Advertisement

UV Fusion: ಬಿರು ಬೇಸಿಗೆಯ ಸ್ವಾಭಾವಿಕ ಚಪ್ಪರ ಈ ಹೊಂಗೆ ಮರ

10:59 AM Apr 27, 2024 | Team Udayavani |

ಇತ್ತೀಚಿನ ಹವಾಮಾನ ಏರಿಳಿತದ ಕಾರಣ ಯಾವಾಗ ಬೇಕಾದರೂ ಹವಾಮಾನ ಏರು ಪೇರುಗಾಬಹುದು. ಪ್ರಸ್ತುತ ಹೆಚ್ಚಾಗುತ್ತಿರುವ ಜಾಗಾತಿಕ ತಾಪಮನದಿಂದ ಬಿಸಿಲ್ಲಿನ ಪ್ರಮಾಣ ಹೆಚ್ಚಾಗಿದ್ದು ದಾರಿಯಲ್ಲಿ ನಡೆದಾಡಲು ತೊಂದರೆಯಾಗುತ್ತಿದೆ. ಎಲ್ಲಿ ನೋಡಿದರೂ ಬಿಸಿಲಿನ ಬೇಗೆಯಲ್ಲಿ ಸುಡುತ್ತಿದ್ದು ತಂಪಾಗಿರುವ ಜಾಗವಿದ್ದರೆ ಅದು ಈ ಹೊಂಗೆ ಮರ ಮಾತ್ರ ಎಂದು ಹೇಳಬಹುದು.

Advertisement

ಬಡವರ ಮನೆ ಊಟ ಚೆಂದ ಹೊಂಗೆ ಮರದ ನಿದ್ದೆ ಚಂದ ವೆಂಬಗಾದೆ ಮಾತು ನೆನಪಿಗೆ ಬರುತ್ತದೆ. ಈ ಬಿಸಿಲಿಗೆ ಹೊಂಗೆ ಮರದ ಕೇಳಗೆ ನಿಂತರೆ ಸಾಕು, ತಣ್ಣಗಿರುವ ನೀರಿನಲ್ಲಿ ಮುಳುಗಿದಂತೆಯಾಗುವ ತಂಪಾದ ಗಾಳಿಯನ್ನು ಹೊಂಗೆ ಮರ ನೀಡುತ್ತದೆ. ಈ ಮರವು ವಸಂತ ಕಾಲದಲ್ಲಿ ಹೆಚ್ಚಾಗಿ ಕಾಣಿಸುವುದು ಸಾಮಾನ್ಯ ಹಾಗೆ ದಣಿದ ಜೀವಗಳ ಆಶ್ರಯ ತಾಣ ಮತ್ತು ಬಿರು ಬೇಸಿಗೆಯ ಸ್ವಾಭಾವಿಕ ಚಪ್ಪರ ಎಂದು ಕರೆಯಬಹುದು. ಹೊಂಗೆ ಮರ ಕೇವಲ ನೇರಳಿಗೆ ಮಾತ್ರವಲ್ಲದೆ ಹೊಂಗೆ ಮರವು ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದು ಹೊಂಗೆ ಮರದ ಬೀಜದಿಂದ ಮಧುಮೇಹ ನಿವಾರಣೆ, ತಲೆಯ ಕೂದಲಿನ ಉದುರಿವಿಕೆಯನ್ನು ತಡೆಯಲು, ಚರ್ಮ ರೋಗ, ಕೈಕಾಲು ಮತ್ತು ಕೀಲು ನೋವಿಗೆ ಇದರ ಎಣ್ಣೆಯನ್ನು ಬಳಸುತ್ತಾರೆ. ಅನೇಕ ವೈದ್ಯಕೀಯ ಕ್ಷೇತ್ರದಲ್ಲಿ ಇದ್ದನ್ನು ಬಳಸುವುದನ್ನು ಕಾಣಬಹುದು.

ಇದು ಸಾವಯವ ಕೃಷಿಗೆ ಪೂರಕವಾಗಿದ್ದು ಇದರ ಎಣ್ಣೆ ಯನ್ನು ವಾಹನಗಳಿಗೆ ಇಂಧನವಾಗಿ ಉಪಯೋಗಿಸಬಹುದು. ಹೊಂಗೆ ಮರ ಬಹಳ ಹಿಂದಿನ ಕಾಲದಿಂದಲೂ ಭಾರತೀಯರಿಗೆ ಚಿರಪರಿಚಿತವಿರುವ ಮರ.

ಸಂಸ್ಕೃತದಲ್ಲಿ ಕರಂಜ,ನಕ್ತಮಾಲ,ಆಂಗ್ಲ ಭಾಷೆಯಲ್ಲಿ ಇಂಡಿಯನ್‌ ಬೀಚ್‌ ಕನ್ನಡದಲ್ಲಿ ಹೊಂಗೆ ಮರ ಎಂದು ಕರೆಯುತ್ತಾರೆ. ರೈತರು ಗದ್ದೆ ಮತ್ತು ಹೊಲಗಳ ಬದಿಯಲ್ಲಿ, ನೀರಿನ ನಾಲೆಗಳ ಬದಿಯಲ್ಲಿ ಈ ಮರವನ್ನು ಬೆಳೆಸುವುದು, ಬರಡು ಪ್ರದೇಶಗಳಲ್ಲಿಯೂ ಚೆನ್ನಾಗಿ ಈ ಮರ ಬೆಳೆಯುತ್ತದೆ. ಕುಳ್ಳು ಕಾಂಡದ ಇದು ಹರಡಿ ವಿಸ್ತಾರವಾಗಿ ಬೆಳೆಯುವುದು ಜೊತೆಗೆ ಇದು ನಿತ್ಯಹಸುರಿನ ಮರ ಹಾಗೈ ಇದರ ವೈಜ್ಞಾನಿಕ ಹೆಸರು ಪೊಂಗಾಮಿಯಾ ಪಿನ್ನಾಟ. ಇದು ಲೆಗ್ಯುಮಿನೋಸೀ ಸಸ್ಯಕುಟುಂಬಕ್ಕೆ ಸೇರಿದೆ. ಬೇಗೆಯಲ್ಲಿ ಇದರ ನೆರಳು ಬಹುಹಿತ.

-ನಿತಿನ್‌

Advertisement

ಎಸ್‌ಡಿಎಂ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next