Advertisement

ಇದೊಂದು ಶ್ರೇಷ್ಠ ದಿನ; ಬಿ.ಎಲ್‌.ಸಂತೋಷ್‌

11:35 PM Nov 09, 2019 | Team Udayavani |

ಬೆಂಗಳೂರು: ಸುಪ್ರೀಂಕೋರ್ಟ್‌ ತೀರ್ಪನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಸ್ವಾಗತಿಸಿದ್ದಾರೆ.

Advertisement

ಸುಪ್ರೀಂ ತೀರ್ಪು ಹೊರಬೀಳುತ್ತಿದ್ದಂತೆ ಅದನ್ನು ಸ್ವಾಗತಿಸಿ ಸಂತೋಷ್‌ ಅವರು ಟ್ವೀಟ್‌ ಮಾಡಿದ್ದಾರೆ. ಮೊದಲ ಟ್ವೀಟ್‌ನಲ್ಲಿ, “ಗೌರವಾನ್ವಿತ ಸುಪ್ರೀಂ ಕೋರ್ಟ್‌ ಇಂದು ಸರ್ವಾನುಮತದಿಂದ ಶ್ರೀ ರಾಮ ಜನ್ಮಭೂಮಿ ಸಂಬಂಧ ತೀರ್ಪು ಪ್ರಕಟಿಸಿದೆ. ಸರ್ವಾನುಮತ, ನ್ಯಾಯ, ನಿರಾಳತೆ, ಸತ್ಯದ ಮೇಲಿನ ಅವಲಂಬನೆ, ಸತ್ಯವನ್ನು ಎತ್ತಿ ಹಿಡಿಯುವುದು… ಹೀಗೆ ನಾನಾ ರೀತಿಯಲ್ಲಿ ಇದನ್ನು ಸ್ವಾಗತಿ ಸಬಹುದು. ಇದೊಂದು ಶೇಷ್ಠ ದಿನ…’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಎರಡನೇ ಟ್ವೀಟ್‌ನಲ್ಲಿ, “ಒಂದು ವಿಷಯವಂತೂ ಖಾತರಿ. ಪ್ರಭು ಶ್ರೀ ರಾಮಚಂದ್ರನ ಮೌಲ್ಯಾಧಾರಿತ ವ್ಯಕ್ತಿತ್ವ ಹಾಗೂ ಶತಮಾನಗಳಿಂದ ಸಮಾಜದ ಎಲ್ಲ ವರ್ಗದ ರಾಮಭಕ್ತರ ಉದ್ದೇಶಿತ ಪ್ರಯತ್ನಗಳ ಫ‌ಲವಾಗಿ ಇದು ಸಾಕಾರಗೊಂಡಿದೆ. ಭಾರತೀಯ ಸಮಾಜದ ಸ್ವಭಾವ ವಿನಮ್ರ ಹಾಗೂ ಉದಾರವಾದುದು. ಈ ಹೊತ್ತಿನಲ್ಲಿ ನಮ್ಮ ವಿನಮ್ರತೆ ಹಾಗೂ ಔದಾರ್ಯ ಇಮ್ಮಡಿಯಾಗಬೇಕು’ ಎಂದು ಹೇಳಿದ್ದಾರೆ. ತೀರ್ಪಿನ ಬಗ್ಗೆ ಅಪಸ್ವರ ಎತ್ತುವವರ ವಿರುದ್ಧ ತಮ್ಮ ಮೂರನೇ ಟ್ವೀಟ್‌ನಲ್ಲಿ ಬಿ.ಎಸ್‌.ಸಂತೋಷ್‌ ಪ್ರಸ್ತಾಪಿಸಿದ್ದಾರೆ.

“ಪ್ರಕರಣದ ಅರ್ಜಿದಾರರಾಗಿದ್ದ ಸುನ್ನಿ ವಕ್ಫ್ ಬೋರ್ಡ್‌ ಹಾಗೂ ಇಕ್ಬಾಲ್‌ ಅನ್ಸಾರಿ ಅವರು ಅಯೋಧ್ಯೆ ತೀರ್ಪನ್ನು ಸ್ವಾಗತಿಸಿದ್ದು, ಈ ಸಂಬಂಧ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಪ್ರಕಟಿಸಿದ್ದಾರೆ. ಆದರೂ ಕೆಲ ಜಾತ್ಯತೀತತೆಯ ಬಾವುಟ ಹಿಡಿದವರು ಹಾಗೂ ಉದಾರವಾದಿಗಳು ಸುದ್ದಿ ವಾಹಿನಿಗಳ ಚರ್ಚಾಗೋಷ್ಠಿ ಯಲ್ಲಿ ಈ ವಿಚಾರವನ್ನು ಇನ್ನೂ ವಿವಾದಾತ್ಮಕವಾಗಿ ಜೀವಂತವಾ ಗಿಡುವ ಪ್ರಯತ್ನ ಮಾಡುತ್ತಿರುವಂತೆ ಕಾಣುತ್ತಿದೆ. ಈಗ ದೇಶ ಅವರನ್ನು ಇನ್ನಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆ’ ಎಂದು ಕುಟುಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next