Advertisement

ಹೀಗೂ ಉಂಟು: ಕುಂದಾಪುರಕ್ಕೆ ಇನ್ನೂ ಸಿಕ್ಕಿಲ್ಲ ಸಚಿವ ಸ್ಥಾನದ ಭಾಗ್ಯ !

12:17 AM Apr 01, 2023 | Team Udayavani |

ಕುಂದಾಪುರ: 1952ರಿಂದ ಈವರೆಗೂ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದವರು ಸಚಿವರಾಗಿಲ್ಲ. ವಕ್ವಾಡಿ ಶ್ರೀನಿವಾಸ ಶೆಟ್ಟರು ವಿರೋಧ ಪಕ್ಷದ ನಾಯಕರಾಗಿದ್ದರು. ಕೆ. ಪ್ರತಾಪಚಂದ್ರ ಶೆಟ್ಟರು ವಿಧಾನಪರಿಷತ್‌ ಸದಸ್ಯರಾದ ಬಳಿಕ ಸಭಾಪತಿಯಾದರು. ಅದರ ಹೊರತಾಗಿ ಶಾಸಕರಾಗಿದ್ದವರಿಗೆ ಸಚಿವ ಪದವಿ ಹತ್ತಿರ ಹತ್ತಿರ ಬಂದು ಕೈ ತಪ್ಪಿದ್ದೇ ಹೆಚ್ಚು.

Advertisement

ಎಸ್‌. ಬಂಗಾರಪ್ಪ, ಎಸ್‌.ಎಂ. ಕೃಷ್ಣ ಸರಕಾರದಲ್ಲಿ ಕೆ. ಪ್ರತಾಪಚಂದ್ರ ಶೆಟ್ಟಿ , ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ ಅವಧಿಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೆಸರು ಸಂಪುಟ ಸಚಿವರ ಪಟ್ಟಿಯಲ್ಲಿ ಅಂತಿಮ ಎಂದೇ ಸುದ್ದಿಯಾಗಿತ್ತು. ಆದರೆ ಈಡೇರಲೇ ಇಲ್ಲ. ಕುಂದಾಪುರ ಕ್ಷೇತ್ರದ ಮತದಾರರಾಗಿರುವ ಕೆ. ಜಯಪ್ರಕಾಶ್‌ ಹೆಗ್ಡೆ ಅವರು ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಸಚಿವರಾಗಿದ್ದರು. ಕೋಟ ಶ್ರೀನಿವಾಸ ಪೂಜಾರಿ ಅವರು ವಿಧಾನ ಪರಿಷತ್‌ಗೆ ಆಯ್ಕೆಯಾಗಿ ಸಚಿವರಾಗಿದ್ದರು. ಇವರಿಬ್ಬರೂ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದವರಲ್ಲ. ಹೀಗಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದವರಿಗೆ ಸಚಿವ ಪದವಿ ಇನ್ನೂ ಕನಸಾಗಿಯೇ ಉಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next