Advertisement

ದೋಸೆಗೂ ಬಂತು ಪ್ರಿಂಟರ್‌! ನಿಮಿಷಗಳಲ್ಲಿ ತಿಂಡಿ ಸಿದ್ಧ ಎನ್ನುತ್ತಿದೆ ಈ ಸ್ಟಾರ್ಟ್‌ಅಪ್‌

10:49 AM Aug 25, 2022 | Team Udayavani |

ಚೆನ್ನೈ: ಹದವಾಗಿ ದೋಸೆ ಮಾಡುವುದೂ ಒಂದು ಕಲೆ. ಆದರಿದು ತಂತ್ರಜ್ಞಾನದ ಯುಗ. ದೋಸೆಯನ್ನೂ ಶುಚಿ, ರುಚಿಯಾಗಿ ತಯಾರಿಸಿಕೊಡಲು ಸಾಧನವೊಂದನ್ನು ಚೆನ್ನೈನ ಸ್ಟಾರ್ಟ್‌ಅಪ್‌ ತಯಾರಿಸಿದೆ!

Advertisement

ಎವೊಚೆಫ್ ಹೆಸರಿನ ಸ್ಟಾರ್ಟ್‌ಅಪ್‌ ವಿಶ್ವದ ಮೊದಲ ಸ್ಮಾರ್ಟ್‌ ದೋಸೆ ಮೇಕರ್‌ ಅನ್ನು ತಯಾರಿಸಿದೆ.

ಈ ದೋಸೆ ಮೇಕರ್‌ನಲ್ಲಿ ನೀವು ದೋಸೆ ಹಿಟ್ಟು ಹಾಕಿಬಿಟ್ಟರೆ ಸಾಕು. ನಿಮಿಷಗಳಲ್ಲಿ ಚೌಕಾಕಾರದ ದೋಸೆ ಸಿದ್ಧವಾಗಿಬಿಡುತ್ತದೆ. ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಒಂದಿಷ್ಟು ಮಂದಿ ಇದನ್ನು ಕೊಂಡಾಡಿದ್ದರೆ, ಹಲವರು “ಅವಶ್ಯಕತೆಯೇ ಇಲ್ಲದ ಸಾಧನ’ ಎಂದು ದೂರಿದ್ದಾರೆ.

ಈ ದೋಸೆ ಮೇಕರ್‌ನಲ್ಲಿ ಹಿಟ್ಟನ್ನು ಹಾಕಿದರೆ ಸಾಕು. ಮಾಮೂಲಿ ಪ್ರಿಂಟರ್‌ಗಳಂತೆಯೇ ಇದು ದೋಸೆಯನ್ನೇ ಪ್ರಿಂಟ್‌ ಮಾಡಿಕೊಟ್ಟುಬಿಡುತ್ತದೆ. ದೋಸೆ ಎಷ್ಟು ದಪ್ಪವಿರಬೇಕು, ಎಷ್ಟು ಕ್ರಿಸ್ಪಿಯಾಗಿರಬೇಕು, ಎಷ್ಟು ಹೊತ್ತು ಕಾಯಿಸಬೇಕು ಎನ್ನುವುದನ್ನೂ ನೀವು ಈ ಮೇಕರ್‌ನಲ್ಲಿ ಸೆಟ್‌ ಮಾಡಿಕೊಳ್ಳಬಹುದು.

ಕೊಳ್ಳುವುದು ಹೇಗೆ?
ಸದ್ಯ ಈ ದೋಸೆ ಮೇಕರ್‌ ಅನ್ನು ಎವೊಚೆಫ್ ವೆಬ್‌ಸೈಟ್‌ನಲ್ಲಿ ಖರೀದಿಸಬಹುದು. ವಿಶೇಷವಾಗಿ ಮನೆಯಿಂದ ದೂರ ಇರುವವರಿಗಾಗಿಯೇ ಈ ಮೇಕರ್‌ ಅನ್ನು ಮಾಡಿರುವುದಾಗಿ ಹೇಳಿಕೊಂಡಿರುವ ಸಂಸ್ಥೆ ವಿಶ್ವಾದ್ಯಂತ ಇದರ ಡೆಲಿವರಿ ಮಾಡುವುದಾಗಿ ತಿಳಿಸಿದೆ. ನಾಲ್ಕು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿರುವ ಈ ದೋಸೆ ಮೇಕರ್‌ ಬೆಲೆ 15,999 ರೂ.

Advertisement
Advertisement

Udayavani is now on Telegram. Click here to join our channel and stay updated with the latest news.

Next