ವಾಷಿಂಗ್ಟನ್ : ಆ್ಯಪಲ್ ಐಪೋನ್ ಗಳಲ್ಲಿ ಅಡ್ವಾನ್ಸ್ಡ್ ಫೀಚರ್ಸ್ ಗಳಿವೆ. ಇತ್ತೀಚೆಗೆ ತಾನು ಗರ್ಭಣಿಯಾಗಿದ್ದೆನೆಂದು ಯುವತಿಯೊಬ್ಬಳಿಗೆ ಆಕೆಯ ಬಿಪಿ ಪತ್ತೆ ಹಚ್ಚಿಯೇ ಆ್ಯಪಲ್ ವಾಚ್ ಸಂದೇಶ ನೀಡಿದ್ದು, ಈಗ ಇಂಥದ್ದೇ ಮತ್ತೊಂದು ಘಟನೆ ನಡೆದಿದೆ.
ಇತ್ತೀಚೆಗೆ ಅಮೆರಿಕಾದ ಗ್ರ್ಯಾಂಡ್ ಕ್ಯಾನ್ಯನ್ ಪ್ರದೇಶದಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಅಪಘಾತವಾದಾಗ ಜೀವ ಉಳಿಸಲು ಆ್ಯಪಲ್ ಐಪೋನ್ ನಲ್ಲಿನ ಒಂದು ಫೀಚರ್ ನೆರವಾಗಿದೆ.
ಇಬ್ಬರು ಸ್ನೇಹಿತರು ಕಾರಿನಲ್ಲಿ ಸಂಚರಿಸುತ್ತಿದ್ದಾಗ ಗ್ರ್ಯಾಂಡ್ ಕ್ಯಾನ್ಯನ್ ಪ್ರದೇಶದಲ್ಲಿ ನಿಯಂತ್ರಣ ತಪ್ಪಿ ಕಾರು ಅಂದಾಜು 300 ಅಡಿ ಆಳಕ್ಕೆ ಬಿದ್ದಿದೆ. ಕಾರಿನಲ್ಲಿದ್ದ ಇಬ್ಬರಿಗೂ ಗಾಯಗಳಾಗಿದ್ದು, ಆ ಪರಿಸ್ಥಿತಿಯಲ್ಲಿ ಇಬ್ಬರೂ ಯಾವ ಕರೆಗಳನ್ನು ಮಾಡುವ ಸ್ಥಿತಿಯಲ್ಲಿರಲಿಲ್ಲ. ಆಳದಲ್ಲಿ ಬಿದ್ದಿದ್ದರಿಂದ ನೆಟ್ ವರ್ಕ್ ಕೂಡ ಸಿಗುವುದಿಲ್ಲ.
ಈ ಸಂಕಷ್ಟದ ಸಮಯದಲ್ಲಿ ನೆರವಾದದ್ದು, ಗಾಯಾಳುಗಳ ಬಳಿಯಿದ್ದ ಐಫೋನ್ 14 ಮೊಬೈಲ್.! ಅಪಘಾತದ ರಭಸಕ್ಕೆ ಐಫೋನ್ ನಲ್ಲಿನ ಕ್ರ್ಯಾಶ್ ಪತ್ತೆ ಡಿಟೆಕ್ಷನ್ ಓಪನ್ ಆಗಿ ಸ್ಯಾಟ್ ಲೈಟ್ ಸಂದೇಶವನ್ನು ಆ್ಯಪಲ್ ಕೇಂದ್ರಕ್ಕೆ ಕಳುಹಿಸಿದೆ, ಅಲ್ಲಿಂದ ಆ್ಯಪಲ್ ಕೇಂದ್ರ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದೆ.
ಅಧಿಕಾರಿಗಳು ಬಂದು ಹೆಲಿಕಾಪ್ಟರ್ ಮೂಲಕ ಇಬ್ಬರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ಷಣಾ ಕಾರ್ಯಚರಣೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.