ್ಕಳಲ್ಲಿ ನರದೌರ್ಬಲ್ಯಗಳಿಗೆ ಕಾರಣವೆಂಬುದೂ ಅಧ್ಯಯನಗಳಿಂದ ತಿಳಿದು ಬಂದಿದೆ.
ಆರ್ಗನೋಫೋಸ್ಪೇಟ… ಕೀಟನಾಶಕಗಳು ಡಯಬಿಟಿಸ್, ನರಸಂಬಂಧಿ ರೋಗಗಳು ಮತ್ತು ಕ್ಯಾನ್ಸರಿಗೆ ಕಾರಣವೆಂದು ಅನೇಕ ಅಧ್ಯಯನಗಳು ಸ್ಪಷ್ಟವಾಗಿ ಘೋಷಿಸಿದ್ದರೂ ನಮ್ಮ ದೇಶದಲ್ಲಿ ಏನಾಗುತ್ತಿದೆ?
ಪೀಡೆನಾಶಕಗಳ ಬಳಕೆಯನ್ನು ನಿಯಂತ್ರಿಸಬೇಕಾದ ಕೇಂದ್ರ ಕೀಟನಾಶಕಗಳ ನಿಗಮ ಮತ್ತು ನೋಂದಾವಣೆ ಸಮಿತಿ, 20 ಅಕ್ಟೋಬರ್ 2015ರಲ್ಲಿ ಎರಡು ಓಪಿ ಕೀಟನಾಶಕಗಳನ್ನು ನಿಷೇಧಿಸಿದೆ ಮತ್ತು ಬೇರೆ ನಾಲ್ಕು ಓಪಿ ಕೀಟನಾಶಕಗಳ ಬಳಕೆಗೆ ನಿರ್ಬಂಧ ಹೇರಿದೆ. ಆ ನಾಲ್ಕರಲ್ಲಿ ಮಿಥೈಲ… ಪಾರಾಥಿಯಾನ್ ಬಳಕೆಯನ್ನು ಹಣ್ಣು ಮತ್ತು ತರಕಾರಿಗಳಲ್ಲಿ ಹಾಗೂ ಮೊನೊಕ್ರೊಟೊಫೋಸ್ ಬಳಕೆಯನ್ನು ತರಕಾರಿಗಳಲ್ಲಿ ನಿಷೇಧಿಸಲಾಗಿದೆ.
ಆದರೆ, ತಮಿಳುನಾಡು ಹಾಗೂ ಇತರ ರಾಜ್ಯಗಳ ರೈತರು ಇವನ್ನು ಜಬರದಸ್ತಿನಿಂದ ಬಳಸುತ್ತಿ¨ªಾರೆ. ಹಾಗೆ ಬಳಸುವಾಗ, ಅವರು ನಿಗದಿತ ಪ್ರಮಾಣದಲ್ಲಿ ಬೆಳೆಗಳ ಮೇಲೆ ಸಿಂಪಡಿಸುವ ಬಗ್ಗೆ ಮತ್ತು ತಮ್ಮ ಆರೋಗ್ಯರಕ್ಷಣೆಗಾಗಿ ಯಾವುದೇ ಸುರಕ್ಷಿತಾ ಕ್ರಮಗಳನ್ನು ಪಾಲಿಸುವುದಿಲ್ಲ. ನೀರಿನಲ್ಲಿ ಬೆರೆಸಿ ಸಿಂಪಡಿಸುವ ಈ ಮಾರಕ ವಿಷರಾಸಾಯನಿಕಗಳು, ಚರ್ಮ, ಮೂಗಿನ ಒಳಭಾಗ ಮತ್ತು ಉಸಿರಾಟದ ನಾಳಗಳ ಮೂಲಕ ಸುಲಭವಾಗಿ ಮನುಷ್ಯರ ದೇಹದೊಳಗೆ ಸೇರಿಕೊಳ್ಳುತ್ತಿವೆ.
ಸದ್ದಿಲ್ಲದೆ ಕೃಷಿಕರ ಸಹಿತ ಸಾವಿರಾರು ಜನರ ಸಾವಿಗೆ ಕಾರಣವಾಗುತ್ತಿರುವ ಆರ್ಗನೋಫೋಸ್ಪೇಟ… ಕೀಟನಾಶಕಗಳ ಭಯಂಕರ ಪರಿಣಾಮಗಳ ಬಗ್ಗೆ ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಅವುಗಳ ಬಳಕೆಯನ್ನೇ ಕೃಷಿಕರು ಕೈಬಿಡಬೇಕಾಗಿದೆ. ಜೀವಾಮೃತದಂತಹ ನೈಸರ್ಗಿಕ ಆರೋಗ್ಯವರ್ಧಕಗಳ ಮೂಲಕ ಸಸಿಗಳ, ಗಿಡಮರಗಳ ರೋಗ ಹಾಗೂ ಕೀಟ ನಿರೋಧಶಕ್ತಿ ಹೆಚ್ಚಿಸಿ, ಬೆಳೆಸಂರಕ್ಷಣೆ ಮಾಡಿಕೊಳ್ಳಬೇಕಾದ ಕಾಲ ಬಂದಿದೆ.
– ಅಡ್ಕೂರು ಕೃಷ್ಣರಾವ್